ಗದಗ:ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಂಟಾಗಿರುವ ಪ್ರಣಾಳಿಕೆ-ಪ್ರಚಾರಗಳು ಧರ್ಮಸಂಘರ್ಷದ ಸ್ವರೂಪ ತಳೆದಿದ್ದು, ಹಿಂದೂಗಳನ್ನು ಕೆರಳಿಸಿದಂತಾಗಿದೆ. ಬಜರಂಗದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಘೋಷಿಸಿರುವುದು ಬಿಜೆಪಿಗರನ್ನು ಹಾಗೂ ಹಿಂದೂಗಳನ್ನು ಸಿಡಿದೇಳುವಂತೆ ಮಾಡಿದೆ.
ಇದನ್ನೂ ಓದಿ:ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಮಾಡುವ ವಿಚಾರವನ್ನು ಘೋಷಿಸಿದ್ದರ ಬಗ್ಗೆ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಗದಗದಲ್ಲಿ ಮಾತನಾಡಿ, ಕಾಂಗ್ರೆಸ್ ಇಂದು ಹಿಂದೂವಿರೋಧಿ ಎಂಬುದನ್ನು ಪ್ರೂವ್ ಮಾಡಿದೆ ಎಂದಿದ್ದಾರೆ.
ಇದನ್ನೂ ಓದಿ:ಹನುಮ ಭಕ್ತರು ಸಿಡಿದೆದ್ದರೆ ಕಾಂಗ್ರೆಸ್ ದೇಶದಿಂದಲೇ ನಿರ್ಮೂಲ: ಸಿಎಂ ಬೊಮ್ಮಾಯಿ
2047ಕ್ಕೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವುದು ಪಿಎಫ್ಐ ಸಂಘಟನೆ ಗುರಿ. ಪಿಎಸ್ಐ ಸಂಘಟನೆ ಮೇಲಿದ್ದ ಒಂದೂವರೆ ಸಾವಿರ ಪ್ರಕರಣಗಳನ್ನು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ವಾಪಸ್ ಪಡೆದಿದ್ದಾರೆ. ಅದೇ ಹಿಂದೂ ಕಾರ್ಯಕರ್ತರ ಕೊಲೆ, ಗೋರಕ್ಷಕರ ಕೊಲೆ ಕೇಸ್​ಗಳನ್ನು ವಾಪಸ್ಸ ಪಡೆದಿಲ್ಲ. ಕಾಂಗ್ರೆಸ್ ಹಾಗೂ ಪಿಎಫ್ಐ ಸಂಘಟನೆಗಳ ಆಂತರಿಕ ಒಪ್ಪಂದ ಇದೆ, ಹೀಗಾಗಿ ಬಜರಂಗದಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಹೇಳಿದೆ ಎಂದಿದ್ದಾರೆ.
ಇದನ್ನೂ ಓದಿ:ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..
ಬಜರಂಗದಳದವರು ಮಾತ್ರವಲ್ಲ, ಕರ್ನಾಟಕದಲ್ಲಿ ಹಿಂದೂಗಳೆಲ್ಲ ಕಾಂಗ್ರೆಸ್ ಬಹಿಷ್ಕರಿಸುತ್ತೇವೆ. ಹಿಂದುಗಳ ಮನೆಮನೆಗೆ ಹೋಗಿ ಕಾಂಗ್ರೆಸ್​ಗೆ ವೋಟ್ ಹಾಕಬೇಡಿ ಅಂತ ಹೇಳುತ್ತೇವೆ. ಕಾಂಗ್ರೆಸ್ ಹಿಂದೂ ವಿರೋಧಿ, ಅದಕ್ಕೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದ ಹಾಗೆ. ಕಾಂಗ್ರೆಸ್​ಗೆ ವೋಟ್ ಹಾಕುವುದೆಂದರೆ ಮುಸ್ಲಿಮರಿಗೆ ವೋಟ್ ಹಾಕಿದ ಹಾಗೆ. ಅವರಿಗೆ ಮುಸ್ಲಿಂ ವೋಟ್ ಮಾತ್ರ ಬೇಕಾಗಿದೆ, ಹಿಂದೂಗಳ ಮತ ಬೇಕಾಗಿಲ್ಲ, ಅದಕ್ಕಾಗಿ ಇಂಥವನ್ನು ಮಾಡುತ್ತಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.
ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 8 =
Remember me
