ಬೆಂಗಳೂರು:ನಕಲಿ ಫೇಸ್​ಬುಕ್​ ಖಾತೆ ತೆರೆದು ಐಜಿಪಿ ರೂಪಾ ಅವರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು ಕೆಲ ವಂಚಕರು ಹಣ ಕಸಿಯುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಸಕೋಲಿನ್ ಚೌದ್ರಿ ಶರ್ಮ್ ಎಂಬ ಫೇಸ್​ಬುಕ್ ಅಕೌಂಟ್​ಗೆ ರೂಪ ಅವರ ಪೋಟೋ ಬಳಕೆ ಮಾಡಲಾಗಿದೆ. ಹಲವು ಜನರಿಗೆ ಇದೇ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದು, ಫ್ರೆಂಡ್ಸ್​ ಆದವರಿಗೆ ನಂತರ ಮೇಸೆಂಜರ್​ನಲ್ಲಿ ನಾನು ಅಸ್ಸಾಂ ಸಿವಿಲ್ ಸರ್ವೆಂಟ್ ಎಂದು ಮೇಸೆಜ್ ಮಾಡಿ ಫೋನ್​ ನಂಬರ್ ಸಂಗ್ರಹಿಸಲಾಗುತ್ತಿತ್ತು.
ಇದನ್ನೂ ಓದಿ:ರೂಪಾಂತರಿ ಭಯ ಬೇಡ; ಹೊಸ ಪ್ರಭೇದ ವೈರಸ್ ಹೆಚ್ಚು ತೀಕ್ಷ್ಣತೆ ಕಂಡಿಲ್ಲ ಎಂದು ತಜ್ಞರ ಅಭಿಮತ
ನಾಲ್ಕು ಐದು ವಾಟ್ಸ್​ಆ್ಯಪ್​ ಗ್ರೂಪ್ ಮಾಡಿ ಚಾರಿಟಬಲ್ ಟ್ರಸ್ಟ್​ಗೆ ಹಣ ನೀಡುವಂತೆ ಗ್ರೂಪ್​ನಲ್ಲಿ ಮೆಸೇಜ್ ಹಾಗೂ ವಾಯ್ಸ್ ಮೇಸೆಜ್ ಮಾಡಲಾಗುತ್ತಿತ್ತು. ಹಲವಾರು ಜನ ಇದನ್ನು ನಂಬಿ ಹಣವನ್ನು ಕೂಡ ಕಳುಹಿಸಿದ್ದಾರೆ. ಇದೀಗ ಅಸ್ಸಾಂನ ಕೆಲವರು ಐಜಿಪಿ ರೂಪಾಗೆ ಫೋನ್​ ಮಾಡಿ, ನಿಮ್ಮ ಪೋಟೋವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ತಕ್ಷಣ ಎಚ್ಚೆತ್ತುಕೊಂಡಿರುವ ರೂಪಾ ಅವರು ಬೆಂಗಳೂರು ಸೈಬರ್ ಪೊಲೀಸರಿಗೆ ಮಾಹಿತಿ ನೀಡಿ, ದೂರು ದಾಖಲಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:‘ದೃಶ್ಯ’ ಸಿನಿಮಾ ಕಥೆ ನೆನಪಿಸಿತು ಅರ್ಚಕರ ಕೊಲೆ ರಹಸ್ಯ; ಕ್ಲೈಮ್ಯಾಕ್ಸ್​ನತ್ತ ತನಿಖೆ…
ಬಿಜೆಪಿ ಶಾಸಕನಿಗೆ ಖಡಕ್​ ಎಚ್ಚರಿಕೆ ನೀಡಿದ ಹುಬ್ಬಳ್ಳಿ ಹುಲಿ ವಿಶ್ವನಾಥ ಸಜ್ಜನರ್..!

VIDEO| ಭಾರೀ ಗಾತ್ರದ ಮೊಸಳೆಯ ಮಿಂಚಿನ ವೇಗದ ಬೇಟೆ ನೋಡಿ ಬೆಕ್ಕಸ ಬೆರಗಾದ ನೆಟ್ಟಿಗರು!

ಕಮಲ್​ ಹಾಸನ್​ ಪ್ರಣಾಳಿಕೆ ನೋಡಿ ಗೃಹಿಣಿಯರಿಗೆ ಖುಷಿಯೋ ಖುಷಿ: ಅಂಥದ್ದೇನಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
