|ರಮೇಶ ದೊಡ್ಡಪುರಬೆಂಗಳೂರು
ರಾಜ್ಯದಲ್ಲಿ ಪುಸ್ತಕೋದ್ಯಮವನ್ನು ಉತ್ತೇಜಿಸುವ, ಆರೋಗ್ಯ ವ್ಯವಸ್ಥೆ ಸರಿಪಡಿಸುವ ಹಾಗೂ ಭಿಕ್ಷಾಟನೆಯನ್ನು ನಿಮೂಲನೆ ಮಾಡುವ ಮಹೋನ್ನತ ಉದ್ದೇಶದಿಂದ ಗ್ರಾಮೀಣ ಪ್ರದೇಶದ ತೆರಿಗೆದಾರರು ನೀಡಿದ ಸುಮಾರು 150 ಕೋಟಿ ರೂ. ಉಪಕರವನ್ನು(ಸೆಸ್) ಗ್ರಾಮ ಪಂಚಾಯಿತಿಗಳು ಅಕ್ರಮವಾಗಿ ತಮ್ಮಲ್ಲೇ ಖರ್ಚು ಮಾಡಿಕೊಳ್ಳುತ್ತಿವೆ. ಈ ಹಿಂದೆಯೇ ಉಚ್ಚ ನ್ಯಾಯಾಲಯದಲ್ಲಿ ಸ್ಪಷ್ಟ ನಿರ್ದೇಶನ ಸಿಕ್ಕಿ, ನಂತರ ಸಿಎಜಿ ವರದಿಯಲ್ಲಿ ಉಲ್ಲೇಖಿಸಿದ್ದರೂ ರಾಜ್ಯ ಸರ್ಕಾರ ಮಾತ್ರ ಈ ಹಣವನ್ನು ಸಂಗ್ರಹಿಸಲು ಗಂಭೀರ ಪ್ರಯತ್ನ ತೋರುತ್ತಿಲ್ಲ.
ಶೇ.90 ಪಾವತಿಯಾಗಬೇಕು:ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಅಧಿನಿಯಮ-1965ರ ಪರಿಚ್ಛೇದ 30(4), ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ-1975ರ ಪರಿಚ್ಛೇದ 31 ಹಾಗೂ ಕರ್ನಾಟಕ ಆರೋಗ್ಯ ಉಪಕರ ಅಧಿನಿಯಮ-1962ರ ಪರಿಚ್ಛೇದ 4ಎ ಅನ್ವಯ ಗ್ರಾಮ ಪಂಚಾಯಿತಿಗಳು ಸಂಗ್ರಹಿಸುವ ಭೂಮಿ ಮತ್ತು ಕಟ್ಟಡ ತೆರಿಗೆ ಮೇಲೆ ಸೆಸ್ ಸಂಗ್ರಹಿಸಲಾಗುತ್ತದೆ. ಅದರಂತೆ ಶೇ.15 ಆರೋಗ್ಯ ಸೆಸ್, ಶೇ.6 ಗ್ರಂಥಾಲಯ ಸೆಸ್ ಹಾಗೂ ಶೇ.3 ಭಿಕ್ಷಾಟನಾ ಸೆಸ್ ಪಡೆಯುತ್ತವೆ. ಸಂಗ್ರಹವಾದ ಹಣದಲ್ಲಿ ಶೇ.10ನ್ನು ಗ್ರಾಪಂಗಳು ಸಂಗ್ರಹಣಾ ವೆಚ್ಚವಾಗಿ ತಾವೇ ಇರಿಸಿಕೊಳ್ಳಬಹುದು. ಉಳಿದ ಶೇ.90 ಸೆಸ್ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ಅಥವಾ ಸಂಬಂಧಿತ ಪ್ರಾಧಿಕಾರಗಳಿಗೆ ನೀಡಬೇಕು. ಅಲ್ಲಿಂತ ಹಣವನ್ನು ನಿರ್ದೇಶಿತ ಉದ್ದೇಶಕ್ಕೆ ಬಳಸಬೇಕು.
59 ಗ್ರಾಪಂ ಸರ್ವೆ:ರಾಜ್ಯದಲ್ಲಿ ಸಂಗ್ರಹವಾಗು ತ್ತಿರುವ 3 ರೀತಿಯ ಸೆಸ್ ಸೂಕ್ತ ಕಾರ್ಯಕ್ಕೆ ಉಪಯೋಗ ವಾಗುತ್ತಿಲ್ಲ ಎಂಬ ಕುರಿತು ಮೊದಲಿಗೆ ಸಿಎಜಿ ವರದಿ ಸಿದ್ಧಪಡಿಸಿತ್ತು. ರಾಜ್ಯದಲ್ಲಿರುವ 6,022 ಗ್ರಾಪಂಗಳಲ್ಲಿ 59ನ್ನು ಮಾದರಿಯಾಗಿ ಆಯ್ಕೆ ಮಾಡಿಕೊಂಡು ಲೆಕ್ಕಪತ್ರ ಪರಿಶೀಲನೆ ಮಾಡಲಾಗಿತ್ತು. ಈ ಗ್ರಾಪಂಗಳಲ್ಲಿ 2012-2017ರ ಅವಧಿಯಲ್ಲಿ ಒಟ್ಟು 91 ಲಕ್ಷ ರೂ. ಆರೋಗ್ಯ ಸೆಸ್, 37 ಲಕ್ಷ ರೂ. ಗ್ರಂಥಾಲಯ ಸೆಸ್, 17 ಲಕ್ಷ ರೂ. ಭಿಕ್ಷಾಟನೆ ಸೆಸ್ ಸಂಗ್ರಹವಾಗಿತ್ತು. ಒಟ್ಟಾರೆ 59 ಗ್ರಾಪಂಗಳಿಂದ 1.45 ಕೋಟಿ ರೂ. ಸಂಗ್ರಹಿಸಲಾಗಿತ್ತು. ಈ ಹಣದಲ್ಲಿ ಶೇ.10ನ್ನು ಇರಿಸಿಕೊಂಡು ಶೇ.90ನ್ನು ಸರ್ಕಾರಕ್ಕೆ ಪಾವತಿಸುವ ಬದಲಿಗೆ ನಿಯಮಗಳನ್ನು ಹಾಗೂ ನ್ಯಾಯಾಲಯದ ಆದೇಶವನ್ನೂ ಉಲ್ಲಂಘಿಸಿ ವೇತನ ವೆಚ್ಚ, ಅಭಿವೃದ್ಧಿ ಕಾರ್ಯಗಳು, ಬೀದಿ ದೀಪದ ಬಿಲ್ ಪಾವತಿ, ನೀರಿನ ಬಿಲ್ ಪಾವತಿ ಮುಂತಾದ ಕಾರ್ಯಗಳಿಗೆ ವೆಚ್ಚ ಮಾಡಿಕೊಂಡಿದ್ದವು.
ಅಂದಾಜು 150 ಕೋಟಿ ರೂ.:ಸಿಎಜಿ ವರದಿ ಆಧರಿಸಿ ಕರ್ನಾಟಕ ಸಕಾರದ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯು ಪರಿಶೀಲನೆ ನಡೆಸಿದೆ. ನ್ಯಾಯಾಲಯ ಆದೇಶ ನೀಡಿ 10 ವರ್ಷ ಕಳೆದರೂ, ಸಿಎಜಿ ವರದಿ ನೀಡಿ ಮೂರು ವರ್ಷವಾದರೂ ಸ್ಥಿತಿಯಲ್ಲಿ ಬದಲಾಗಿಲ್ಲ. ಗ್ರಾಮ ಪಂಚಾಯಿತಿಗಳಿಂದ ಹಣ ವಸೂಲಿ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಈ ಕುರಿತು ಮಾಹಿತಿ ನೀಡಿರುವ ಸಮಿತಿ ಸದಸ್ಯರೊಬ್ಬರು, ಒಟ್ಟಾರೆ ರಾಜ್ಯದ 6,022 ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ 150 ಕೋಟಿ ರೂ. ಸೆಸ್ ಸಂಗ್ರಹವಾಗಿರಬಹುದು ಎಂದು ತಿಳಿಸಿದ್ದಾರೆ. ಸಂಗ್ರಹಿತ ಸೆಸ್ ವಸೂಲಿ ಮಾಡಲು ರಾಜ್ಯ ಸರ್ಕಾರ ಮುಂದಾಗಿಲ್ಲ. ಕೂಡಲೆ ಗ್ರಾಮ ಪಂಚಾಯಿತಿಗಳಿಂದ ಹಣ ವಸೂಲಿ ಮಾಡಬೇಕು ಹಾಗೂ ಈ ನ್ಯೂನತೆಗಳನ್ನು ಸರಿಪಡಿಸಲು ವಿಶೇಷ ನಿಯಮಗಳನ್ನು ರೂಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ; ಆರ್ಥಿಕ ಮುಗ್ಗಟ್ಟಿನಿಂದಾಗಿ ಸಾವಿಗೆ ಶರಣು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + one =
Remember me
