ಬೆಂಗಳೂರು:ಮಾರಕ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದೆ ಮನೆಯಿಂದ ಹೊರಬಂದು ಸಂಚರಿಸುವವರಿಗೆ, ರಸ್ತೆಯಲ್ಲಿ ಉಗುಳುವುದು ಮತ್ತು ಮೂತ್ರ ವಿಸರ್ಜನೆ ಮಾಡುವವರಿಗೆ ಇನ್ನೂ ದಂಡದ ಬಿಸಿ ತಟ್ಟಲಿದೆ. 1 ಸಾವಿರ ರೂ. ದಂಡ ವಿಧಿಸಲು ಬಿಬಿಎಂಪಿ ಆದೇಶಿಸಿದೆ.
ಕರೊನಾ ವೈರಸ್ ಸಾಂಕ್ರಾಮಿಕ ರೋಗವಾಗಿದ್ದು, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸದೆ ಸಂಚಾರ ಮಾಡುವುದು, ಉಗುಳುವುದು, ಮೂತ್ರ ವಿಸರ್ಜನೆ ಮಾಡುವುದು ಹಾಗೂ ರಸ್ತೆ ಬದಿ ಕಸ ಹಾಕುವುದನ್ನು ತಡೆಯಲು ದಂಡ ಪ್ರಯೋಗಕ್ಕೆ ಪಾಲಿಕೆ ಮುಂದಾಗಿದೆ. ಶುಕ್ರವಾರದಿಂದಲೇ ದಂಡ ವಸೂಲಿ ಆದೇಶ ಜಾರಿಗೆ ಬಂದಿದೆ. ಮೊದಲ ಬಾರಿ ತಪ್ಪು ಮಾಡಿದರೆ 1 ಸಾವಿರ ರೂ. ದಂಡ ಹಾಗೂ 2ನೇ ಬಾರಿ ಮತ್ತು ಅದಕ್ಕಿಂತ ಹೆಚ್ಚು ಪುನರಾವರ್ತನೆಯಾದರೆ 2 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಯಾರು ದಂಡ ವಿಧಿಸುತ್ತಾರೆ:ಬಿಬಿಎಂಪಿ ಹಿರಿಯ ಮತ್ತು ಕಿರಿಯ ಆರೋಗ್ಯ ಅಧಿಕಾರಿಗಳು ಹಾಗೂ 198 ವಾರ್ಡ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾರ್ಷಲ್‌ಗಳು ದಂಡ ವಿಧಿಸುವ ಅಧಿಕಾರ ಹೊಂದಿದ್ದಾರೆ. ಸಾರ್ವಜನಿಕ ಪ್ರದೇಶ, ಅಂಗಡಿ-ಮುಂಗಟ್ಟು, ಜನವಸತಿ ಪ್ರದೇಶಗಳಲ್ಲಿ ಸಂಚರಿಸುವ ಇವರು ದಂಡ ವಿಧಿಸುತ್ತಾರೆ. ಈಗಾಗಲೇ ಮಾರ್ಷಲ್‌ಗಳು ಮತ್ತು ಆರೋಗ್ಯಾಧಿಕಾರಿಗಳಿಗೆ ಪಿಒಎಸ್ ಯಂತ್ರ ನೀಡಲಾಗಿದ್ದು, ಸ್ಥಳದಲ್ಲಿಯೇ ದಂಡ ವಸೂಲಿ ಮಾಡುತ್ತಾರೆ.
ಮೊದಲ ದಿನವೇ 4 ಪ್ರಕರಣ:ದಂಡ ಪ್ರಯೋಗ ಜಾರಿಗೊಳಿಸಿದ ಮೊದಲ ದಿನವಾದ ಶುಕ್ರವಾರ ಕೋರಮಂಗಲ, ಯಶವಂತಪುರ ಸೇರಿ ವಿವಿಧೆಡೆ ಒಟ್ಟು 4 ಪ್ರಕರಣ ದಾಖಲಿಸಿ 2 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. 350ಕ್ಕೂ ಹೆಚ್ಚು ಜನರಿಗೆ ಮಾರ್ಷಲ್‌ಗಳು ವಾರ್ನಿಂಗ್ ನೀಡಿದ್ದಾರೆ. ಇನ್ನೊಮ್ಮೆ ಇಂತಹ ವರ್ತನೆ ಪುನರಾವರ್ತನೆಯಾದರೆ ದಂಡ ವಿಧಿಸುವುದಾಗಿ ತಿಳಿಸಿ ಕಳಿಸಿದ್ದಾರೆ. ಮೊದಲ ದಿನವಾದ್ದರಿಂದ ಹೆಚ್ಚಿನ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಶನಿವಾರದಿಂದ ದಂಡ ವಸೂಲಿ ಕಾರ್ಯಕ್ಕೆ ಚುರುಕು ನೀಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿ ಮಾಹಿತಿ ನೀಡಿದ್ದಾರೆ.
ನಿಯಮಗಳೇನು?:ಬಾಯಿ ಹಾಗೂ ಮೂಗು ಮುಚ್ಚಿಕೊಳ್ಳುವ ಹಾಗೆ ಮಾಸ್ಕ್ ಧರಿಸಬೇಕು. ಕೆಲಸ ಮಾಡುವ ಸ್ಥಳದಲ್ಲಿ 5ಕ್ಕಿಂತ ಹೆಚ್ಚು ಜನ ಒಂದೆಡೆ ಸೇರಬಾರದು. ಶೌಚಗೃಹ ಹೊರತುಪಡಿಸಿ ಬೇರೆಡೆ ಮೂತ್ರ ವಿಸರ್ಜನೆ ಮಾಡುವಂತಿಲ್ಲ. ಮಾಸ್ಕ್ ಮತ್ತು ಗ್ಲೌಸ್‌ಗಳನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ. ಉಗುಳುವುದು, ಮೂತ್ರ ವಿಸರ್ಜನೆ, ಕಸ ಹಾಕುವುದು ಸಾರ್ವಜನಿಕ ಅಪರಾಧ.
ಇದನ್ನೂ ಓದಿ:ಕರೊನಾ ವೈರಸ್​ಗೆ ದಾವಣಗೆರೆಯ 69 ವರ್ಷದ ವೃದ್ಧ ಸಾವು; ಇವರ ಸಂಪರ್ಕಕ್ಕೆ ಬಂದಿದ್ದ ಐವರಲ್ಲಿ ಸೋಂಕು
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:three × five =
Remember me
