ಕನಕಪುರ:ವಿವಾಹಿತ ಮಹಿಳೆಯ ಹತ್ಯೆ ಪ್ರಕರಣವನ್ನು ಒಂದೇ ದಿನದಲ್ಲಿ ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಗರದ ಕುರುಪೇಟೆ ಕೆರೆಬೀದಿ ನಿವಾಸಿ ಹನುಮಂತ(30) ಕೊಲೆ ಆರೋಪಿ. ಶ್ರುತಿ(32) ಕೊಲೆಯಾದವಳು.
ಕನಕಪುರ ನಗರದ ಕುರುಪೇಟೆಯ ಶ್ರುತಿ ಪಕ್ಕದ ಬೀದಿಯ ಹನುಮಂತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈಕೆ ವಿವಾಹಿತೆ. ಹನುಮಂತನೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನ ವಿಡಿಯೋ ಮಾಡಿಟ್ಟುಕೊಂಡಿದ್ದ ಶ್ರುತಿ ಮದುವೆ ಆಗುವಂತೆ ಪೀಡಿಸುತ್ತಿದ್ದಳು. ಅಲ್ಲದೆ ಆಗಾಗ ಮಧ್ಯರಾತ್ರಿ ಬರುವಂತೆಯೂ ಒತ್ತಾಯಿಸುತ್ತಿದ್ದಳು. ಸಾಕು ಇನ್ಮುಂದೆ ಅಕ್ರಮ ಸಂಬಂಧ ಮುಂದುವರಿಸೋಕೆ ಇಷ್ವವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದ ಹನುಮಂತನಿಗೆ, ನೀನು ತನ್ನೊಂದಿಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ನನ್ನ ಬಳಿ ಇದೆ. ನಾನು ಕರೆದ ಕೂಡಲೇ ಬರಬೇಕು. ಇಲ್ಲವಾದರೆ ಅದನ್ನು ಜಾಲತಾಣಗಳಿಗೆ ಹರಿಬಿಡುತ್ತೇನೆಂದು ಬ್ಲಾಕ್​​ಮೇಲ್​ ಮಾಡುತ್ತಿದ್ದಳು.
ಶ್ರುತಿ ಬೇರೆಯದೇ ದಂಧೆಯಲ್ಲಿ ತೊಡಗಿದ್ದಾಳೆಂದು ತಿಳಿದ ಹನುಮಂತ, ವಿವಾಹಿತೆಯ ಜತೆ ಸಂಬಂಧ ಬೇಡವೆಂದು ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದ. ಆದರೆ ಅಕ್ರಮ ಸಂಬಂಧಕ್ಕಾಗಿ ಶ್ರುತಿ ಬ್ಲಾಕ್​ಮೇಲ್​ ಮಾಡುತ್ತಾ ಪದೇಪದೆ ಚಿತ್ರಹಿಂಸೆ ನೀಡುತ್ತಿದ್ದಳಂತೆ. ಇವಳ ವರ್ತನೆಯಿಂದ ಬೇಸತ್ತು ಹನುಮಂತ, ಭಾನುವಾರ(ಡಿ.25) ಅವಳಿಗೆ ಮದ್ಯಪಾನ ಮಾಡಿಸಿ, ದೈಹಿಕ ಸಲುಗೆ ಬೆಳೆಸಿ ಮಾರಣ್ಣನದೊಡ್ಡಿ ಗೇಟ್​ ರಸ್ತೆ ಬಳಿ ಕರೆದೊಯ್ದಿದ್ದ. ಬಳಿಕ ಬೆಲ್ಟ್​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದ.
ಸೋಮವಾರ ಬೆಳಗ್ಗೆ ವಿಷಯ ತಿಳಿದ ಸಾತನೂರು ಪೊಲೀಸರು ಹಾಗೂ ಸರ್ಕಲ್​ ಇನ್​ಸ್ಪೆಕ್ಟರ್​ ಕೆ.ಎಲ್​.ಕೃಷ್ಣ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ದೊರೆತ ಮೊಬೈಲ್​ನಿಂದ ಆರೋಪಿಯನ್ನು 24 ತಾಸಿನಲ್ಲಿ ಅಂದರೆ ಸೋಮವಾರ ತಡರಾತ್ರಿಯೇ ಬಂಧಿಸಿದ್ದಾರೆ. ದೈಹಿಕ ಸಂಬಂಧದ ದೃಶ್ಯಗಳನ್ನು ವೀಡಿಯೋ ಮಾಡಿಟ್ಟುಕೊಂಡು ಪದೇಪದೆ ಅಕ್ರಮ ಸಂಬಂಧಕ್ಕಾಗಿ ಬ್ಲಾಕ್​ಮೇಲ್​ ಮಾಡುತ್ತಿದ್ದಳು. ಇದನ್ನು ತಡೆಯಲಾಗದೆ ಆಕೆಯನ್ನ ಕೊಲೆ ಮಾಡಿದ್ದಾಗಿ ಆರೋಪಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ.
ಟಾಪ್​ಲೆಸ್​ ಆಗಿ ಬಂದ ಉರ್ಫಿ! ತಿಂಡಿ ಪ್ಲೇಟ್​-ಜ್ಯೂಸ್​ ಗ್ಲಾಸ್​ ಹಿಡಿದು ಮೈಮಾಟ ಪ್ರದರ್ಶಿಸುತ್ತಾ ಬ್ರೇಕ್​ಫಾಸ್ಟ್​ ಎಂದ ನಟಿ… ವಿಡಿಯೋ ವೈರಲ್​

ಗೋವಾಕ್ಕೆ ಹೋಗಿ ಮೋಜು-ಮಸ್ತಿ ಮಾಡೋಣ… ಪ್ರೇಯಸಿಯ ಆಸೆ ಈಡೇರಿಸಲು ಅಣ್ಣನ ಮನೆಯಲ್ಲಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ತಮ್ಮ!

ಬೆಂಗ್ಳೂರಲ್ಲಿ ಕಿಡ್ನ್ಯಾಪ್​, ಚಿಕ್ಕಬಳ್ಳಾಪುರದಲ್ಲಿ ಕೊಲೆ, ಚಾರ್ಮಾಡಿಘಾಟ್​ನಲ್ಲಿ ಶವ! ಕರವೇ ಅಧ್ಯಕ್ಷ ಸೇರಿ ಐವರ ಬಂಧನ, 9 ತಿಂಗಳ ಬಳಿಕ ರಹಸ್ಯ ಬಯಲಾಗಿದ್ದೇ ರೋಚಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 9 =
Remember me
