ಬೆಂಗಳೂರು:ಬಳಕೆಗೆ ಯೋಗ್ಯವಿಲ್ಲದೆ ಗುಜರಿಯಾಗಿರುವ ಹಾಗೂ ಕಳುವಾಗಿರುವ ಲಾರಿ, ಬಸ್ಸುಗಳಿಗೆ ಆರ್​ಟಿಒ ಕಚೇರಿಗಳಲ್ಲಿ ನೋಂದಣಿ ಮಾಡಿಕೊಡುತ್ತಿರುವ ಅಂತಾರಾಜ್ಯ ಬೃಹತ್ ದಂಧೆಯ ಬಗ್ಗೆ ‘ವಿಜಯವಾಣಿ’ ಪ್ರಕಟಿಸಿದ ವಿಶೇಷ ವರದಿ ಆಧರಿಸಿ ಬೆಂಗಳೂರು ಗ್ರಾಮಾಂತರದ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ತಪ್ಪಿತಸ್ಥ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳಿಗೆ ಬಂಧನ ಭೀತಿ ಶುರುವಾಗಿದೆ.
ಬೆಂಗಳೂರು ಪೂರ್ವ ತಾಲೂಕಿನ ಕಾಟಂನಲ್ಲೂರು ಬಳಿಯ ಗ್ಯಾರೇಜ್ ಇಟ್ಟುಕೊಂಡು, ಅಕ್ರಮವಾಗಿ ಬಸ್​ಗಳ ನೋಂದಣಿ ದಂಧೆ ನಡೆಸುತ್ತಿದ್ದ ಎಸ್​ಎಸ್​ಪಿ ಮೋಟಾರ್ಸ್​ನ ಮಾಲೀಕ, ಆಂಧ್ರಪ್ರದೇಶದ ವೇಣುಗೋಪಾಲರೆಡ್ಡಿ, ಮ್ಯಾನೇಜರ್, ಸೂಪರ್​ವೈಸರ್ ಹಾಗೂ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಂಗಳೂರು ಹಾಗೂ ಕೋಲಾರ ಆರ್​ಟಿಒದ ಕೆಲ ಅಧಿಕಾರಿ ಮತ್ತು ಸಿಬ್ಬಂದಿಯೂ ದಂಧೆಯಲ್ಲಿ ಭಾಗಿಯಾಗಿದ್ದು, ಸಾಕ್ಷ್ಯ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಫ್​ಐಆರ್​ನಲ್ಲಿ ಏನಿದೆ?:ಕಾಟಂನಲ್ಲೂರು ಗ್ರಾಮದ ಸರ್ವೆ ನಂ.3ರಲ್ಲಿ ತಿರುಪತಿಯ ವೇಣುಗೋಪಾಲ ರೆಡ್ಡಿ ಎಸ್​ಎಸ್​ಪಿ ಗ್ಯಾರೇಜ್ ಇಟ್ಟುಕೊಂಡಿದ್ದಾರೆ. ಹಳೆಯ ಲೇಲ್ಯಾಂಡ್ ಕಂಪನಿಯ ಚಾಸ್ಸಿಗಳನ್ನು ತಂದು ಯಾವುದೇ ಅನುಮತಿ ಇಲ್ಲದೆ ಅದೇ ಚಾಸ್ಸಿಗಳನ್ನು ಆಧರಿಸಿ ಬಸ್​ಗಳ ವಿನ್ಯಾಸ ಮಾಡಿದ್ದಾರೆ. ಅರುಣಾಚಲ ಪ್ರದೇಶದ ಆರ್​ಟಿಒ ಕಚೇರಿಯಲ್ಲಿ 2-3 ವರ್ಷಗಳ ಹಿಂದೆ ನೋಂದಣಿ ಮಾಡಿಸಿದಂತೆ ರಿಜಿಸ್ಟ್ರೇಷನ್ ಮಾಡಿಸಿ, ನಂತರ ಕೋಲಾರ ಆರ್​ಟಿಒ ಕಚೇರಿಗೆ ಎನ್​ಒಸಿ ಪಡೆದುಕೊಂಡಿದ್ದಾರೆ. ಬಳಿಕ ಅಗತ್ಯ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಮುಳಬಾಗಿಲು ತಾಲೂಕಿನ ನಂಗಲಿಯಲ್ಲಿರುವ ಎಸ್​ಸಿಟಿ ಡಿಗ್ರಿ ಕಾಲೇಜು ಹಾಗೂ ಇತರ ಶಾಲಾ-ಕಾಲೇಜುಗಳ ಹೆಸರಿನಲ್ಲಿ ಕಡಿಮೆ ತೆರಿಗೆ ಪಾವತಿಸಿ ನೋಂದಣಿ ಮಾಡಿಸಿದ್ದಾರೆ. ಈ ದಂಧೆಯಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಶಾಲೆಗಳ ಹೆಸರಲ್ಲಿ ನೋಂದಣಿ:ಬೆಂಗಳೂರು ಗ್ರಾಮಾಂತರ ಪೊಲೀಸರು ಬಸ್​ಗಳಿದ್ದ ಯಾರ್ಡ್​ಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. 95ಕ್ಕೂ ಹೆಚ್ಚು ಬಸ್​ಗಳನ್ನು ಅರುಣಾಚಲ ಪ್ರದೇಶ ಆರ್​ಟಿಒದಲ್ಲಿ ನೋಂದಣಿ ಮಾಡಿಸಿದಂತೆ ಎನ್​ಒಸಿ ಪಡೆದು ಎಸ್​ಸಿಟಿ ಡ್ರಿಗ್ರಿ ಕಾಲೇಜು ಹಾಗೂ ಇನ್ನಿತರ ಶಾಲಾ-ಕಾಲೇಜುಗಳ ಹೆಸರಲ್ಲಿ ಮರು ನೋಂದಣಿ ಮಾಡಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ.
ತಪ್ಪು ಸಾಬೀತಾದರೂ ಶಿಕ್ಷೆ ಏಕಿಲ್ಲ?:ಬೆಂಗಳೂರಿನ ಕೆಲ ಕಚೇರಿಗಳಲ್ಲೂ ಈ ದಂಧೆ ನಡೆದಿರುವುದಕ್ಕೆ ದಾಖಲಾತಿಗಳಿವೆ. ಕೋಲಾರ ಆರ್​ಟಿಒ ಕಚೇರಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾದರೂ ಸಾರಿಗೆ ಸಚಿವರು ಹಾಗೂ ಸಾರಿಗೆ ಆಯುಕ್ತರು ಅಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಇಲ್ಲಿನ ಕೇಸ್ ವರ್ಕರ್ ಒಬ್ಬರು ಕಳೆದ 20 ವರ್ಷದಿಂದ ಇದೇ ಕಚೇರಿಯಲ್ಲಿದ್ದಾರೆ. ಇಬ್ಬರು ಖಾಸಗಿ ವ್ಯಕ್ತಿಗಳಿಗೆ ಕಚೇರಿಯಲ್ಲೇ ಕ್ಯಾಬಿನ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಆರ್​ಟಿಒ ಹುದ್ದೆ ಜವಾಬ್ದಾರಿಯನ್ನು ಎಆರ್​ಟಿಒಗೆ ನೀಡಲಾಗಿದೆ. ಕಚೇರಿಗೆ ಮುಖ್ಯಸ್ಥರಿಗೆ ಗೊತ್ತಿಲ್ಲದೆ ಏನೂ ನಡೆಯಲ್ಲ. ದಂಧೆಯಲ್ಲಿ ಅವರೇ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಬ್ಬಂದಿಯೇ ಆರೋಪಿಸಿದ್ದಾರೆ.
ನಾಗಾಲೆಂಡ್ ಹಾಗೂ ಅರುಣಾಚಲ ಪ್ರದೇಶ ಆರ್​ಟಿಒ ಕಚೇರಿಯಿಂದ ವಾಹನ ವರ್ಗಾವಣೆಗೆ ವಿತರಣೆಯಾಗಿರುವ ನಕಲಿ ನಿರಾಕ್ಷೇಪಣಾ ಪತ್ರ (ಎನ್​ಒಸಿ)ಗಳನ್ನು ಆಧರಿಸಿ ಬೆಂಗಳೂರು ಹಾಗೂ ಕೋಲಾರ ಆರ್​ಟಿಒ ಕಚೇರಿಗಳಲ್ಲಿ ಲಾರಿ ಹಾಗೂ ಬಸ್​ಗಳನ್ನು ನೋಂದಣಿ ಮಾಡಿರುವ ಕುರಿತು ‘ಕದ್ದ ವಾಹನಕ್ಕೂ ನೋಂದಣಿ!’ ಶೀರ್ಷಿಕೆಯಡಿ ಜೂ.30ರಂದು ವಿಜಯವಾಣಿ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಇದನ್ನು ಆಧರಿಸಿ ಪೊಲೀಸರು ಯಾರ್ಡ್ ಮೇಲೆ ದಾಳಿ ನಡೆಸಿ, ಈಗ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.
ಬಾಲ್ಯದಲ್ಲೇ ಖುಷಿಗಾಗಿ ಓದಿದ ಮಕ್ಕಳ ಹದಿಹರೆಯ ಸುಂದರ!; ಸಾವಿರಾರು ಮಕ್ಕಳನ್ನು ಒಳಗೊಂಡ ಅಧ್ಯಯನದಲ್ಲಿ ಬಹಿರಂಗ

ನಮ್ಮೂರಲ್ಲಿ ಸರ್ಕಾರಿ ವೈದ್ಯರೇ ಉಳಿಯಲ್ಲ.. ನೋಡಿ ಎಂಥ ಪರಿಸ್ಥಿತಿ!: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − three =
Remember me
