
ಬೆಂಗಳೂರು:ಐಹೊಳೆಯ 3 ದೇವಸ್ಥಾನಗಳ ಸಂಕೀರ್ಣ ಹಾಗೂ ಐದು ಸ್ಮಾರಕಗಳನ್ನ ಅಭಿವೃದ್ಧಿಗಾ ಸರ್ಕಾರ ಧರ್ಮಸ್ಥಳದ ಮಂಜುನಾಥೇಶ್ವರ ಟ್ರಸ್ಟ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ.ಒಡಂಬಡಿಕೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್, ಸ್ಮಾರಕ ದತ್ತಿ ಕಾರ್ಯಕ್ರಮ ಜೊತೆಗೆ, ಸ್ಮಾರಕ ದರ್ಶನ ಕಾರ್ಯಕ್ರಮ ಪ್ರಾರಂಭಿಸಿದ್ದೇವೆ ಎಂದರು.ಬಸವಣ್ಣ ಜನ್ಮಸ್ಥಳ, ಶಿರೋಳದ ದೊಡ್ಡ ದೇವಸ್ಥಾನಗಳ ಸಂಕೀರ್ಣ ನೋಡಿದ್ದೇವೆ. ಬಾಗಲಕೋಟೆಯ ಐಹೊಳೆ ವೀಕ್ಷಣೆ ಮಾಡಿದಾಗ ಯಾರಿಗೂ ಖುಷಿ ಇರಲಿಲ್ಲ. ಒಟ್ಟು 120 ಸ್ಮಾರಕಗಳಿದ್ದು, 50 ಸ್ಮಾರಕ ಕೇಂದ್ರ ನೋಡಿಕೊಳ್ಳುತ್ತಿದೆ. 60-70 ಸ್ಮಾರಕಗಳು ನೋವನ್ನ ತರುವ ರೀತಿಯಲ್ಲಿದ್ದ ಕಾರಣ ಇದನ್ನು ಸಂರಕ್ಷಣೆ ಮಾಡಲು ನಿರ್ಧರಿಸಿದ್ದೆವು ಎಂದರು.ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದ್ರು ಅದನ್ನ ಸಂರಕ್ಷಣೆ ಮಾಡಲಾಗಿಲ್ಲ. ನಾವೆಲ್ಲಾ ಇತಿಹಾಸ ಸಂರಕ್ಷಣೆ ಮಾಡಬೇಕು. ಆದರೆ ಐಹೊಳೆಯಲ್ಲಿ ಅದು ಸಾಧ್ಯವಾಗಿಲ್ಲ. ಸ್ಮಾರಕಗಳು ಶಿಥಿಲಾವಸ್ಥೆ ತಲುಪಿವೆ. ತಿಪ್ಪೆ ಹಾಕೋದು ಬಿಟ್ಟು, ದನ ಕರು ಕಟ್ಟೋದು, ಅನೇಕರು ವಾಸ ಮಾಡಿಕೊಂಡಿದ್ದಾರೆ. ಐಹೊಳೆ ತನ್ನ ಮೂಲ ಹಿರಿಮೆಯಂತೆ ಆಗಬೇಕು. ಮೊದಲಿನಂತೆ ಆಗಬೇಕು ಎಂದು ಈ ಕೆಲಸ ಮಾಡಲಾಗುತ್ತಿದೆ ಎಂದರು.ಇದೆಲ್ಲವನ್ನೂ ಪುನರ್ ಅಭಿವೃದ್ಧಿ ಮಾಡುವ ಸ್ಥೈರ್ಯ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಮಾತ್ರ ಇದೆ. ಹಾಗಾಗಿ ಅವರನ್ನ ಭೇಟಿ ಮಾಡಿ, ಚರ್ಚೆ ಮಾಡಿದೆವು. ಅವರೂ ಕೂಡ ಒಪ್ಪಿಕೊಂಡಿದ್ದಾರೆ. ಮೂರು ದೇವಾಲಯ ಸಂಕೀರ್ಣ ಹಾಗೂ ಐದು ಸ್ಮಾರಕಗಳ ನವೀಕರಣ ಮಾಡಲು ಅವರಿಗೆ ಕೊಡುತ್ತಿದ್ದೇವೆ ಎಂದರು.ರಾಜ್ಯದಲ್ಲಿ ಇಂತಹ 25 ಸಾವಿರಕ್ಕೂ ಹೆಚ್ಚು ಸ್ಮಾರಕ ಇದೆ. ಅದನ್ನ ಅಭಿವೃದ್ಧಿ ಪಡಿಸಲು ಜನರು ಮುಂದೆ ಬರಬೇಕು. ಎನ್‌ಆರ್‌ಐಗಳ ಜೊತೆ ಸಭೆ ಮಾಡಿದಾಗ 25 ಜನರು ಮುಂದೆ ಬಂದರು.ಅವರು ಒಂದೇ ಬೇಡಿಕೆ ಇಟ್ಟರು. ನವ್ಮಊರಿನ ಹೆಸರು ಹಾಕಿ ಅಂತ. ಅಭಿವೃದ್ಧಿ ಮಾಡೋದರಿಂದ ಸೌಂದರ್ಯ ಹೆಚ್ಚಾಗಲಿದೆ ಎಂದರು.
292 ದೇವಾಲಯ ಜೀರ್ಣೋದ್ಧಾರಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಸಚಿವ ಎಚ್.ಕೆ.ಕೆ ಪಾಟೀಲ್ ಅವರು ಮನೆಗೆ ಮಾತನಾಡಲು ಬಂದಿದ್ದರು. ನಮಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. 1999ರಲ್ಲಿ ಅನೇಕ ಕಡೆ ಹೋದಾಗ ಸುಂದರವಾಗಿದ್ದ ಕಲೆಗಳು ಈಗ ಶಿಥಿಲಾವಸ್ಥೆ ಆಗಿದೆ. ಹಾಳಾಗಿ ಹೋಗಲಿ ಅಂತ ಬಿಟ್ಟುಬಿಟ್ಟಿದ್ದಾರೆ. ಹಿಂದೆ ಯಾವ ರೀತಿ ಇತ್ತೋ, ಅದೇ ರೀತಿ ಮಾಡಲು ನಿರ್ಧಾರ ಮಾಡಿದ್ದೇವೆ. ಜೀರ್ಣೋದ್ಧಾರ ಆಗಿದೆ ಅಂತ ಗೊತ್ತಾಗಬಾರದು ಹಾಗೆ ಮಾಡಿದ್ದೆವು. ಅಲ್ಲೇ ಬಿದ್ದಿದ್ದ ಎಲ್ಲಾ ಕಲ್ಲುಗಳನ್ನ ಎತ್ತಿ ನಿಲ್ಲಿಸಿದ್ದೆವು. 1999ರಿಂದ ಇಲ್ಲಿಯವರೆಗೂ 292 ದೇವಾಲಯಗಳನ್ನ ಜೀರ್ಣೋದ್ಧಾರ ಮಾಡಿದ್ದೇವೆ ಎಂದರು.ರಾಣಿ ಸತೀಶ್ ಅವರು ಸಚಿವರಾಗಿದ್ದಾಗ ಸರ್ಕಾರ ಕೂಡ ಕೈ ಜೋಡಿಸೋದಾಗಿ ಹೇಳಿದ್ದರು.ಜೀರ್ಣೋದ್ಧಾರ ಆದ ಬಳಿಕ ಜನ ಬರಬೇಕು, ಭಕ್ತರು ಬರಬೇಕು. ಇಲ್ಲದೇ ಹೋದರೆ ಮತ್ತೆ ಶಿಥಿಲಾವಸ್ಥೆ ಆಗಲಿದೆ. 292 ದೇವಾಲಯಗಳನ್ನ ಮೂಲ ಸ್ವರೂಪ ಮಾಡಿದ್ದೇವೆ. ಇದಕ್ಕೆ ನನ್ನ ಸಹೋದರ ಸುರೇಂದ್ರ ಹೆಗಡೆ ಕೂಡ ಕಾರಣ ಎಂದರು.ದಾಳಿಗೊಳಗಾದ ದೇವಸ್ಥಾನ ಕೂಡ ಪುನರ್ ನಿರ್ಮಾಣ ಮಾಡಿದ್ದೇವೆ. ಪ್ರತೀ ತಿಂಗಳು ಧರ್ಮಸ್ಥಳದಿಂದ ನೂರಾರು ದೇವಸ್ಥಾನಕ್ಕೆ ಸಹಾಯ ಮಾಡಲಾಗುತ್ತಿದೆ. ಆದ್ರೆ ಇದು ಸ್ಮಾರಕಗಳು. ಹಾಗಾಗಿ ಜವಾಬ್ದಾರಿ ಹೆಚ್ಚು. ಈ ಹೊಸ ಜವಬ್ದಾರಿಯನ್ನು ಎರಡುವರೆ ವರ್ಷಗಳಲ್ಲಿ ಮುಗಿಸಲು ಉದ್ದೇಶಿಸಲಾಗಿದೆ ಎಂದರು.ಸರ್ಕಾರ ಅಲ್ಲಿ ವಾಸವಾಗಿರೊ ಜನರನ್ನ ಯೋಗ್ಯ ಸ್ಥಳಕ್ಕೆ ಸ್ಥಳಾಂತರ ಮಾಡಬೇಕಿದೆ. ವಿದೇಶಗಳಿಗೆ ಹೋದಾಗ ನಮಗೆ ಅನಿಸುತ್ತೆ, ನಮ್ಮಲ್ಲಿ ಇದಕ್ಕಿಂತ ಉತ್ತಮ ಸ್ಮಾರಕ ಇದೆ ಅಂತ. ಆದರೆ, ಅದನ್ನ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಹೋಟೆಲ್ ಸೇರಿದಂತೆ ಎಲ್ಲವನ್ನೂ ಮಾಡಿದ್ರೆ ಟೂರಿಸಂ ಮತ್ತಷ್ಟು ಬೆಳೆಯಲಿದೆ ಎಂದರು.ಎಷ್ಟೇ ಕ್ಲಿಷ್ಟ ಪರಿಸ್ಥಿತಿ ಇದ್ರೂ, ಪುನರ್ ನಿರ್ಮಾಣ ಮಾಡ್ತೀವಿ. ಇಲ್ಲಿರೋ ದೇವಾಲಯಗಳನ್ನೂ ಕೂಡ ಪುನರ್ ನಿರ್ಮಾಣ ಮಾಡುತ್ತೇವೆ. ಅಲ್ಲಿರೋ ಒತ್ತುವರಿ ತೆರವು ಮಾಡಿಕೊಟ್ರೆ, ಶೀಘ್ರವೇ ಕಾರ್ಯಾರಂಭ ಮಾಡುತ್ತೇವೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 3 =
Remember me
