ರುದ್ರಣ್ಣ ಹರ್ತಿಕೋಟೆ
ಬೆಂಗಳೂರು:ಕರೊನಾ ಮಹಾಮಾರಿಯಿಂದ ಆರ್ಥಿಕತೆ ಮೇಲೆ ಕಾಮೋಡ ಕವಿದಿರುವ ಸಂದರ್ಭದಲ್ಲೇ, ಬ್ಯಾಂಕ್ ಖಾತೆಗಳಲ್ಲಿ ಕೊಳೆಯುತ್ತಿರುವ ಕಳ್ಳಗಂಟಿನ ಬೆನ್ನತ್ತಲು ರಾಜ್ಯ ಸರ್ಕಾರ ತೀರ್ವನಿಸಿದೆ. ವಿವಿಧ ಇಲಾಖೆಗಳು, ನಿಗಮ-ಮಂಡಳಿಗಳು ಬ್ಯಾಂಕ್​ಗಳಲ್ಲಿ ಅಕ್ರಮವಾಗಿ ಕೋಟ್ಯಂತರ ರೂ. ಠೇವಣಿ ಇಟ್ಟಿರುವ ಹಿಂದೆ ದೊಡ್ಡ ಜಾಲ ಇರಬಹುದೆಂಬ ಶಂಕೆ ಬಲಗೊಂಡಿದೆ. ಇದರ ಹಿಂದಿರುವ ವ್ಯಕ್ತಿಗಳನ್ನು ಪತ್ತೆಮಾಡಲು ಸರ್ಕಾರ ಗಂಭೀರ ಪ್ರಯತ್ನ ಆರಂಭಿಸಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆಯಲ್ಲಿ 700 ಕೋಟಿ ರೂ.ಗಳಿಗೂ ಹೆಚ್ಚಿನ ಅಕ್ರಮ ಠೇವಣಿ ಪತ್ತೆಯಾಗಿ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ಅಲ್ಲಿಂದೀಚೆಗೆ ಸಾಕಷ್ಟು ಚರ್ಚೆಗಳಾದರೂ ಅಕ್ರಮ ಠೇವಣಿ ಪೂರ್ಣ ಪ್ರಮಾಣದಲ್ಲಿ ಪತ್ತೆಯಾಗಿಲ್ಲ.
ಇದನ್ನೂ ಓದಿ:ಎಸ್​ಬಿಐ ಗ್ರಾಹಕರಿಗೊಂದು ಸಿಹಿ ಸುದ್ದಿ: ಸಾಲದ ದರ 15 ಮೂಲಾಂಶ ಕಡಿತ
ಏನಿದು ಕಳ್ಳಗಂಟು?:ವಿವಿಧ ಇಲಾಖೆ ಮತ್ತು ನಿಗಮಗಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಹಣ, ಕೇಂದ್ರದ ಪ್ರಾಯೋಜಕತ್ವದ ಯೋಜನೆಗಳಿಂದ ಬರುವ ಹಣವನ್ನು ಬೇರೆ ಬೇರೆ ಬ್ಯಾಂಕ್​ಗಳಲ್ಲಿ ಠೇವಣಿಯನ್ನಾಗಿಡಲಾಗುತ್ತದೆ. ಬಡ್ಡಿ ಲಪಟಾಯಿಸುವ ಸಲುವಾಗಿ ಕೆಲವು ಇಲಾಖೆಗಳು ಠೇವಣಿ ಇಟ್ಟಿರುವ ಮಾಹಿತಿಯನ್ನೇ ಸರ್ಕಾರಕ್ಕೆ ಕೊಡುವುದಿಲ್ಲ. ಕೆಲ ಪ್ರಕರಣಗಳಲ್ಲಿ ಸಿಎಜಿ ಆಕ್ಷೇಪ ವ್ಯಕ್ತಪಡಿಸಿದ್ದರೂ ಹಿಂದಿನ ಸರ್ಕಾರಗಳು ಗಂಭೀರವಾಗಿ ತೆಗೆದುಕೊಂಡಿಲ್ಲವೆಂದು ಹೇಳಲಾಗುತ್ತಿದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಬಡ್ಡಿಯನ್ನು ಲಪಟಾಯಿಸಲೆಂದು ನೆರೆ ರಾಜ್ಯಗಳ ಶಾಖೆಗಳಿಗೆ ಅಕ್ರಮವಾಗಿ ಠೇವಣಿ ವರ್ಗಾವಣೆ ಮಾಡಲಾಗುತ್ತದೆ. ಆ ನಂತರ ಬಡ್ಡಿ ಇರಲಿ, ಅಸಲು ಏನಾಗಿದೆ ಎಂಬುದೇ ತಿಳಿಯದಂಥ ಪರಿಸ್ಥಿತಿಯೂ ಇದೆ.
ಕೇಂದ್ರದ ನಿಯಮ ನೆಪ:ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅಕ್ರಮ ಠೇವಣಿ ಪ್ರಕರಣ ಪತ್ತೆಯಾದ ನಂತರ ಬೇರೆ ಬೇರೆ ಇಲಾಖೆ ಹಾಗೂ ನಿಗಮಗಳಲ್ಲಿ ಅಕ್ರಮ ಠೇವಣಿ ಹಾಗೂ ಖಾತೆಗಳನ್ನು ರದ್ದು ಮಾಡಿ ಖಜಾನೆಗಳ ಮೂಲಕ ನಿರ್ವಹಣೆಗೆ ಆರ್ಥಿಕ ಇಲಾಖೆ ಸೂಚನೆ ನೀಡಿತ್ತು. ಆದರೆ ಅನೇಕ ನಿಗಮ ಮತ್ತು ಇಲಾಖೆಗಳು ಕೇಂದ್ರ ಸರ್ಕಾರದ ನಿಯಮ ನೆಪವೊಡ್ಡಿ ತಪ್ಪಿಸಿಕೊಳ್ಳುತ್ತಿವೆ. ಇಲಾಖೆಗಳಿಗೆ ಪ್ರತ್ಯೇಕ ಖಾತೆಗಳಿರಬೇಕೆಂದು ಕೇಂದ್ರದ ನಿಯಮಗಳಲ್ಲಿದೆ.
ಇದನ್ನೂ ಓದಿ:ಮಾತೃ ಹೃದಯಕ್ಕೆ ಸಾಟಿ ಎಲ್ಲಿ? ಮರಿ ಎತ್ತಿಕೊಂಡು ಎಮರ್ಜೆನ್ಸಿ ವಾರ್ಡ್​ನತ್ತ ಓಡಿದ ಬೆಕ್ಕು!.
1325 ಕೋಟಿಗೆ 1121 ಖಾತೆ!:ವಿವಿಧ ಮಂಡಳಿಗಳಲ್ಲಿ 1325 ಕೋಟಿ ರೂ.ಗಳ ನಿರ್ವಹಣೆಗೆ 1121 ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂಬ ಮಾಹಿತಿ ಆರ್ಥಿಕ ಇಲಾಖೆಗೆ ಲಭ್ಯವಾಗಿತ್ತು. ಆ ನಂತರ ಖಾತೆಗಳನ್ನು ಸ್ಥಗಿತ ಮಾಡಲು ಸರ್ಕಾರ ನಿರ್ಧರಿಸಿತ್ತು ಎಂದು ಮೂಲಗಳು ಹೇಳುತ್ತವೆ.
ದೊಡ್ಡ ಜಾಲದ ಶಂಕೆ:ಬ್ಯಾಂಕ್​ಗಳಲ್ಲಿ ಠೇವಣಿ ಇರಿಸುವ ಮೂಲಕ ಭರ್ಜರಿ ಆಮಿಷ ತೋರಿಸಿ ಅಧಿಕಾರಿಗಳನ್ನು ಅಕ್ರಮದ ಪಾಲುದಾರರನ್ನಾಗಿ ಮಾಡಲಾಗುತ್ತಿದೆ. ಇಲ್ಲಿ ದೊಡ್ಡ ಜಾಲವೊಂದು ಕೆಲಸ ಮಾಡುತ್ತಿರುವುದರಿಂದಾಗಿ ಬಹುತೇಕ ನಿಗಮಗಳಲ್ಲಿ ಇಂತಹ ಕಳ್ಳಗಂಟು ಅಕ್ರಮ ಜಾಲ ವಿಸ್ತರಿಸಿದೆ ಎಂಬುದು ಸರ್ಕಾರದ ಗುಮಾನಿ. ಸಿಸಿಬಿ ತನಿಖೆಯ ಪರಿಣಾಮ ಕೃಷಿ ಮಾರುಕಟ್ಟೆ ಮಂಡಳಿಯಲ್ಲಿ 50 ಕೋಟಿ ರೂ. ನಾಪತ್ತೆ ಆಗುವುದು ಸ್ವಲ್ಪದರಲ್ಲಿ ತಪ್ಪಿತ್ತು. ಆದ್ದರಿಂದ ಸರ್ಕಾರ ಇತರ ಇಲಾಖೆಗಳನ್ನೂ ಶೋಧಿಸಲು ಮುಂದಾಗಿದೆ.
ತಪಾಸಣೆ ಅಪೂರ್ಣ:ಹಿಂದಿನ ಸರ್ಕಾರದ ಅವಧಿಯಲ್ಲಿ ಕಳ್ಳಗಂಟು ಪತ್ತೆ ಹಚ್ಚುವುದಕ್ಕಾಗಿಯೇ 2008ರಿಂದ ಲೆಕ್ಕಪತ್ರ ತಪಾಸಣೆ ನಡೆಸಲು ತೀರ್ವನಿಸಿ ಆರ್ಥಿಕ ಇಲಾಖೆ ಲೆಕ್ಕ ಪರಿಶೋಧಕರ ಸಮಿತಿ ರಚಿಸಲಾಗಿತ್ತು. ಆದರೆ ಬಹುತೇಕ ಇಲಾಖೆಗಳಲ್ಲಿ ಈ ಕಾರ್ಯಕ್ಕೆ ಸಹಕಾರ ಸಿಗದ್ದರಿಂದ ಲೆಕ್ಕ ಪರಿಶೋಧನೆಯ ಪ್ರಯತ್ನ ಅರ್ಧಕ್ಕೆ ನಿಂತುಹೋಗಿತ್ತು.
ಇದನ್ನೂ ಓದಿ:PHOTOS: ಕಾಂಗೋ ಗೊರಿಲ್ಲಾಗಳ 12 ರಕ್ಷಕರನ್ನೇ ಕೊಂದು ಹಾಕಿದ್ರು ಬಂಡುಕೋರರು!
ಮಾಹಿತಿ ಸಂಗ್ರಹ:ಯಾವ್ಯಾವ ಇಲಾಖೆ ಹಾಗೂ ನಿಗಮಗಳು ಎಲ್ಲೆಲ್ಲಿ ಠೇವಣಿ ಇಟ್ಟಿವೆ ಎಂಬ ಬಗ್ಗೆ ಮಾಹಿತಿ ಪಡೆಯುವಂತೆ ಸರ್ಕಾರ ಸಿಸಿಬಿಗೆ ಸೂಚನೆ ನೀಡಿದೆ. ಈಗಾಗಲೇ ಮಾಹಿತಿ ಸಂಗ್ರಹ ಆರಂಭಿಸಿರುವ ಸಿಸಿಬಿ ವಾರದೊಳಗೆ ಸರ್ಕಾರಕ್ಕೆ ವಿವರವಾದ ವರದಿ ಸಲ್ಲಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಎಲ್ಲೆಲ್ಲಿ ದೂರು?:ಹಿಂದಿನ ಸರ್ಕಾರದ ಅವಧಿಯಲ್ಲಿ ಕಾರಾಗೃಹ, ರಾಜೀವ್​ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ಬಿಡಿಎ, ಸರ್ವಶಿಕ್ಷಾ ಅಭಿಯಾನ, ಮಾಲಿನ್ಯ ನಿಯಂತ್ರಣ ಮಂಡಳಿ, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಗೃಹ ಮಂಡಳಿ, ಕಟ್ಟಡ ಕಾರ್ವಿುಕರ ಕಲ್ಯಾಣ ಮಂಡಳಿ ಸೇರಿ ಬೇರೆ ಬೇರೆ ನಿಗಮ ಮತ್ತು ಮಂಡಳಿಗಳು ಬ್ಯಾಂಕ್​ಗಳಲ್ಲಿ ಠೇವಣಿ ಇಟ್ಟಿರುವ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಿದೆ ಎಂದು ತಿಳಿದು ಬಂದಿದೆ.
ಬಿಗಿ ಕ್ರಮಕ್ಕೆ ನಿರ್ಧಾರ:ಸಿಸಿಬಿ ವರದಿ ಸಲ್ಲಿಸಿದ ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬ್ಯಾಂಕ್​ಗಳ ಮ್ಯಾನೇಜರ್, ಇಲಾಖೆ ಹಾಗೂ ನಿಗಮಗಳ ಮುಖ್ಯಸ್ಥರ ಸಭೆ ನಡೆಸಿ ಠೇವಣಿ ದುರುಪಯೋಗವಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಿದ್ದಾರೆ. ಬಡ್ಡಿಯ ಮೊತ್ತ ದುರುಪಯೋಗ ವಾಗದೆ ಸರ್ಕಾರಕ್ಕೆ ಸೇರುವಂತೆ ಕ್ರಮ ಜರುಗಿಸಲಿದ್ದಾರೆ.
ಇದನ್ನೂ ಓದಿ:COVID19- ಅಶ್ವಗಂಧದ ನಿಯಂತ್ರಿತ ಕ್ಲಿನಿಕಲ್ ಟ್ರಯಲ್​ಗೆ ಮುಂದಾಗಿದೆ ಸರ್ಕಾರ
15 ಸಾವಿರ ಕೋಟಿ ರೂಪಾಯಿ:ಸರ್ಕಾರದ ಒಂದು ಅಂದಾಜಿನ ಪ್ರಕಾರ, ವಿವಿಧ ನಿಗಮಗಳಿಂದ ಬ್ಯಾಂಕ್​ಗಳಲ್ಲಿಡಲಾಗಿರುವ ಠೇವಣಿ ಮೊತ್ತ 15 ಸಾವಿರ ಕೋಟಿ ರೂ.ದಾಟುವ ಅಂದಾಜಿದೆ. ಕಟ್ಟಡ ಕಾರ್ವಿುಕರ ಮಂಡಳಿಯೇ 6000 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ವಿವಿಧ ಬ್ಯಾಂಕ್​ಗಳಲ್ಲಿ ಠೇವಣಿಯನ್ನಿಟ್ಟಿದೆ.
ಹಿಂದಿನ ಆರೋಪಗಳು…01ಕಲರ್ ಜೆರಾಕ್ಸ್ ಧೋಖಾ:ಪ್ರಮುಖ ಮಂಡಳಿಯೊಂದು 10 ಕೋಟಿ ರೂ.ಗಳ ಠೇವಣಿಯನ್ನು ಬ್ಯಾಂಕೊಂದರ ಎರಡು ಖಾತೆಗಳಲ್ಲಿಟ್ಟಿತ್ತು. ಬ್ಯಾಂಕ್ ಹಾಗೂ ಮಂಡಳಿ ಸಿಬ್ಬಂದಿ ಶಾಮೀಲಾಗಿ ಠೇವಣಿ ಬಾಂಡ್​ನ ಕಲರ್ ಜೆರಾಕ್ಸ್ ಪಡೆದು ಹಣ ದುರುಪಯೋಗ ಮಾಡಿದ್ದರು. ಬಾಂಡ್​ನ ಕಲರ್ ಜೆರಾಕ್ಸ್ ಪ್ರತಿಯನ್ನು ಅಧಿಕಾರಿಗಳ ಸೂಚನೆಯಂತೆ ಬ್ಯಾಂಕ್​ಗೆ ತಂದುಕೊಟ್ಟಿದ್ದ ಡಿ ಗ್ರೂಪ್ ನೌಕರರನ್ನು ಅಮಾನತು ಮಾಡಲಾಗಿತ್ತು. ಈ ಪ್ರಕರಣದ ತನಿಖೆ ಇನ್ನೂ ನಡೆದಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ವಿಚಾರಣೆ ನಡೆಸಿದೆ.02ಪಕ್ಕದ ರಾಜ್ಯದಲ್ಲೂ ಅಕ್ರಮ:ಮತ್ತೊಂದು ಪ್ರಮುಖ ನಿಗಮ 12 ಕೋಟಿ ರೂ. ಠೇವಣಿಯನ್ನು ಬ್ಯಾಂಕ್​ವೊಂದರ ರಾಜಾಜಿನಗರ ಶಾಖೆಯಲ್ಲಿ ಠೇವಣಿ ಇಟ್ಟಿತ್ತು. ಮಂಡಳಿಯ ಆಡಳಿತ ಮಂಡಳಿ ಗಮನಕ್ಕೂ ಬಾರದೇ ಠೇವಣಿ ತಮಿಳುನಾಡಿನ ಎರಡು ಶಾಖೆಗಳಿಗೆ ವರ್ಗಾವಣೆಯಾಗಿತ್ತು. ಆ ನಂತರ ಹಣ ಏನಾಗಿದೆ ಎಂಬ ವಿಚಾರದಲ್ಲಿ ತನಿಖೆ ನಡೆದಿದೆ. ಬ್ಯಾಂಕ್ ಅಧಿಕಾರಿಗಳು ಅಮಾನತುಗೊಂಡಿದ್ದಾರೆ ಎನ್ನಲಾಗಿದೆ. ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ವಿಚಾರಣೆ ನಡೆಸಿದೆ.
ಎಟಿಎಂ ಹಾನಿ ರಹಸ್ಯ ಬಯಲು, ಇದನ್ನು ಓದಿದ್ರೆ ಗ್ಯಾರಂಟಿ ನಗ್ತೀರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 3 =
Remember me
