ಜಗತ್ತಿನಲ್ಲಿ ಶಿಕ್ಷಕರಿಗಿಂತ ಪವಿತ್ರ ವೃತ್ತಿ ಬೇರೊಂದಿಲ್ಲ. ತಾವು ಕಷ್ಟ-ಕಾರ್ಪಣ್ಯಗಳ ಬೆಂಕಿಯಲ್ಲಿ ಬೇಯುತ್ತಿದ್ದರೂ ಮಕ್ಕಳನ್ನು ಪುಟಕ್ಕಿಟ್ಟ ಚಿನ್ನದಂತೆ ರೂಪಿಸುವ ಮಹಾನುಭಾವರು ಅವರು. ಸಂಬಳಕ್ಕಾಗಿ ದುಡಿಯದೆ, ಮಕ್ಕಳ ಭವಿಷ್ಯ ರೂಪಿಸುವ ನಿಸ್ವಾರ್ಥ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ವಿಶಿಷ್ಟ ಸಮುದಾಯವೇ ಶಿಕ್ಷಕರು. ಕರೊನಾ ಸಂಕಷ್ಟದ ಸಂದರ್ಭದಲ್ಲೂ ಮಕ್ಕಳ ಭವಿಷ್ಯ ಮನೆಯ ನಾಲ್ಕು ಗೋಡೆಗಳ ನಡುವೆ ಮುರುಟಿಹೋಗದಂತೆ ಶಿಕ್ಷಕರು ವಹಿಸಿದ ಕಾಳಜಿ ಎಂದೆಂದಿಗೂ ಸ್ಮರಣೀಯ. ಕರೊನಾ ಕಾಲದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿನಿಂತು ನವನವೀನ ಪ್ರಯತ್ನ, ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪಿದ ಅನುಭವಗಳನ್ನು ನಾಡಿನ ಸಾವಿರಾರು ಶಿಕ್ಷಕರು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿಜಯವಾಣಿ ಜತೆ ಹಂಚಿಕೊಂಡಿದ್ದು, ಕೆಲವು ಆಯ್ದ ಅನುಭವಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ನಾಡಿನ ಎಲ್ಲ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನದ ಶುಭಾಶಯಗಳು.
ಪ್ರತಿಸ್ಪಂದನೆಯೇ ಇಲ್ಲದಿರೆ…
ಎಲ್ಲ ವೃತ್ತಿಗಳಲ್ಲಿ ಪವಿತ್ರವಾದುದು ಶಿಕ್ಷಕ ವೃತ್ತಿ ಎಂಬುದು ಜಾನ್ ರಸ್ಕಿನ್ ಅಭಿಪ್ರಾಯ. ಆದರೆ ಪ್ರತಿಸ್ಪಂದನವೇ ಇಲ್ಲದಿದ್ದರೆ ಯಾವ ವೃತ್ತಿಯಾದರೂ ವ್ಯರ್ಥವೇ! ಕರೊನಾ ಸಂದರ್ಭದಲ್ಲಿ ಇದು ನಮ್ಮ ಅನುಭವಕ್ಕೆ ಬಂದ ವಿಚಾರ. ನಮ್ಮ ಶಾಲೆಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ಮಕ್ಕಳೇ ಹೆಚ್ಚು. ವೇಳಾಪಟ್ಟಿಯಂತೆ ನಾವು ದಿನಕ್ಕೆರಡು ಹಳ್ಳಿಗಳ ಮಕ್ಕಳನ್ನು ಭೇಟಿಯಾಗಿ ಬೋಧನಾ ಕ್ರಿಯೆಯಲ್ಲಿ ತೊಡಗಬೇಕಿತ್ತು. ಆದರೆ ಗ್ರಾಮಸ್ಥರ ಜೀವನಶೈಲಿಯೇ ಬೇರೆ. ನಾವು ಮಕ್ಕಳಿಗೆ ಕಲಿಸಬೇಕೆಂದು ಉತ್ಸಾಹದಿಂದ ಹೊರಟರೆ ಅಲ್ಲಿ, ‘ಕೂಲಿಗೆ ಹೋಗಿದ್ದಾನೆ, ಹೊಲಕ್ಕೆ ಹೋಗಿದ್ದಾಳೆ, ಅಜ್ಜಯ್ಯನ ಗುಡಿಗೆ ಹೋಗಿದಾರೆ, ಹುಷಾರಿಲ್ಲ..’ ಎಂಬ ಪ್ರತ್ಯುತ್ತರ. ಹೀಗಾಗಿ ಹತ್ತು ಮಕ್ಕಳಿಗೆ ಇಬ್ಬರು-ಮೂವರ ಉಪಸ್ಥಿತಿ ಅಷ್ಟೇ. ಅವರನ್ನೇ ಮಂದಿರದಲ್ಲೋ, ಮನೆಯಂಗಳದಲ್ಲೋ ಕುಳ್ಳಿರಿಸಿ ಕಲಿಸಿ ಬರುತ್ತಿದ್ದೆವು. ಇನ್ನು ಸ್ಮಾರ್ಟ್​ಫೋನ್ ಇರುವ ಮಕ್ಕಳಿಗೆ ಆನ್​ಲೈನ್ ತರಗತಿ ಮಾಡೋಣವೆಂದರೆ, ‘ಕರೆನ್ಸಿ ಇಲ್ಲ, ಫೋನ್ ಅಪ್ಪನ ಬಳಿ ಇದೆ’ ಎಂಬ ಉತ್ತರಗಳು. ಒಟ್ಟಾರೆ, ಸಿಕ್ಕ ಮಕ್ಕಳಿಗೇ ಕಲಿಸಿ, ಚಟುವಟಿಕೆಗಳನ್ನು ನೀಡಿ, ಅವುಗಳನ್ನು ಮೌಲ್ಯಮಾಪನ ಮಾಡಿದ ಖುಷಿ ನಮ್ಮದು.
| ಪರಮೇಶ್ವರಪ್ಪ ಕುದರಿ ಚಿತ್ರದುರ್ಗ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − eleven =
Remember me
