ಬೆಂಗಳೂರು:ಸಿಗರೇಟ್ ಹಾಗೂ ಬೀಡಿ ತುಂಡುಗಳ ವಿಲೇವಾರಿ ಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್​ಪಿಸಿಬಿ) ಹೊಸ ಮಾರ್ಗಸೂಚಿ ಹೊರಡಿಸಿದೆ. ಸಿಗರೇಟ್ ತುಂಡುಗಳ ವಿಲೇಗೆ ನಿಯಮ ರೂಪಿಸುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಸಿಪಿಸಿಬಿ) ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್​ಜಿಟಿ) ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ನ.1ರಂದು ಉನ್ನತ ಅಧಿಕಾರ ಸಮಿತಿಯನ್ನು ಕೆಎಸ್​ಪಿಸಿಬಿ ರಚಿಸಿತ್ತು. ಪ್ರೊ. ಯು.ಎಸ್. ವಿಶಾಲ್ ರಾವ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈ ಸಮಿತಿ ಕೆಲ ನಿಯಮಗಳನ್ನು ರೂಪಿಸಿದೆ.
ಸಿಗರೇಟ್ ತುಂಡುಗಳ ಕಸದ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸಿಗರೇಟ್ ತಯಾರಕರು ಸಿಗರೇಟ್ ತುಂಡುಗಳ ಕಸದಿಂದ ಪರಿಸರ ಮತ್ತು ಆರೋಗ್ಯದ ಅಪಾಯ ಕುರಿತು ಮಾಹಿತಿ ನಮೂದಿಸಬೇಕು. ಸಾರ್ವಜನಿಕ ಪ್ರದೇಶ, ಹೊರಾಂಗಣ, ಒಳಾಂಗಣ ಮತ್ತು ಕೆಲಸದ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ಸಂಬಂಧಪಟ್ಟ ಅಧಿಕಾರಿಗಳು ದಂಡ ಹಾಕಲಿದ್ದು, ದಂಡ ವಿಧಿಸುವ ನಿಬಂಧನೆಯನ್ನು ಸ್ಥಳೀಯ ಅಧಿಕಾರಿಗಳು ತಮ್ಮ ಬೈಲಾಗಳಲ್ಲಿ ಸೇರಿಸಿಕೊಳ್ಳಬಹುದು. ಸಿಗರೇಟ್ ತುಂಡುಗಳ ಕಸ ಹಾಕುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ:ಪರೀಕ್ಷೆ ಸಮಯದಲ್ಲೂ ನೆಮ್ಮದಿ ಹೇಗೆ!?; ಇಲ್ಲಿದೆ ಮಕ್ಕಳಿಗೆ ಸಲಹೆ-ಸೂಚನೆ
ಸಿಗರೇಟ್ ತುಂಡು ಕಸ ಹಾಕುವುದಕ್ಕೆ ದಂಡ ವಿಧಿಸಲು ನಿಯಮಗಳನ್ನು ಜಾರಿಗೊಳಿಸಲು ಸ್ಥಳೀಯ ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಒಣ ತ್ಯಾಜ್ಯದೊಂದಿಗೆ ಸಿಗರೇಟ್ ತುಂಡು ಪ್ರತ್ಯೇಕಿಸಬೇಕು. ಸುರಕ್ಷಿತವಾಗಿ ಸಿಗರೇಟ್ ತುಂಡು ವಿಲೇವಾರಿ ಮಾಡುವ ಸೂಚನೆಗಳನ್ನು ಪ್ರತಿ ಸಿಗರೇಟ್ ಪ್ಯಾಕೆಟ್​ನಲ್ಲಿ ತಯಾಕರು ಸ್ಪಷ್ಟವಾಗಿ ನಮೂದಿಸಬೇಕು ಎಂದು ಮಾರ್ಗಸೂಚಿಯಲ್ಲಿ ಕೆಎಸ್​ಪಿಸಿಬಿ ಉಲ್ಲೇಖಿಸಿದೆ.
ಕಾರು ತಡೆದ ಟ್ರಾಫಿಕ್​ ಪೊಲೀಸ್​: ನಡುರಸ್ತೆಯಲ್ಲೇ ಯುವತಿಯಿಂದ ಭಾರೀ ಹೈಡ್ರಾಮ, ವಿಡಿಯೋ ವೈರಲ್​

ದಕ್ಷಿಣ ಭಾರತ ಸಿನಿಮಾರಂಗದಿಂದ ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ಬ್ಯಾನ್​! ಕಾರಣ ಹೀಗಿದೆ….

ಪ್ರಿಯಾಂಕಾ ಗಾಂಧಿ ಆಪ್ತ ಸಹಾಯಕನ ವಿರುದ್ಧ ಗಂಭೀರ ಆರೋಪ ಮಾಡಿದ ಮಿಸ್​ ಬಿಕಿನಿ ಗರ್ಲ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 10 =
Remember me
