ಬೆಂಗಳೂರು:ನೀವು ಆನ್​ಲೈನ್​ ಆ್ಯಪ್​ಗಳನ್ನು ಬಳಸಿ ಸಾಲ ಪಡೆಯುತ್ತೀರಾ? ಹಾಗಾದರೆ ಈ ಸುದ್ದಿ ನಿಮಗಾಗಿ. ಇಲ್ಲೊಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ, ಸಾಲ ಮಾಡಿ ತೀರಿಸಲಾಗದೇ ಸಾವನ್ನು ಅಪ್ಪಿಕೊಂಡಿದ್ದಾನೆ.
ಈ 22ರ ಯುವಕ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ 6ನೇ ಸೆಮಿಸ್ಟರ್​ನಲ್ಲಿ ಓದುತ್ತಿದ್ದು ಕಾಲೇಜಿಗೆ ಟಾಪರ್​ ಕೂಡ ಆಗಿದ್ದ. ಆದರೆ ಈತ ಆನ್ಲೈನ್ ಮೂಲಕ ಲೋನ್ ಪಡಿದಿದ್ದು ಸಾಲ ತೀರಿಸಲು ಸಾಧ್ಯವಾಗದೇ ಪ್ರಾಣವನ್ನೇ ಬಿಟ್ಟಿದ್ದಾನೆ.
ಇದನ್ನೂ ಓದಿ:ಆನ್‌ಲೈನ್ ಸಾಲಬಾಧೆಯಿಂದ ಯುವಕ ಆತ್ಮಹತ್ಯೆ
ಖಾಸಗಿ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಓದುತ್ತಿರುವ ತೇಜಸ್, ತನ್ನ ಕಾಲೇಜಿಗೆ ಟಾಪರ್ ಆಗಿದ್ದ. ತನ್ನ ಸ್ನೇಹಿತನಿಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ‌ಕೋಟಕ್ ಮಹೀಂದ್ರಾ ಮೂಲಕ ಲೋನ್ ಪಡೆದಿದ್ದ. ಆದರೆ ಕಳೆದ ಒಂದು ವರ್ಷದಿಂದ ಸ್ನೇಹಿತ ಇಎಂಐ ಕಟ್ಟಿರಲಿಲ್ಲ. ಆದರೆ ಸಾಲ ಮಾತ್ರ ತೇಜಸ್ ಹೆಸರಲ್ಲಿತ್ತು. ಈ ಹಿನ್ನೆಲೆಯಲ್ಲಿ ಸಾಲ ನೀಡಿದವರು, ಹಣ ಹಿಂತಿರುಗಿಸುವಂತೆ ವಿಪರೀತ ಟಾರ್ಚರ್ ನೀಡುತ್ತಿದ್ದರು.
ಇದನ್ನೂ ಓದಿ:ಸರ್ಕಾರಿ ನೌಕರರಿಗೆ ಸಾಲ ಸಂಕಷ್ಟ: ಆನ್​ಲೈನ್​ನಲ್ಲಿ ಕೆಜಿಐಡಿ ಸಾಲದ ಅರ್ಜಿ ಸಲ್ಲಿಕೆಗೆ ತೊಂದರೆ
ಇದರಿಂದಾಗಿ ಮನನೊಂದಿದ್ದ ತೇಜಸ್, ನಿನ್ನೆ ಡೆತ್ ನೋಟ್ ಬರೆದಿಟ್ಟು ಸಂಜೆ ಆರು ಗಂಟೆ ಸುಮಾರಿಗೆ ತನ್ನ ತಾಯಿಯ ವೇಲ್​ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿಸಲಾಗಿದ್ದು ಎಚ್ಎಂಟಿ ಕ್ವಾಟ್ರಸ್​ನಲ್ಲಿರುವ ಆತನ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಸದ್ಯ ಜಾಲಹಳ್ಳಿ ಪೋಲಿಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದಾರೆ.

ಇದನ್ನೂ ಓದಿ:ಆನ್​ಲೈನ್​ ಗೇಮ್​ನಿಂದ 65 ಲಕ್ಷಕ್ಕೂ ಅಧಿಕ ಹಣ ಲಾಸ್: ಬದುಕು ಅಂತ್ಯಗೊಳಿಸಿದ ಶಿರಸಿ ಯುವಕ​​
ತೇಜಸ್​ ತನ್ನ ಡೆತ್ ನೋಟ್​ನಲ್ಲಿ “ಅಮ್ಮ ಅಪ್ಪ ನನ್ನನ್ನು ಕ್ಷಮಿಸಿ.. ನಾನು ಮಾಡಿರುವ ತಪ್ಪಿಗೆ ಬೇರೆ ದಾರಿಯಿಲ್ಲ.. ನಾನು ಮಾಡಿರುವ ಸಾಲ ತೀರಿಸಲು ಆಗೋದಿಲ್ಲ ಅದಕ್ಕಾಗಿ ಇದು ನನ್ನ ಕೊನೆಯ ತೀರ್ಮಾನ ..ಥ್ಯಾಂಕ್ಸು ಗುಡ್ ಬಾಯ್..” ಎಂದು ಬರೆದಿದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 7 =
Remember me
