ಬೆಂಗಳೂರು:ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕೋಟ್ಯಂತರ ರೂ ಅಕ್ರಮ ವರ್ಗಾವಣೆ ಬಯಲಾಗಿದೆ. ನಿಗಮದ ಅಧೀಕ್ಷಕ ಆತ್ಮಹತ್ಯೆಯಿಂದ ಈ ಹಗರಣ ಹೊರಬಿದ್ದಿದೆ. ಸಾವಿನ ಬಗ್ಗೆ ಬಿಜೆಪಿಗೆ ಸಹಾನುಭೂತಿಯಿದೆ, ಯಾರದೇ ಸಾವು ಪಕ್ಷ ಬಯಸುವುದಿಲ್ಲ. ಆದರೆ ವಾಲ್ಮೀಕಿ ನಿಗಮದ ರೀತಿಯಲ್ಲೇ ಉಳಿದ ಅಭಿವೃದ್ಧಿ ನಿಗಮಗಳ ಹಣ ವರ್ಗಾವಣೆ ಸಾಧ್ಯತೆಗಳಿವೆ ಎಂದು ಮಾಜಿ ಸಚಿವ ಸಿ.ಟಿ.ರವಿ ಸಂಶಯ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಅಭಿವೃದ್ಧಿ ನಿಗಮಗಳ ಲೆಕ್ಕಪತ್ರ ಪರಿಶೀಲನೆ ನಡೆಸಬೇಕು. ಎಷ್ಟೋ ನಿಗಮಗಳಿಂದ 2-3 ವರ್ಷವಾದರೂ ಫಲಾನುಭವಿಗಳಿಗೆ ಬೋರ್‍ವೆಲ್ ಕೊರೆದಿಲ್ಲ. ಸಬ್ಸಿಡಿ ಹಣ ಬಂದಿಲ್ಲ. ವೈಯಕ್ತಿಕ ಸಾಲ ಸೌಲಭ್ಯಕ್ಕೆ ಆಯ್ಕೆ ಆಗಿದ್ದರೂ ಸಾಲ ಸಿಕ್ಕಿಲ್ಲ. ಇಂಥ ಹಣ ನಕಲಿ ಖಾತೆಗಳ ಪಾಲಾಗಿರಬಹುದು ಎಂದು ಅನುಮಾನಿಸಿದರು.
ವಾಲ್ಮೀಕಿ ನಿಗಮದ ಬೇರೆ ಬೇರೆ ಖಾತೆಯಲ್ಲಿದ್ದ ಹಣವನ್ನು ಯೂನಿಯನ್ ಬ್ಯಾಂಕ್ ಖಾತೆಗೆ ಯಾಕೆ ವರ್ಗಾಯಿಸಲಾಯಿತು? ಯೂನಿಯನ್ ಬ್ಯಾಂಕಿನಿಂದ ಹೈದರಾಬಾದ್‍ನ ರತ್ನಾಕರ ಬ್ಯಾಂಕಿಗೆ ಹಣ ಹೋಗಿದೆ. ಅಲ್ಲಿಂದ ಫಸ್ಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕಿಗೆ ವರ್ಗಾವಣೆ ಮಾಡಿದ್ದಾರೆ. ಅಲ್ಲಿ ಖಾತೆಗಳನ್ನು ತೆರೆದು ಹಣ ಹಿಂಪಡೆದಿದ್ದಾರೆ ಎಂದು  ಸಿ.ಟಿ.ರವಿ ಆಕ್ಷೇಪಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ತನ್ನ ಡೆತ್ ನೋಟಿನಲ್ಲಿ ಸಚಿವರ ಮೌಖಿಕ ಸೂಚನೆ ಎಂದಿರುವುದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಾ ? ಇಷ್ಟು ದೊಡ್ಡ ಹಗರಣವಾದರೂ ಯಾಕಿನ್ನೂ ಸಿಬಿಐಗೆ ಕೊಟ್ಟಿಲ್ಲ? ಇಷ್ಟು ದೊಡ್ಡ ಹಗರಣ ನಡೆದಿದ್ದರೂ ಸಚಿವ ನಾಗೇಂದ್ರರನ್ನು ಯಾಕೆ ಇನ್ನೂ ವಜಾ ಮಾಡಿಲ್ಲ? ಈ ಪ್ರಶ್ನೆಗಳಿಗೆ ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಇಷ್ಟೆಲ್ಲ ಆದರೂ ಸರಕಾರಕ್ಕೆ ಇದೊಂದು ಗಂಭೀರ ಪ್ರಕರಣ ಅನಿಸುತ್ತಿಲ್ಲ. ಕಾಂಗ್ರೆಸ್ ಪಕ್ಷದ ಬುಡಕ್ಕೆ ಬರುವ ಕಾರಣಕ್ಕೆ ಇದು ಗಂಭೀರವಲ್ಲ ಎಂದು ತೇಲಿಸುವ ರೀತಿಯಲ್ಲಿ ಸರಕಾರ ವ್ಯವಹರಿಸುತ್ತಿದೆ ಎಂದು ಆರೋಪಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ತನ್ನ ಡೆತ್ ನೋಟಿನಲ್ಲಿ ಸಚಿವರ ಮೌಖಿಕ ಸೂಚನೆ ಎಂದಿದ್ದಾರೆ. ಜೊತೆಗೇ 3 ಅಧಿಕಾರಿಗಳ ಹೆಸರು, ಎನ್ ನಾಗರಾಜ್ ಎಂಬ ಹೆಸರು ಬರೆದಿದ್ದಾರೆ. ಎನ್. ನಾಗರಾಜ್ ಯಾರು ಎಂದು ಪ್ರಶ್ನಿಸಿದರು.
ವಸಂತನಗರ ಶಾಖೆಯಿಂದ ಎಂ.ಜಿ.ರಸ್ತೆ ಶಾಖೆಗೆ ಖಾತೆ ಬದಲಿಸುವ ಮೂಲಕ ಈ ಹಗರಣ ಆರಂಭವಾಗಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಇರುವುದೇ ವಸಂತನಗರದಲ್ಲಿ. ಕಾಲ್ನಡಿಗೆ ದೂರದಲ್ಲಿ ಶಾಖೆ ಇದೆ. ಯಾಕೆ ನೀವು ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್‍ಗೆ ಖಾತೆ ಬದಲಾಯಿಸಿದ್ದೀರಿ ಎಂದು ಸಿ.ಟಿ.ರವಿ ಕೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 16 =
Remember me
