ಬೆಂಗಳೂರು:ಕರೊನಾ ಲಾಕ್​ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕಳ್ಳಬಟ್ಟಿ ದಂಧೆ ಶುರುವಾಗಿದೆ. ದಂಧೆಯಲ್ಲಿ ಪಳಗಿದವರೇ ತಮ್ಮ ಹಳೆಯ ಸಂಪರ್ಕಗಳನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳಲು ಹವಣಿಸುತ್ತಿರುವುದು ಅಲ್ಲಲ್ಲಿ ಬೆಳಕಿಗೆ ಬಂದಿದೆ.
ವಿಶೇಷವಾಗಿ ಮಲೆನಾಡು ಭಾಗದಲ್ಲಿ ಕಳ್ಳಬಟ್ಟಿ ದಂಧೆ ಅವ್ಯಾವಹತವಾಗಿ ನಡೆಯುತ್ತಿದೆ. ಎಲ್ಲೆಡೆ ಇದು ಲಭ್ಯವಿಲ್ಲದ್ದರಿಂದ ಕಳ್ಳಬಟ್ಟಿ ದಂಧೆಯೂ ನಡೆಯುತ್ತಿದೆ. ಬೆಲ್ಲ, ಭತ್ತ, ಗೇರುಹಣ್ಣು ಸೇರಿ ಎಲ್ಲ ಸ್ಥಳೀಯವಾಗಿ ಸಿಗುವುದರಿಂದ ತಯಾರಿಕೆಗೆ ಸಮಸ್ಯೆಗಳಿಲ್ಲ. ಬೆಂಗಳೂರು ಮತ್ತಿತರ ನಗರಗಳಿಂದ ತಮ್ಮ ಗ್ರಾಮಗಳಿಗೆ ಮರಳಿರುವವರಲ್ಲಿ ಕೆಲವರು ಬೈನೆ ಸೇಂದಿ, ಕಳ್ಳಬಟ್ಟಿಗೆ ಮೊರೆ ಹೋಗಿದ್ದಾರೆ. ಬೈನೆ ಸೇಂದಿ, ಕಳ್ಳಬಟ್ಟಿ ತಲುಪಿಸಲು ದಲ್ಲಾಳಿಗಳು ಹುಟ್ಟಿಕೊಂಡಿದ್ದಾರೆ.
ನೀರಾಗೂ ಡಿಮ್ಯಾಂಡ್: ತೆಂಗಿನ ಮರದಿಂದ ಇಳಿಸುವ ನೀರಾಗೂ ಬೇಡಿಕೆ ಬಂದಿದೆ. ನೀರಾ ಇಳಿಸುವವರ ಸಂಖ್ಯೆ ಕಡಿಮೆ ಇದ್ದರೂ, ಅವರಿಗೆ ಮೊದಲೇ ಬುಕ್ ಮಾಡಿ ನೀರಾ ಪಡೆಯುತ್ತಿರುವ ಮಾಹಿತಿ ಲಭಿಸಿದೆ. ಮಾರುಕಟ್ಟೆಯಲ್ಲಿ ಮದ್ಯ ಸಿಗದ್ದರಿಂದ ಹೋಂ ಸ್ಟೇ ಮತ್ತು ಕೆಲವು ಮನೆಗಳಲ್ಲಿ ಇಟ್ಟುಕೊಂಡಿದ್ದ ವೈನ್ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದೆ.
ಅಬಕಾರಿ ಇಲಾಖೆ ಸರ್ಕಸ್: ಬದಲಾದ ಪರಿಸ್ಥಿತಿಯಲ್ಲಿ ಪರ್ಯಾಯ ಡ್ರಿಂಕ್ಸ್ ಗಳತ್ತ ವಾಲುತ್ತಿರುವವರ ಬಗ್ಗೆ ಅಬಕಾರಿ ಇಲಾಖೆ ನಿಗಾ ವಹಿಸಿದೆ. ಆದರೆ, ಕಳ್ಳಬಟ್ಟಿ, ಬೈನೆ, ನೀರಾ ಗ್ರಾಮೀಣ ಪ್ರದೇಶಗಳಿಗೆ ಸೀಮಿತವಾಗಿರುವುದರಿಂದ ಅಲ್ಲಿಗೆ ತೆರಳಿ ಕಾರ್ಯಾಚರಣೆ ನಡೆಸುವುದು ಅಬಕಾರಿ ಸಿಬ್ಬಂದಿಗೆ ಕಷ್ಟವಾಗುತ್ತಿದೆ.
ಬಹಳಷ್ಟು ಸಿಬ್ಬಂದಿ ಕರೊನಾ ಕಾರಣಕ್ಕೆ ಮನೆಯಲ್ಲೇ ಉಳಿದಿದ್ದಾರೆ. ಅವರನ್ನೆಲ್ಲ ಇಲಾಖೆ ಕಾರ್ಯಾಚರಣೆಗೆ ಚುರುಕು ಗೊಳಿಸುವ ತನಕ ಮತ್ತು ಲಾಕ್​ಡೌನ್ ಮುಗಿಯುವ ತನಕ ಈ ದಂಧೆಗಳಿಗೆ ಕಡಿವಾಣ ಬೀಳುವ ನಿರೀಕ್ಷೆಗಳಿಲ್ಲ.
ಮದ್ಯದಂಗಡಿಯಲ್ಲಿ ಕಳ್ಳತನ
ರಾಯಚೂರು: ನಗರದ ಹೊರವಲಯದ ಅಸ್ಕಿಹಾಳ ಹತ್ತಿರ, ವೆಂಕಟೇಶ ಗೌಡಗೆ ಸೇರಿದ ರೇಣುಕಾ ಬಾರ್ ಆಂಡ್ ರೆಸ್ಟೋರೆಂಟ್​ನ ಹಿಂದಿನ ಬಾಗಿಲು ಮುರಿದು ಲಕ್ಷಾಂತರ ರೂ. ಮೌಲ್ಯದ ಮದ್ಯ ಸೋಮವಾರ ತಡರಾತ್ರಿ ಕಳವಾಗಿದೆ. ಕಳ್ಳರು ಮದ್ಯದ ಬಾಕ್ಸ್ ದೋಚಿದ್ದು, ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಇಪ್ಪತ್ತು ದಿನಗಳಿಂದ ಮದ್ಯ ಸಿಗದೆ ಕಂಗಾಲಾದವರು ಈ ಕೃತ್ಯ ನಡೆಸಿದ್ದಾರೆ ಎಂದು ಅಂದಾಜಿಸಲಾಗಿದೆ.
ತನ್ನ ಪ್ರಜೆಗಳನ್ನೇ ಕಡೆಗಣಿಸಿದ ಪಾಕಿಸ್ತಾನ, ಮಾಹಿತಿ ನೀಡಿದರೂ ಸ್ಪಂದಿಸದ ಅಧಿಕಾರಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − six =
Remember me
