ಬೆಂಗಳೂರು:ಜನ ವಿರೋಧಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿಂಪಡೆಯದಿದ್ದರೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರಸ್ತೆ ಸಂಚಾರ ತಡೆ ನಡೆಸಲಿದ್ದೇವೆ. ಜೆಡಿಎಸ್ ಸೇರಿ ಎಲ್ಲ ಸಂಘಟನೆಗಳು, ಜನರನ್ನು ವಿಶ್ವಾಸಕ್ಕೆ ಪಡೆದು ಈ ಹೋರಾಟ ಮುಂದುವರಿಸುತ್ತೇವೆ ಎಂದು ರಾಜ್ಯ ಬಿಜೆಪಿ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.
ತೈಲ ಬೆಲೆ ಹೆಚ್ಚಳ ಖಂಡಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ‌ ಪ್ರತಿಭಟನಾ ಸಮಾವೇಶ ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ಜನರ ಹೊರಿಸಿರುವ ಭಾರ ಇಳಿಸುವ ತನಕ ಹೋರಾಟ ನಿಲ್ಲುವುದಿಲ್ಲವೆಂದು ಪುನರುಚ್ಚರಿಸಿದರು.
ಅವಿವೇಕದ, ಆತುರದ ನಿರ್ಧಾರ ಕೈಬಿಡದಿದ್ದರೆ ಸಿಎಂ ಸಿದ್ದರಾಮಯ್ಯ ಅವರೇ ನಿಮ್ಮ ಮಂತ್ರಿ ಮಂಡಲದ ಅಧಿಕಾರದ ದರ್ಪ ಇಳಿಸುವ, ಅಧಿಕಾರದಿಂದ ಕೆಳಗೆ ಇಳಿಸುವ ಶಕ್ತಿ ಜನರಿಗಿದೆ ಎಂದು ಗುಡುಗಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ ಕಸ ಗುಡಿಸುವವರಿರಿಗೆ ಸರ್ಕಾರ ಸಂಬಳ ಕೊಟ್ಟಿಲ್ಲ. ಬೆಂಗಳೂರಿನಲ್ಲಿ ಒಂದು ರಸ್ತೆ ಗುಂಡಿ ಮುಚ್ಚಿಲ್ಲ. ಅದೇನೊ ಬ್ರಾಂಡ್ ಬೆಂಗಳೂರು ಅಂತೆ. ಬೆಂಗಳೂರು ಭಾಗ ಮಾಡಲು ಹೊರಟಿದ್ದಾರೆ, ಹಾಗೇನಾದ್ರು ಆದರೆ ಜನರು ಕಾಂಗ್ರೆಸ್ ಭಾಗ ಮಾಡುತ್ತಾರೆ ಹುಷಾರ್ ಎಂದು ಅಬ್ಬರಿಸಿದರು.
ಸಿದ್ದರಾಮಯ್ಯ ನಾಲಾಯಕ್ ಮುಖ್ಯಮಂತ್ರಿ. ಆರ್ಥಿಕ ಇಲಾಖೆಯ ಶಿಫಾರಸಿನಂತೆ ಬೆಲೆ ಏರಿಸಿದ್ದೇವೆ ಎಂದು ಹೇಳುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಬಟ್ಟೆ, ಪುಸ್ತಕ ಕೊಟ್ಟಿಲ್ಲ, ಟೀಚರ್ ಗೆ ಸಂಬಳ ಕೊಡೋಕೆ ದುಡ್ಡಿಲ್ಲ. ಅಲಿಬಾಬ ಗ್ಯಾಂಗ್ ತರಹ ಲೂಟಿ ಮಾಡುತ್ತಿದ್ದಾರೆ ಇದನ್ನು ಇಲ್ಲಿಗೆ ಬಿಡಲ್ಲ, ಕೊನೆಯ ವರೆಗೆ ತೆಗೆದುಕೊಂಡು ಹೋಗುತ್ತೇವೆ ಎಂದರು.
ಬೆಲೆ ಏರಿಕೆ ಸಿದ್ದರಾಮಯ್ಯನ ಹುಚ್ಚಾಟ, ಕಾಂಗ್ರೆಸ್ ನವರು ದಿವಾಳಿಯಾಗಿದ್ದಾರೆ. ಕಾರ್ಪೊರೇಷನ್ ಆಫೀಸ್, ವಾರ್ಡ್ ಆಫೀಸ್ ಅಡ ಇಟ್ಟು ಬ್ಯಾಂಕ್ ನಿಂದ ಸಾಲ ತಗೊಳೋಕೆ ಹೊರಟಿದ್ದಾರೆ. ಈ ಸರ್ಕಾರ ತೆಗೆಯಲಿಲ್ಲವೆಂದರೆ ಸಿದ್ದರಾಮಯ್ಯ ಮುಂದಿನ ಬಜೆಟ್ ಮಂಡಿಸುವಾಗ ವಿಧಾನಸೌಧವನ್ನೂ ಅಡ ಇಡುತ್ತಾರೆ ಎಂದು ಆರ್.ಅಶೋಕ್ ಲೇವಡಿ ಮಾಡಿದರು.
ಇದೇ ವೇಳೆ ಕಾರ್ಯಕರ್ತರಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳು ಮೊಳಗಿದರು. ಟಾಂಗಾ, ಎತ್ತಿನ ಬಂಡಿಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಮುಖಂಡರು ಆಗಮಿಸಿದರು. ಸರ್ಕಾರದ ಅಣಕು ಶವಯಾತ್ರೆ ನಡೆಯಿತು.
ಪ್ರತಿಭಟನಾ ಸಮಾವೇಶದ ಬಳಿಕ ಎತ್ತಿನ ಬಂಡಿ, ಟಾಂಗಾದಲ್ಲಿ ಸಿಎಂ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಲು ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ತಡೆದರು. ಪಟ್ಟುಬಿಡದ ಮುಖಂಡರು ಸ್ವಲ್ಪ ಮುಂದಕ್ಕೆ ಹೋದ ಬಳಿಕ ಪೊಲೀಸರು ಬಂಧಿಸಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eighteen =
Remember me
