ಬೆಂಗಳೂರು:ಕಾವೇರಿ ಹೋರಾಟದಲ್ಲಿ ಭಾಗಿಯಾದ ಸ್ಯಾಂಡಲ್​ವುಡ್​ನ ಹಿರಿಯ ನಟ ಶಿವರಾಜ್​ಕುಮಾರ್​, ನಾವೆಲ್ಲರೂ ಇಲ್ಲಿಗೆ ಬಂದು ಐದು ನಿಮಿಷ ಕುಳಿತರೆ ಸಮಸ್ಯೆ ಬಗೆಹರಿಯುತ್ತಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಸಾಲದ ಕಂತು ಕಟ್ಟಲು ಮಹಿಳೆ ವಿಫಲ; ಥಳಿಸಿ, ಹತ್ಯೆಗೈದ ನಾಲ್ವರ ಬಂಧನ!
ಪ್ರತಿಭಟನೆ ಕುರಿತಂತೆ ಮಾತನಾಡಿದ ಶಿವಣ್ಣ, “ನೀವೇ ಸ್ಟಾರ್​ ಪಟ್ಟ ಕೊಡುತ್ತೀರಿ, ನೀವೇ ಕಸಿದುಕೊಳ್ಳುತ್ತೀರಿ. ಸಮಸ್ಯೆಯಿದೆ ಖಂಡಿತ, ಆದರೆ ಆ ಸಮಸ್ಯೆಯಿಂದ ಹೇಗೆ ಹೊರಬರಬೇಕು ಎಂಬ ಯೋಚನೆ ಮಾಡಬೇಕು. ಹೃದಯದಿಂದ ಚಿಂತಿಸಬೇಡಿ, ಬುದ್ಧಿಯಿಂದ ಯೋಚಿಸಿ” ಎಂದು ಹೇಳಿದರು.
“ನಾನು ಯಾವತ್ತಿದ್ದರೂ ಹೃದಯದಿಂದ ಮಾತನಾಡುತ್ತೇನೆ. ದಯವಿಟ್ಟು ಯಾರನ್ನು ದೂರಬೇಡಿ. ಎಲ್ಲಾ ಕಲಾವಿದರು ಒಂದೇ, ಅವರು ಬರಲಿಲ್ಲ, ಇವರು ಬರಲಿಲ್ಲ ಎಂದು ಹೇಳಬೇಡಿ. ಏನೇ ಮಾಡಿದರೂ ಒಳ್ಳೆ ಮನಸ್ಸಿನಿಂದ ಮಾಡಬೇಕು. ಈ ಬಗ್ಗೆ ಎರಡು ಸರ್ಕಾರ ಕುಳಿತು ಮಾತುಕತೆ ನಡೆಸಬೇಕು” ಎಂದು ಹೇಳಿದರು.
ಇದನ್ನೂ ಓದಿ:25 ಕೋಟಿ ರೂ. ಓಣಂ ಬಂಪರ್​ ಲಾಟರಿ ಗೆದ್ದವರಿಗೆ ಬಿಗ್​ ಶಾಕ್​! ಹಣ ಸಿಗುವುದೇ ಅನುಮಾನ, ಕಾರಣ ಹೀಗಿದೆ….
ಈ ಬಗ್ಗೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಕೂಡ ಮಾತನಾಡಿ, “ಬಹಳ ವರ್ಷದ ನಂತರ ನಮ್ಮ ಚಂದನವನದವರು ಒಟ್ಟಾಗಿ ಸೇರಿದ್ದೇವೆ. ಕಳೆದ ತಿಂಗಳು ಒಂದು ಮಾತು ಹೇಳಿದ್ದೆ, ಚಿತ್ರೋದ್ಯಮ ಚುಕ್ಕಾಣಿ ಇಲ್ಲದ ಹಡಗಾಗಿದೆ. ಇವತ್ತು ಒಂದು ಸಮಾಧಾನ ದೃಶ್ಯ ನೋಡುತ್ತಿದ್ದೇವೆ” ಎಂದು ಹೇಳಿದರು.
‘ಕಾವೇರಿ’ದ ಹೋರಾಟ; ನಟಿ ಪೂಜಾ ಗಾಂಧಿ ಮತ್ತು ಶ್ರೀಮುರುಳಿ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − six =
Remember me
