ಬೆಂಗಳೂರು:ಮಹಿಳಾ ಇನ್​ಸ್ಪೆಕ್ಟರ್​ವೊಬ್ಬರು ಮನೆ ಮುಂದೆ ಕೂತಿದ್ದವನನ್ನು ಕರೆದುಕೊಂಡು ಬಂದು ಗಾಂಜಾ ಸೇದಿಸಿ, ಕೇಸ್ ಜಡಿದಿದ್ದರೆ, ಎಸ್​​ಐ ಒಬ್ಬರು ಈ ಸಂಬಂಧದ ತನಿಖೆ ವೇಳೆ ಡಿಸಿಪಿಯನ್ನೇ ಸ್ಟಿಂಗ್ ಆಪರೇಷನ್​ ಮಾಡಲು ಹೋಗಿದ್ದರು. ಇದೀಗ ಇಬ್ಬರ ಮೇಲಿನ ಆರೋಪ ಇಲಾಖೆಯ ಆಂತರಿಕ ತನಿಖೆಯಲ್ಲಿ ದೃಢಪಟ್ಟಿದೆ.
ಆರ್​ಎಂಸಿ ಯಾರ್ಡ್ ಪೊಲೀಸ್ ಇನ್​ಸ್ಪೆಕ್ಟರ್​ ಪಾರ್ವತಮ್ಮ ಹಾಗೂ ಸಬ್​ ಇನ್​ಸ್ಪೆಕ್ಟರ್​ ಅಂಜಿನಪ್ಪ ವಿರುದ್ಧ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆದಿದೆ. ಪಾರ್ವತಮ್ಮ, ಅಂಜಿನಪ್ಪ ಹಾಗೂ ಇಬ್ಬರು ಸಿಬ್ಬಂದಿ ಸೇರಿ ನಾಲ್ವರು ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೆಚ್ಚುವರಿ ಆಯುಕ್ತ ಎಸ್. ಮುರುಗನ್ ತಿಳಿಸಿದ್ದಾರೆ.
ಇದನ್ನೂ ಓದಿ:ಅವನು ಬಂದರೆ ಹಿಡಿದು ನನಗೊಪ್ಪಿಸಿ: ಅಪ್ಪ-ಮಗನ ವಿರುದ್ಧ ನಿರ್ದೇಶಕರಿಂದ ಎರಡೆರಡು ಕಡೆ ದೂರು
ಜುಲೈ 14ರಂದು ಗಸ್ತಿನಲ್ಲಿದ್ದ ಇನ್​​ಸ್ಪೆಕ್ಟರ್ ಪಾರ್ವತಮ್ಮ ಹಾಗೂ ಎಸ್​ಐ ಅಂಜಿನಪ್ಪ ಅವರು ಶಿವರಾಜ್​ ಹಾಗೂ ನಾಗೇಂದ್ರ ಎಂಬವರನ್ನು ವಶಕ್ಕೆ ಪಡೆದಿದ್ದರು. ಈ ಸಂದರ್ಭ ನಾಗೇಂದ್ರನ ಮೇಲೆ ಪೆಟ್ಟಿ ಕೇಸ್​ ಹಾಕಿದ್ದ ಇವರು, ಶಿವರಾಜ್​ ಗಾಂಜಾಮಿಶ್ರಿತ ಸಿಗರೇಟ್​ ಬಲವಂತವಾಗಿ ಸೇದುವಂತೆ ಮಾಡಿ ಆತನ ವಿರುದ್ಧ ಗಾಂಜಾ ಕೇಸ್ ದಾಖಲಿಸಿದ್ದರು. ಇದರಿಂದ ನೊಂದಿದ್ದ ಜುಲೈ 17ರಂದು ಆತ್ಮಹತ್ಯೆಗೆ ಯತ್ನಿಸಿದ್ದು, ಜುಲೈ 19ರಂದು ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂದರ್ಭದಲ್ಲಿ ಇನ್​ಸ್ಪೆಕ್ಟರ್ ಹಾಗೂ ಎಸ್​​ಐ ವಿರುದ್ಧ ಆರೋಪ ಬಂದಿದ್ದರಿಂದ ಆಂತರಿಕ ತನಿಖೆ ನಡೆಸಲಾಗಿದೆ ಎಂದು ಮುರುಗನ್ ತಿಳಿಸಿದ್ದಾರೆ.
ಮನೆಮುಂದೆ ಕೂತಿದ್ದ ಶಿವರಾಜ್​ನನ್ನು ಜೀಪ್​ನಲ್ಲಿ ಕರೆತಂದಿದ್ದ ಇನ್​ಸ್ಪೆಕ್ಟರ್ ಪಾರ್ವತಮ್ಮ, ಗಾಂಜಾ ಸೇದಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಆತ ಸೇವನೆ ಮಾಡಿಲ್ಲ ಎಂದಿದ್ದಾಗ ಸಿಗರೇಟ್​ಗೆ ಗಾಂಜಾ ಸೇರಿಸಿ, ಗಾಂಜಾ ಸೇವನೆ ಮಾಡದಿದ್ದರೆ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಸಿ ಸೇದಿಸಿದ್ದಾರೆ. ನಂತರ ವೈದ್ಯಕೀಯ ಪರೀಕ್ಷೆ ಮಾಡಿಸಿ ಗಾಂಜಾ ಸೇವನೆ ಆರೋಪ ಹೊರಿಸಿ ಕೇಸ್ ದಾಖಲಿಸಿದ್ದರು. ಇದರಿಂದ ನೊಂದಿದ್ದ ಶಿವರಾಜ್​ ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬುದು ಡಿಸಿಪಿ ಧರ್ಮೇಂದ್ರ ಅವರು ನಡೆಸಿದ್ದ ಆತಂರಿಕ ತನಿಖೆಯಲ್ಲಿ ಕಂಡುಬಂದಿದೆ.
ಇದನ್ನೂ ಓದಿ:ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..
ಡಿಸಿಪಿಗೇ ಸ್ಟಿಂಗ್ ಆಪರೇಷನ್​:ಈ ಪ್ರಕರಣದ ಆತಂರಿಕ ತನಿಖೆ ವೇಳೆ ಡಿಸಿಪಿಯನ್ನೇ ಸ್ಟಿಂಗ್ ಆಪರೇಶನ್ ಮಾಡಿ ಸಿಕ್ಕಿ ಹಾಕಿಸಲು ಯತ್ನಿಸಿದ್ದ ಎಸ್​ಐ ಅಂಜಿನಪ್ಪ ಸಿಕ್ಕಿಹಾಕಿಕೊಂಡಿದ್ದಾನೆ. ತಮ್ಮ ಕಚೇರಿಗೆ ಕರೆಸಿ ಮಾಹಿತಿ ಪಡೆಯುತ್ತಿದ್ದ ವೇಳೆ, ಅಂಜಿನಪ್ಪ ಅನುಮಾನಾಸ್ಪದವಾಗಿ ವರ್ತಿಸಿದ್ದ. ಇದನ್ನು ಗಮನಿಸಿದ ಡಿಸಿಪಿ ಬೇರೆ ಸಿಬ್ಬಂದಿಯಿಂದ ತಪಾಸಣೆ ಮಾಡಿಸಿದ್ದಾಗ, ಅಂಜಿನಪ್ಪ ಮೊಬೈಲ್​ಫೋನ್​ನಿಂದ ಆಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳಲು ಯತ್ನಿಸಿದ್ದು ಕಂಡುಬಂದಿದೆ. ಸದ್ಯ ಇನ್​ಸ್ಪೆಕ್ಟರ್​, ಎಸ್​ಐ ಹಾಗೂ ಇಬ್ಬರು ಸಿಬ್ಬಂದಿ ವಿರುದ್ಧ ನಡೆದಿರುವ ಆಂತರಿಕ ತನಿಖೆಯ ವರದಿಯನ್ನು ಡಿಸಿಪಿ ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಿದ್ದಾರೆ.
ಇವರು ಸಾಮಾನ್ಯ ಖದೀಮರಲ್ಲ; ಒಂದೇ ಖಾತೆಗೆ 102 ಬಾರಿ ಕನ್ನ ಹಾಕಿದ್ದರು, ತಮ್ಮದೇ ಹೆಸರಲ್ಲಿ 50 ಖಾತೆ ತೆರೆದಿದ್ದರು!

ಪ್ರವಾಸಿಗರೇ ಎಚ್ಚರ.. ಇಲ್ಲಿ ಮಾಸ್ಕ್​ ಧರಿಸದಿದ್ದರೆ 5 ಸಾವಿರ ರೂ. ದಂಡ ಇಲ್ಲವೇ 8 ದಿನ ಜೈಲುಶಿಕ್ಷೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + ten =
Remember me
