ಬೆಂಗಳೂರು:ಈಗ ಈ ಕರೊನಾ ಕಾಲಘಟ್ಟದಲ್ಲಿ ಬಹಳಷ್ಟು ಮಂದಿ ಬ್ಯಾಂಕಿಗೆ ಹೋಗಿ ವ್ಯವಹರಿಸುವ ಬದಲು ಆನ್​ಲೈನ್​ನಲ್ಲೇ ವಹಿವಾಟು ನಡೆಸುತ್ತಿದ್ದಾರೆ. ಆದರೆ ನೀವು ಈ ಬ್ಯಾಂಕ್​ನ ಗ್ರಾಹಕರಾಗಿದ್ದಲ್ಲಿ ಜುಲೈ 1ರಿಂದ ವಹಿವಾಟು ನಡೆಸಲು ಸಾಧ್ಯವಾಗದೇ ಇರಬಹುದು. ಏಕೆಂದರೆ ಈ ಬ್ಯಾಂಕ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯೊಂದು ಆಗಿದೆ.
ಹೌದು.. ಇಲ್ಲೀಗ ಗಮನಹರಿಸಬೇಕಾಗಿರುವುದು ಕೆನರಾ ಬ್ಯಾಂಕ್​ನೊಂದಿಗೆ ವಿಲೀನವಾದ ಸಿಂಡಿಕೇಟ್ ಬ್ಯಾಂಕ್​ ಗ್ರಾಹಕರು. ಏಕೆಂದರೆ ವಿಲೀನದ ಬಳಿಕ ಸಿಂಡಿಕೇಟ್​ ಬ್ಯಾಂಕ್​ನ ಹಳೆಯ ಐಎಫ್​ಎಸ್​ಸಿ (ಇಂಡಿಯನ್ ಫೈನಾನ್ಸಿಯಲ್ ಸಿಸ್ಟಮ್ ಕೋಡ್​) ಬದಲಾಗಿದ್ದು, ಇದೇ ಜುಲೈ 1ರಿಂದ ಅವು ನಿಷ್ಕ್ರಿಯಗೊಳ್ಳಲಿವೆ. ಅಂದರೆ ಆ ಬಳಿಕ ಅದೇ ಹಳೆಯ ಐಎಫ್​ಎಸ್​ಸಿ ಹಾಕಿ ವ್ಯವಹರಿಸಲು ಮುಂದಾದರೆ ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ:43 ಸಲ ಪಾಸಿಟಿವ್​, 7 ಬಾರಿ ಆಸ್ಪತ್ರೆಗೆ ದಾಖಲು; ಈತ ಜಗತ್ತಲ್ಲೇ ಅತಿ ಹೆಚ್ಚು ದಿನ ಕೋವಿಡ್​ನಿಂದ ಬಳಲಿದ ವ್ಯಕ್ತಿ!
ವಿಲೀನವಾದ ಬಳಿಕ ಈ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತ ಬಂದಿದ್ದು, ಇದೀಗ ಎಲ್ಲ ಐಎಫ್​ಎಸ್​ಸಿ ಕೋಡ್ ಬದಲಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸಿಂಡಿಕೇಟ್​ ಬ್ಯಾಂಕ್​ನಿಂದ ನೀಡಲಾಗಿದ್ದ ಹಳೆಯ ಐಎಫ್​ಎಸ್​ಸಿ 2021ರ ಜೂ. 30ರ ವರೆಗೆ ಮಾತ್ರ ಚಾಲನೆಯಲ್ಲಿ ಇರಲಿದ್ದು, ಜುಲೈ 1ರಿಂದ ಬ್ಯಾಂಕ್​ ವಹಿವಾಟಿಗೆ ಖಾತೆದಾರರು ಹೊಸ ಐಎಫ್​ಎಸ್​ಸಿ ಬಳಸತಕ್ಕದ್ದು ಎಂದು ಕೆನರಾ ಬ್ಯಾಂಕ್​ ತಿಳಿಸಿದೆ.
ಇದನ್ನೂ ಓದಿ:‘ನಾಯಿಗೆ ರಕ್ತ ಬೇಕಾಗಿದೆ!’; ಅಪಘಾತಕ್ಕೀಡಾಗಿ ಮೂಳೆ ಮುರಿದ ಶ್ವಾನಕ್ಕೆ ನಡೆಯಲಿದೆ ಸರ್ಜರಿ..
ಹೊಸ ಐಎಫ್​ಎಸ್​ಸಿ ಪಡೆಯುವುದು ಹೇಗೆ?:ಸಿಂಡಿಕೇಟ್ ಬ್ಯಾಂಕ್​ನ ಮೂಲ ಖಾತೆದಾರರಾಗಿದ್ದವರು ಕೆನರಾ ಬ್ಯಾಂಕ್​ಗೆ ತೆರಳಿ ಹೊಸ ಪಾಸ್​ಬುಕ್ ಪಡೆದರೆ ಅದರಲ್ಲೇ ಹೊಸ ಐಎಫ್​ಎಸ್​ಸಿ​ ಮುದ್ರಿತವಾಗಿರುತ್ತದೆ. ಇನ್ನು ಖಾತೆದಾರರಿಗೆ ಅವರ ಖಾತೆ ಇರುವ ಶಾಖೆಯ ಹೊಸ ಐಎಫ್​ಎಸ್​ಸಿ ಎಸ್​ಎಂಎಸ್​ ಮೂಲಕ ಬ್ಯಾಂಕ್ ಈಗಾಗಲೇ ಕಳುಹಿಸಿದೆ. ಅದಾಗ್ಯೂ ಹೊಸ ಐಎಫ್​ಎಸ್​ಸಿ ಪಡೆಯದವರು, ಬೇರೆಯವರ ಹಳೆಯ ಸಿಂಡಿಕೇಟ್ ಬ್ಯಾಂಕ್ ಖಾತೆ ಜತೆ ವ್ಯವಹರಿಸುವವರು ಅದಕ್ಕೆ ಸಂಬಂಧಿಸಿದ ಹೊಸ ಐಎಫ್​ಎಸ್​ಸಿ ಸುಲಭದಲ್ಲಿ ಪಡೆಯಲು ಕೆನರಾ ಬ್ಯಾಂಕ್​ ಲಿಂಕೊಂದನ್ನು ರವಾನಿಸಿದೆ.
ಸಿಂಡಿಕೇಟ್​ ಬ್ಯಾಂಕ್​ನ ಹಳೆಯ ಐಎಫ್​ಎಸ್​ಸಿಗೆ ಪ್ರತಿಯಾಗಿ ಈಗಿನ ಕೆನರಾ ಬ್ಯಾಂಕ್​ನ ಹೊಸ ಐಎಫ್​ಎಸ್​ಸಿ ಪಡೆಯಲಿಚ್ಛಿಸುವವರು ಈ ಕೆಳಗಿನ ಲಿಂಕ್​ ಮೂಲಕ ತಿಳಿಯಬಹುದು. ಲಿಂಕ್ ಕ್ಲಿಕ್ಕಿಸಿದ ಬಳಿಕ ಅಲ್ಲಿನ ನಿಗದಿತ ಸ್ಥಳದಲ್ಲಿ ಹಳೆಯ ಐಎಫ್​ಎಸ್​ಸಿ ಟೈಪಿಸಿದರೆ ಹೊಸ ಐಎಫ್​ಎಸ್​ಸಿ ತಕ್ಷಣ ಲಭಿಸಲಿದೆ.
ಹೊಸ ಐಎಫ್​ಎಸ್​ಸಿ ಪಡೆಯಲು ಬಳಸಬೇಕಾದ ಲಿಂಕ್ ಇದು:http://canarabank.com/IFSC.html
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 8 =
Remember me
