ಬೆಂಗಳೂರು:ಕಲಿಕೆಯ ದಿಕ್ಸೂಚಿ ಸೂಕ್ತ ಮಾರ್ಗದಲ್ಲಿ ಸಾಗಿದರೆ ಸಾಧನೆ ಎಂಬ ಗುರಿ ಮುಟ್ಟಲು ಸಾಧ್ಯ ಎಂದು ಮುಖ್ಯ ಶೈಕ್ಷಣಿಕ ಸಲಹೆಗಾರ ಪ್ರೊ.ಚಂಬಿ ಪುರಾಣಿಕ್​,ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
ಸಿಎಂಆರ್​ ವಿಶ್ವವಿದ್ಯಾಲಯ ಶುಕ್ರವಾರ ಒಎಂಬಿಆರ್​ ಲೇಔಟ್​ನಲ್ಲಿ ಆಯೋಜಿಸಿದ್ದ“ಶೈಕ್ಷಣಿಕ ಮಾರ್ಗದರ್ಶನ‘ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿ ಜೀವನದ ಪ್ರತಿ ಹಂತವೂ ಮೌಲ್ಯಯುತವಾದದ್ದು.ಮಹತ್ವಾಕಾಂಕ್ಷೆ ಜತೆಗೆ ಬದುಕಿನಲ್ಲಿ ಮೌಲ್ಯ,ಸಾಮಾಜಿಕ ಹೊಣೆಗಾರಿಕೆ ಅಳವಡಿಸಿಕೊಳ್ಳಬೇಕು.ಆ ಮೂಲಕ ಸಂವಿಧಾನದ ಆಶಯಗಳು ಯಶಸ್ವಿಗೊಳಿಸಲು ಕೈಜೋಡಿಸಬೇಕು.ಅದು ಪ್ರತಿಯೊಬ್ಬ ವಿದ್ಯಾರ್ಥಿಯ ಕೈಂಕರ್ಯವಾಗಬೇಕು.ದೇಶದ ಸರ್ವಾಂಗೀಣ ಪ್ರಗತಿ ಯುವಜನಾಂಗದ ಕೈಯಲ್ಲಿದೆ.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಕೆ ಜತೆಗೆ,ನಾಯಕತ್ವ,ಕಾರ್ಯಪ್ರಧಾನತೆ,ನ್ಯಾಯಪರತೆ ಮತ್ತು ಜೀವನದ ಮೌಲ್ಯ ಗೌರವಿಸುವ ಹಾಗೂ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಪರಿಪೂರ್ಣರಾಗಬೇಕು ಎಂದರು.
ಮನೆಯಲ್ಲೇ ಕುಳಿತು ವಿಶ್ವಾಸ್​ ಪೇ ಆ್ಯಪ್​ನಲ್ಲಿ ದಿನಸಿ ಪದಾರ್ಥ ಬುಕಿಂಗ್​ ಮಾಡಿ
ಸಿಎಂಆರ್​ ವಿವಿ ಕುಲಪತಿ ಡಾ.ಎಚ್​.ಬಿ.ರಾವೇಂದ್ರ ಮಾತನಾಡಿ,ವಿದ್ಯಾರ್ಥಿಗಳ ಮಹತ್ವಾಕಾಂಕ್ಷೆ ಪೂರೈಸುವ,ಸರ್ವತೋಮುಖ ಬೆಳವಣಿಗೆಗೆ ಬೇಕಾದ ಅತ್ಯುತ್ತಮ ಕಲಿಕಾ ವಾತಾವರಣವನ್ನು ನಮ್ಮ ವಿವಿ ಕಲ್ಪಿಸಿಕೊಟ್ಟಿದೆ.ಇದರ ಸದ್ಬಳಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉಜ್ವಲಗೊಳಿಸಬೇಕು ಎಂದು ಕಿವಿಮಾತು ಹೇಳಿದರು. 2024ನೇ ಶೈಕ್ಷಣಿಕ ಸಾಲಿನ ಸ್ಕೂಲ್​ ಆಫ್​​​ ಮ್ಯಾನೇಜ್​ಮೆಂಟ್​,ಸ್ಕೂಲ್​ ಆಫ್​​ಎಕನಾಮಿಕ್ಸ್​ ಆ್ಯಂಡ್​ ಕಾಮರ್ಸ್​,ಸ್ಕೂಲ್​ ಆಫ್​​​ ಕಂಪ್ಯೂಟರ್​ ಸ್ಟಡಿಸ್​ ಮತ್ತು ಸ್ಕೂಲ್​ ಆಫ್​​​ ಲೀಗಲ್​ ಸ್ಟಡಿಸ್​ ತರಗತಿಗಳಿಗೆ ಚಾಲನೆ ನೀಡಲಾಯಿತು.ಸಿಎಂಆರ್​ ವಿವಿ ಕುಲಸಚಿವ ಡಾ.ಆರ್​.ಪ್ರವಿಣ್​,ಶಿಕ್ಷಣ ವಿಭಾಗಗಳ ಡೀನ್​,ನಿರ್ದೇಶಕರು ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 14 =
Remember me
