ಬೆಳಗಾವಿ:ವೀರಶೈವ ಲಿಂಗಾಯತ ಸಮಾಜದಲ್ಲಿ ಎಲ್ಲ ಒಳ ಪಂಗಡಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಆಗಬೇಕಿದೆ. ನಮ್ಮನ್ನು ಒಡೆದು ಆಳುವ ಪ್ರಯತ್ನ ನಡೆಯುತ್ತಿದ್ದು, ಭವಿಷ್ಯದ ದಿನಗಳಲ್ಲಿ ಸಮಾಜದ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಎಚ್ಚರಿಸಿದರು.
ನಗರದ ವೀರಶೈವ ಲಿಂಗಾಯತ ಮಹಿಳಾ ಉಚಿತ ವಸತಿಗೃಹ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ಶನಿವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಸಮುದಾಯದ ಜನಪ್ರತಿನಿಧಿಗಳಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮುದಾಯದ ಒಗ್ಗಟ್ಟಿನಿಂದಲೇ ಹೆಚ್ಚಿನ ಶಾಸಕರು ಆಯ್ಕೆಯಾಗುತ್ತಿದ್ದೇವೆ. ಆದರೆ, ಸದ್ಯ ಪರಿಸ್ಥಿತಿ ಬದಲಾಗಿದ್ದು, ಭವಿಷ್ಯದಲ್ಲಿ ಇಷ್ಟು ಜನರೂ ಆಯ್ಕೆಯಾಗುವುದು ಕಷ್ಟವಾಗಲಿದೆ ಎಂದರು.
ವೀರಶೈವ ಲಿಂಗಾಯತ ಸಮಾಜದ ಎಲ್ಲ ನಾಯಕರು ವೇದಿಕೆಗಳ ಮೇಲೆ ಮಾತ್ರ ಒಗ್ಗಟ್ಟು ಪ್ರದರ್ಶಿಸುತ್ತಾರೆ. ವೇದಿಕೆಯಿಂದ ಕೆಳಗಿಳಿದ ಬಳಿಕ ಬೇರೆ ರೀತಿ ರೂಪ ಪಡೆಯುತ್ತೇವೆ. ಸಮಾಜದಲ್ಲಿ ಒಳ ಪಂಗಡಗಳು ಮೀಸಲಾತಿ ಇನ್ನಿತರ ಕಾರಣಕ್ಕಾಗಿ ಬೇರೆ ಕಡೆ ಮುಖ ಮಾಡಲು ಆರಂಭಿಸಿದ್ದು, ಭವಿಷ್ಯದ ದಿನಗಳಲ್ಲಿ ಸಮಾಜವು ಬಹಳ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ. ಈಗಿನಿಂದಲೇ ಎಲ್ಲ ಒಳ ಪಂಗಡಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಆಗಬೇಕು. ಇದರ ಜವಾಬ್ದಾರಿಯನ್ನು ಸಮಾಜದ ಸ್ವಾಮೀಜಿಗಳು ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಶಾಸಕಿ ಶಶಿಕಲಾ ಜೊಲ್ಲೆ, ಮಾತನಾಡಿ, ವೀರಶೈವ ಲಿಂಗಾಯತ ಸಮಾಜದಲ್ಲಿನ ಹೆಣ್ಣು ಮಕ್ಕಳಿಗೆ ಉಚಿತ ವಸತಿ ನಿಲಯ ನಿರ್ವಣಕ್ಕೆ ಕೈಲಾದಷ್ಟು ಆರ್ಥಿಕ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.
ನೂತನ ಶಾಸಕರಿಗೆ ಸನ್ಮಾನ:ಶಾಸಕರಾದ ಲಕ್ಷ್ಮಣ ಸವದಿ, ಶಶಿಕಲಾ ಜೋಲ್ಲೆ, ಮಹಾಂತೇಶ ಕೌಜಲಗಿ, ನಿಖಿಲ್ ಕತ್ತಿ, ಬಾಬಾಸಾಹೇಬ ಪಾಟೀಲ, ಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಎಂಎಲ್​ಸಿ ಹನುಮಂತ ನಿರಾಣಿ ಅವರನ್ನು ಸನ್ಮಾನಿಸಲಾಯಿತು. ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ನಿಡಸೋಸಿ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ, ಮಾಜಿ ಎಂಎಲ್​ಸಿಗಳಾದ ಮಹಾಂತೇಶ ಕವಟಗಿಮಠ, ವೀರಣ್ಣ ಮತ್ತಿಕಟ್ಟಿ, ಇತರರಿದ್ದರು.
ಹಿಂದುಳಿದ ವರ್ಗಕ್ಕೆ ಸೇರಿಸಿ:ದೇಶದಲ್ಲಿ ಆರ್ಥಿಕವಾಗಿ ಮುಂದುವರಿದಿರುವ ಸಮಾಜಕ್ಕೆ ಎಲ್ಲ ರೀತಿ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ವೀರಶೈವ ಲಿಂಗಾಯತ ಸಮಾಜಕ್ಕೆ ಮೀಸಲಾತಿ ಸೌಲಭ್ಯ ಇಲ್ಲಿಯವರೆಗೆ ಸಿಕ್ಕಿಲ್ಲ. ಪ್ರಸ್ತುತ ನಮ್ಮ ಸಮಾಜದ ಪರಿಸ್ಥಿತಿ ಬಹಳ ಕೆಟ್ಟಾಗಿದ್ದು, ಅದೆಷ್ಟು ಕುಟುಂಬಗಳು ಬಡತನದಲ್ಲಿಯೇ ದಿನ ಕಳೆಯುತ್ತಿವೆ. ಯಾರೂ ಕೂಡ ನಮ್ಮ ಸಮಾಜದಲ್ಲಿ ಒಳ ಪಂಗಡಗಳನ್ನು ಬೇರೆ ಬೇರೆ ಮಾಡಬೇಡಿ. ಬದಲಾಗಿ ಎಲ್ಲ ಒಳ ಪಂಗಡಗಳನ್ನು ಒಂದುಗೂಡಿಸಿ ವೀರಶೈವ ಲಿಂಗಾಯತ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಕೆಲಸ ಆಗಬೇಕಿದೆ. ಈ ಕುರಿತು ಸಂಸತ್ತಿನಲ್ಲಿ ನಿರಂತರವಾಗಿ ಧ್ವನಿ ಎತ್ತಿಕೊಂಡು ಬಂದಿದ್ದೇನೆ. ನಮ್ಮ ಪ್ರಯತ್ನ ನಿರಂತರವಾಗಿ ಮುಂದುವರಿಯಬೇಕು ಎಂದು ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಕತ್ತು ಸೀಳಲ್ಪಟ್ಟು ಒದ್ದಾಡುತ್ತಿದ್ದವನ ರಕ್ತ ಹೀರಿದ ಕ್ರೂರಿ!; ವಿಡಿಯೋ ವೈರಲ್ ಆಗುತ್ತಿದ್ದಂತೆ ಪರಾರಿ

‘ತಂಗಿಗೆ ಮೆಸೇಜ್ ಮಾಡ್ಬೇಡ’ ಎಂದು ಬುದ್ಧಿಮಾತು ಹೇಳಿದ ಅಣ್ಣನ ಕೊಂದೇಬಿಟ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 2 =
Remember me
