ನಗರದಲ್ಲಿ 980 ಅನಧಿಕೃತ ಹಾಗೂ ಅನುಮತಿ ಇಲ್ಲದೆ ನಿರ್ವಿುಸಿರುವ ಕಟ್ಟಡಗಳನ್ನು ಗುರುತಿಸಿರುವ ಬಿಬಿಎಂಪಿ, ತೆರವುಗೊಳಿಸಲು ನೋಟಿಸ್ ನೀಡಿದ್ದು, ತೆರವು ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಂಡಿದೆ.
ಬಿಬಿಎಂಪಿ ಅಧಿಕಾರಿಗಳು ನಡೆಸಿದ ಸಮೀಕ್ಷೆಯಲ್ಲಿ 980 ಅನಧಿಕೃತ ಕಟ್ಟಡಗಳನ್ನು ಗುರುತಿಸಲಾಗಿದೆ. ಕೆಲವು ಮನೆಗಳು ನಕ್ಷೆ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ದಕ್ಷಿಣ ವಲಯದಲ್ಲಿ 274, ಮಹದೇವಪುರ-176, ಯಲಹಂಕ- 136, ಪೂರ್ವ ವಲಯ- 108, ರಾಜರಾಜೇಶ್ವರಿ ನಗರ- 103, ಬೊಮ್ಮನಹಳ್ಳಿ- 92, ಪಶ್ಚಿಮ ವಲಯ- 88 ಹಾಗೂ ದಾಸರಹಳ್ಳಿಯಲ್ಲಿ ಕಾನೂನುಬಾಹಿರವಾಗಿ ಕಟ್ಟಿರುವ ಮೂರು ಕಟ್ಟಡಗಳಿಗೆ ಪಾಲಿಕೆ ನೋಟಿಸ್ ಜಾರಿಗೊಳಿಸಿದೆ.
1.20 ಲಕ್ಷ ಅನಧಿಕೃತ ಕಟ್ಟಡಗಳು: ರಾಜಧಾನಿಯಲ್ಲಿ 1.20 ಲಕ್ಷ ಅನಧಿಕೃತ ಕಟ್ಟಡಗಳು ನಿರ್ವಣವಾಗಿರುವ ಕುರಿತು ಬಿಬಿಎಂಪಿಗೆ ಮಾಹಿತಿ ಇದೆ. ಆದರೆ, ತೆರವು ಮಾಡಲು ಅಧಿಕಾರವಿದ್ದರೂ ಹಲವು ಕಾರಣಗಳಿಂದ ಆಗುತ್ತಿಲ್ಲ. ನಗರದಲ್ಲಿರುವ 200ಕ್ಕೂ ಹೆಚ್ಚು ಕೆರೆಗಳು, ಕೆರೆ ಬಫರ್ ವಲಯ, ನೂರಾರು ಕಿ.ಮೀ. ರಾಜಕಾಲುವೆಗಳ ಮೇಲೆ ಅನಧಿಕೃತವಾಗಿ ಕಟ್ಟಡಗಳು ತಲೆಯೆತ್ತಿವೆೆ.
ಇದನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮತ್ತು ಬಿಬಿಎಂಪಿ ಅಧಿಕಾರಿಗಳು ಗುರುತಿಸಿ ನೋಟಿಸ್ ನೀಡಿ, ತೆರವು ಮಾಡುವುದಕ್ಕೂ ಮುಂಚಿತವಾಗಿ ಮನೆ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಾರೆ. ಜತೆಗೆ ಕೆಲವು ಸ್ಥಳೀಯರು ನಾಯಕರು ಪಾಲಿಕೆ ಕೈಗೆತ್ತಿಕೊಂಡ ಕಾರ್ಯಕ್ಕೆ ತಡೆಯನ್ನುಂಟು ಮಾಡುತ್ತಿದ್ದಾರೆ.
ಬಡವರ ಮನೆಗಳ ತೆರವು:ರಾಜಕಾಲುವೆ ಹಾಗೂ ಕೆರೆಗಳ ಒತ್ತುವರಿ ಮಾಡಿಕೊಂಡು ಮನೆ ನಿರ್ವಿುಸಿದವರಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ಮಾತ್ರ ಮನೆ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಶ್ರೀಮಂತರು ನಿರ್ವಿುಸಿರುವ ಅನಧಿಕೃತ ಕಟ್ಟಡಗಳ ತೆರವಿಗೆ ಪಾಲಿಕೆ ಹಿಂದೇಟು ಹಾಕುತ್ತಿದೆ. ರಾಜಕಾಲುವೆ ಮೇಲೆ ಅನಧಿಕೃತವಾಗಿ ನಿರ್ವಣವಾಗಿದ್ದ 2,626 ಅನಧಿಕೃತ ಮನೆಗಳಲ್ಲಿ ಬಡವರು ಮತ್ತು ಮಧ್ಯಮ ವರ್ಗದ 1,600 ಕಟ್ಟಡಗಳನ್ನು ತೆರವು ಮಾಡಲಾಗಿದೆ.
ಅನುಮತಿ ಪಡೆಯದೇ 3 ಲಕ್ಷ ಮನೆ ನಿರ್ವಣ: ನಗರ ಜಿಲ್ಲೆಯ ವಿವಿಧ ತಾಲೂಕುಗಳು ಬಿಬಿಎಂಪಿ ವ್ಯಾಪ್ತಿಗೆ ಸೇರುವ ಮೊದಲು ಗ್ರಾಮ ಪಂಚಾಯಿತಿ ಯಿಂದ ಅನುಮತಿ ಪಡೆದು ಮನೆಗಳನ್ನು ನಿರ್ವಿುಸಿ ಕೊಳ್ಳುತ್ತಿದ್ದರು. ಈಗ ಬಿಬಿಎಂಪಿ ವಲಯಕ್ಕೆ ಸೇರಿದ್ದರೂ ‘ಬಿ’ ಖಾತೆ ಹೊಂದಿರುವ ಅನೇಕ ಜಮೀನುಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ಮನೆಗಳನ್ನು ಅನುಮತಿ ಪಡೆಯದೇ ನಿರ್ವಿುಸಲಾಗಿದೆ.
ಕೊಚ್ಚಿಯಲ್ಲಿ ಬೃಹತ್ ಕಟ್ಟಡಗಳ ತೆರವು
ಕೇರಳದ ಕೊಚ್ಚಿಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದ್ದ 343 ಫ್ಲ್ಯಾಟ್​ವುಳ್ಳ 2 ಕಟ್ಟಡಗಳನ್ನು ಅಲ್ಲಿನ ಸರ್ಕಾರ ತೆರವುಗೊಳಿಸಿದೆ. ಇದೇ ಮಾದರಿಯಲ್ಲಿ ಬಿಬಿಎಂಪಿ ವ್ಯಾಪ್ತಿ ಯಲ್ಲಿರುವ ಅನಧಿಕೃತ ಕಟ್ಟಡಗಳನ್ನು ತೆರವು ಮಾಡುವ ದಿಟ್ಟ ಕೆಲಸವನ್ನು ಮಾಡಬೇಕಾದ ಅಗತ್ಯವಿದೆ.
| ಸತೀಶ್ ಕೆ.ಬಳ್ಳಾರಿ ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − eight =
Remember me
