ಹಾನಗಲ್ಲ:ಭೀಕರ ಪ್ರವಾಹದಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ರೈತರಿಗೆ ಬಿಡುಗಡೆಯಾದ ಪರಿಹಾರ ವನ್ನು ರೈತರ ಹೆಸರಲ್ಲಿ ಅಧಿಕಾರಿಗಳೇ ಲೂಟಿ ಹೊಡೆಯುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಸರ್ಕಾರಿ ಜಮೀನು, ಗೋಮಾಳ, ಕೆರೆ-ಕಟ್ಟೆಗೂ ಬೆಳೆ ಪರಿಹಾರ ಪಡೆದು ಸರ್ಕಾರಕ್ಕೆ ವಂಚಿಸಿರುವುದು ಒಂದೆಡೆಯಾದರೆ ಶಾಲಾ ಮಕ್ಕಳು, ಗ್ರಾಮಗಳನ್ನು ತೊರೆದು ಬೇರೆಡೆ ವಾಸವಾಗಿರುವವರ ಬ್ಯಾಂಕ್ ಖಾತೆಗಳಿಗೂ ಹಣ ವರ್ಗಾಯಿಸಿಕೊಂಡ ದಾಖಲೆಗಳು ‘ವಿಜಯವಾಣಿ’ಗೆ ಲಭ್ಯವಾಗಿವೆ.
ಅವ್ಯವಹಾರ ಹೇಗೆ?:ಎಷ್ಟೇ ಜಮೀನಿದ್ದರೂ 2 ಹೆಕ್ಟೇರ್​ಗೆ ಪರಿಹಾರ ನೀಡಲಾಗುತ್ತದೆ. ದೊಡ್ಡ ಹಿಡುವಳಿದಾರರು 2 ಹೆಕ್ಟೇರ್ ಪರಿಹಾರಕ್ಕಾಗಿ ಅವರದ್ದೇ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಜೋಡಣೆ ಮಾಡಿದ್ದಾರೆ. ಆದರೆ. ಇವರ ಉಳಿಕೆ ಜಮೀನಿಗೆ ಬೇರೆಯವರ ಆಧಾರ್, ಬ್ಯಾಂಕ್ ಖಾತೆ ಜೋಡಿಸಿ, ಪರಿಹಾರ ಹಣವನ್ನು ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಕೆಲವರು ಕೊಳ್ಳೆ ಹೊಡೆದಿದ್ದಾರೆ. ಇನ್ನೊಂದೆಡೆ 2 ಹೆಕ್ಟೇರ್ ಜಮೀನಿದ್ದರೂ, ಅದಕ್ಕಿಂತಲೂ ಕಡಿಮೆ ಜಮೀನಿಗೆ ಪರಿಹಾರ ದಾಖಲಿಸಿ, ಇನ್ನುಳಿದ ಜಮೀನಿಗೆ ಬೇರೆಯವರ ಆಧಾರ್, ಖಾತೆ ಸಂಖ್ಯೆ ನೀಡಿ ಪರಿಹಾರ ವರ್ಗಾಯಿಸಿದ್ದಾರೆ. ಇಷ್ಟಾದರೂ ಈ ಅಕ್ರಮ ರೈತರಿಗೆ ಗೊತ್ತಾಗೇ ಇಲ್ಲ. ಪರಿಹಾರ ಕೊಡಿ ಎಂದು ನಿತ್ಯವೂ ಕೇಳುತ್ತಲೇ ಇದ್ದಾರೆ.
ಪ್ರಕರಣ 1:ಶಿರಗೋಡದ ರೈತ ಪುಟ್ಟಪ್ಪ ದ್ಯಾವಪ್ಪ ಕಲ್ಲಾಪುರ ಅವರ 2 ಹೆಕ್ಟೇರ್ ಜಮೀನಿಗೆ ಸಂಬಂಧಿಸಿದ ಪರಿಹಾರದ ಹಣ 46,528 ರೂ. ನವ್ಯಾ ಚನ್ನಗೌಡರ ಎಂಬುವರ ಖಾತೆಗೆ ಜಮೆ ಆಗಿದೆ. ಇದೇ ರೈತನ ಜಂಗಿನಕೊಪ್ಪ ಗ್ರಾಮದ ರಿ.ಸ.ನಂ. 214/1ರ 4 ಎಕರೆ ಜಮೀನಿನ ಪರಿಹಾರ 37,598 ರೂ. ಹಿರೇಕೆರೂರಿನ ವಿದ್ಯಾರ್ಥಿನಿ ಭಾವನಾ ಬಸವರಾಜ ಚಿಂದಿ ಬ್ಯಾಂಕ್ ಖಾತೆಗೆ ಜಮೆ ಆಗಿದೆ. ಇದೇ ರೈತನ ಇನ್ನೊಂದು ಜಮೀನಿನ ಪರಿಹಾರ 18,796 ರೂ. ಮತ್ತೊಬ್ಬರ ಖಾತೆಗೆ ಜಮೆಗೊಂಡಿದೆ. ಈ ಕುರಿತು 3 ಗ್ರಾಮಗಳ ಫಲಾನುಭವಿಗಳ ಪಟ್ಟಿ ಪರಿಶೀಲಿಸಿದಾಗ ಅದೇ ರೈತನ ಹೆಸರಿದ್ದರೂ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಬದಲಿ ಇರುವುದು ಕಂಡುಬಂದಿದೆ.
ಪ್ರಕರಣ 2:ಮಾವಕೊಪ್ಪ ಗ್ರಾಮದ ಸರ್ಕಾರಿ ನೀರಾವರಿ ಕೆರೆ ರಿ.ಸ.ನಂ.20ರ 2 ಎಕರೆ ದಾಖಲೆ ಮೇಲೆ ಇದೇ ಗ್ರಾಮದ ರೈತ ನೂರಪ್ಪ ಲಮಾಣಿ ಖಾತೆಗೆ 13,438 ರೂ. ಜಮೆಯಾಗಿದೆ. ಶಿರಗೋಡ ಗ್ರಾಮದ ಸರ್ಕಾರಿ ಜಮೀನು ರಿ.ಸ.ನಂ. 236ರ 2.27 ಎಕರೆಯ ಪರಿಹಾರ 25,144 ರೂ. ಗ್ರಾಮದ ಜಯಮ್ಮ ಖಾತೆಗೆ ಜಮೆ ಆಗಿದೆ. ಇದೇ ರೀತಿ ತಾಲೂಕಿನ 42 ಗ್ರಾಪಂ ವ್ಯಾಪ್ತಿಯಲ್ಲಿ ನೂರಾರು ಪ್ರಕರಣಗಳ ಮೂಲಕ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವುದು ಕಂಡುಬಂದಿದೆ.
ಮಾಹಿತಿ ಅಪ್​ಲೋಡ್:ರೈತರಿಗೆ ಪರಿಹಾರ ವಿತರಿಸಲು ಸರ್ಕಾರ ಪರಿಹಾರ ತಂತ್ರಾಂಶ ರೂಪಿಸಿದ್ದು, ಇದರ ಬಳಕೆಗೆ ಗ್ರಾಮ ಲೆಕ್ಕಾಧಿಕಾರಿಗೆ ಯೂಸರ್ ನೇಮ್ ಮತ್ತು ಪಾಸ್​ವರ್ಡ್ ನೀಡಲಾಗಿದೆ. ಈ ತಂತ್ರಾಂಶದಲ್ಲಿ ರೈತರ ಜಮೀನಿನ ವಿವರ, ದಾಖಲೆ ಅಪ್​ಲೋಡ್ ಮಾಡುವುದು ಇವರ ಜವಾಬ್ದಾರಿ. ಈ ಕಾರ್ಯವನ್ನು ತಾವೇ ನಿರ್ವಹಿಸದೆ ಮಾಹಿತಿ ದಾಖಲಿಸಲು ಖಾಸಗಿ ವ್ಯಕ್ತಿಗಳಿಗೆ ಯೂಸರ್ ನೇಮ್ ಮತ್ತು ಪಾಸ್​ವರ್ಡ್ ನೀಡಿರುವುದು ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣ ಎನ್ನಲಾಗಿದೆ.
ತನ್ನ ಪರಿಹಾರ ಹಣ ಇನ್ನೊºರ ಖಾತೆಗೆ ಜಮೆ ಆಗಿರುವ ಕá-ರಿತು ಶಿರಗೋಡದ ನಾಗೇಂದ್ರಪ್ಪ ಭರಮಪ್ಪ ಮಡಿವಾಳರ ತಹಸೀಲ್ದಾರ್​ಗೆ ದೂರು ಸಲ್ಲಿಸಿ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಹಾಯಕನ ವಿರá-ದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಹಾನಗಲ್ಲ ತಾಲೂಕು ಮಾತ್ರವಲ್ಲ, ಜಿಲ್ಲೆಯಲ್ಲಿ ಸಾಕಷ್ಟು ಈ ರೀತಿಯ ಪ್ರಕರಣ ನಡೆದಿರುವ ದೂರು ಬಂದಿವೆ. ಆರ್​ಸಿ ಕಚೇರಿಯಿಂದ ತನಿಖೆ ನಡೆಯು ತ್ತಿದೆ. ಯಾರು ಈ ತಪ್ಪು ಮಾಡಿದ್ದಾರೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ತನಿಖೆ ನಂತರ ಕ್ರಮ ಕೈಗೊಳ್ಳಲಾಗುವುದು.
| ಎಂ. ಯೋಗೇಶ್ವರ ಅಪರ ಜಿಲ್ಲಾಧಿಕಾರಿ ಹಾವೇರಿ
ಪರಿಹಾರ ಘೊಷಣೆಯಾದ ರೈತರ ಪಟ್ಟಿಯನ್ನು ಆಯಾ ಗ್ರಾಪಂ ಕಚೇರಿಗಳಲ್ಲಿ ಪ್ರಕಟಿಸಿದರೆ ಇಂಥ ಅವ್ಯವಹಾರ ನಿಲ್ಲಲಿದೆ. ಇದನ್ನು ಹಲವು ಬಾರಿ ಸೂಚಿಸಿದ್ದರೂ ಕೃಷಿ-ಕಂದಾಯ ಇಲಾಖೆಗಳು ಎಚ್ಚೆತ್ತುಕೊಂಡಿಲ್ಲ. ಹಣ ಕೊಳ್ಳೆ ಹೊಡೆಯುವವರ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.
| ಮರಿಗೌಡ ಪಾಟೀಲ ರೈತ ಸಂಘದ ತಾಲೂಕು ಅಧ್ಯಕ್ಷ
ಏನಿದು ಗೋಲ್ಮಾಲ್
ಕಳೆದ ಆಗಸ್ಟ್​ನಲ್ಲಿ ಉಂಟಾದ ನೆರೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಈ ಸಂಬಂಧ ಪರಿಹಾರಕ್ಕಾಗಿ ಹಾನಗಲ್ಲ ತಾಲೂಕಿನ 22,607 ರೈತರಿಗೆ 39.41 ಕೋಟಿ ರೂ. ಬಿಡುಗಡೆಯಾಗಿತ್ತು. ಗರಿಷ್ಠ ಎರಡು ಹೆಕ್ಟೇರ್​ವರೆಗೆ ಬೆಳೆ ಹಾನಿಗೆ ಪರಿಹಾರ ನೀಡಲಾಗುತ್ತಿದೆ. ಆದರೆ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಕೆಲ ಏಜೆಂಟರು ಅಡ್ಡದಾರಿಯಲ್ಲಿ ಕೋಟ್ಯಂತರ ರೂ. ಗೋಲ್ಮಾಲ್ ನಡೆಸಿದ್ದಾರೆ.
| ಗಿರೀಶ ದೇಶಪಾಂಡೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − 8 =
Remember me
