ನವದೆಹಲಿ:ಮೊಬೈಲ್ ಫೋನ್ ಬಿಟ್ಟು ನೀವು ಒಂದಷ್ಟು ಹೊತ್ತು ಇರಬಲ್ಲಿರಿ ಎಂದಾದರೆ ಐಸ್‌ಲ್ಯಾಂಡಿಕ್‌ನ ಯೋಗರ್ಟ್ ಬ್ರ್ಯಾಂಡ್ ಮಾಡಿರುವ ಚಾಲೆಂಜ್ ಸ್ವೀಕರಿಸಲು ನೀವು ಸಮರ್ಥರಾಗಿರುತ್ತೀರಿ. ಈ ಸ್ಪರ್ಧೆಯನ್ನು ಗೆಲ್ಲುವ ಮೂಲಕವಾಗಿ ಭಾರಿ ಮೊತ್ತದ ಹಣವನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ ಈ ಸ್ಪರ್ಧೆಗೆ ಇರುವ ಷರತ್ತುಗಳು ಏನು ಎಂದು ನೋಡೋಣ…
ಡಿಜಿಟಲ್ ಡಿಟಾಕ್ಸ್ ಪ್ರೊಗ್ರಾಂ ಅನ್ನು ಹಮ್ಮಿಕೊಂಡಿರುವ ಈ ಯೋಗರ್ಟ್ ಬ್ರ್ಯಾಂಡ್ ಯಾರು ಸ್ಮಾರ್ಟ್‌ಫೋನ್ ಇಲ್ಲದೆ ಒಂದು ತಿಂಗಳು ಇರುತ್ತಾರೋ ಅವರಿಗೆ 10,000 ರೂ. ಬಹುಮಾನವನ್ನು ನೀಡಲಿದೆ. 10 ಅದೃಷ್ಟವಂತ ಭಾಗವಹಿಸುವವರಿಗೆ ಬಹುಮಾನ ಸಿಗಲಿದೆ. ಒಂದು ತಿಂಗಳು ಫೋನ್ ಇಲ್ಲದೆಯೇ ಕಾಲ ಕಳೆಯಬೇಕು. ಡಿಜಿಟಲ್ ಯುಗ ಬಿಟ್ಟು  ಹೊಸ ಜಗತ್ತಿನೊಂದಿಗೆ ಇನ್ನಷ್ಟು ಗಾಢವಾಗಿ ಸಂಪರ್ಕಗೊಳ್ಳಲು ಇಂತಹ ಒಂದು ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದೆ. ಭಾಗವಹಿಸಲು ಇಚ್ಛಿಸುವವರು ಜನವರಿ 31 ರೊಳಗೆ ಅರ್ಜಿಗಳನ್ನು ಹಾಕಬೇಕು.
ದಿನವೊಂದಕ್ಕೆ ಒಬ್ಬ ವ್ಯಕ್ತಿ ಕನಿಷ್ಟ 5.4 ಗಂಟೆಗಳನ್ನು ಫೋನ್ ಬಳಸುತ್ತಾನೆ. ಒಂದು ತಿಂಗಳ ಕಾಲ ಫೋನ್ ಇಲ್ಲದೆಯೇ ಇರಬಹುದೇ ಎಂಬುದನ್ನು ಪರೀಕ್ಷಿಸಿಕೊಳ್ಳುವ ಸಮಯ ಕೂಡ ಇದಾಗಿದೆ ಎಂದು ವೆಬ್‌ಸೈಟ್‌ನಲ್ಲಿ ಕಂಪನಿ ತಿಳಿಸಿದೆ.
ನಿಯಮ:ಆಯ್ಕೆಯಾದ ಭಾಗವಹಿಸುವವರ ಸ್ಮಾರ್ಟ್‌ಫೋನ್‌ಗಳನ್ನು ಒಂದು ಬಾಕ್ಸ್‌ನಲ್ಲಿ ಒಂದು ತಿಂಗಳವರೆಗೆ ಇರಿಸಲಾಗುತ್ತದೆ ಅವರು ಫೋನ್ ಇಲ್ಲದೆಯೇ ಈ ಒಂದು ತಿಂಗಳು ವ್ಯವಹರಿಸಬೇಕು ಎಂಬುದು ಆಟದ ನಿಯಮವಾಗಿದೆ.
ವಿಜೇರಿತರಿಗೆ ಸಿಗುವ ಬಹುಮಾನ:ಡಿಜಿಟಲ್ ಬ್ರೇಕ್‌ನಿಂದ ಒಂದು ತಿಂಗಳು ಮುಕ್ತರಾದವರು ಆಕರ್ಷಕ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳಲಿದ್ದು, $10,000 ನಗದು ಬಹುಮಾನ, ತುರ್ತು ಪರಿಸ್ಥಿತಿಗಳಿಗಾಗಿ ಬಳಸಬಹುದಾದ ಪ್ರಿಪೈಡ್ ಸಿಮ್ ಹೊಂದಿರುವ ಫ್ಲಿಪ್ ಫೋನ್, ಮೂರು ತಿಂಗಳ ಕಾಲ ಉಚಿತವಾಗಿ ಸಿಗ್ಗಿಯ ಯೋಗರ್ಟ್ ಅನ್ನು ಸವಿಯಬಹುದಾಗಿದೆ.
ಉಮಾಶ್ರೀ 2 ತಿಂಗಳ ಪ್ರೆಗ್ನೆಂಟ್ ಇದ್ದಾಗಲೇ ಪತಿ ಬಿಟ್ಟೋದ!; ಕುಡಿತದ ಚಟಕ್ಕೆ ಬಲಿ ಆಯ್ತಾ ನಟಿ ಸಂಸಾರ

ವಯಸ್ಸಾಗಿದೆ ಯಾರಾದರೂ ಬೇಕೇ ಬೇಕೆಂದು 49ರ ಮಹಿಳೆಗೆ ತಾಳಿ ಕಟ್ಟಿದ 103 ವರ್ಷದ ಅಜ್ಜ

ಬಿಗ್​ಬಾಸ್​​ ವಿನ್ನರ್​ಗೆ 50 ಲಕ್ಷ ರೂ. ಜತೆಗೆ ಸಿಗ್ತು ಐಷಾರಾಮಿ ಕಾರು; 6 ಫೈನಲಿಸ್ಟ್​ಗಳಿಗೂ ಸಿಗ್ತು ಲಕ್ಷ..ಲಕ್ಷ ಹಣ



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 16 =
Remember me
