ಬೆಂಗಳೂರು:ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಯನ್ನು ಉಲ್ಲಂಘಿಸಿ ಸಾವಿರಾರು ಅನಕ್ಷರಸ್ಥರನ್ನು ಸದಸ್ಯರನ್ನಾಗಿಸಲಾಗಿದ್ದು, ಅವರಿಗೆ ಕನ್ನಡ ಕಲಿಸುವ ಎಲ್ಲ ಪ್ರಯತ್ನ ನಡೆಸಲಾಗುತ್ತದೆಯೇ ವಿನಃ ಸದಸ್ಯತ್ವದಿಂದ ವಜಾ ಮಾಡುವುದಿಲ್ಲ ಎಂದು ಅಧ್ಯಕ್ಷ ಡಾ. ಮಹೇಶ ಜೋಶಿ ಸ್ಪಷ್ಟಪಡಿಸಿದ್ದಾರೆ.
ಕಸಾಪ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈಗಾಗಲೆ ಶತಮಾನದಿಂದ ಇರುವ ನಿಬಂಧನೆಯ 7ನೇ ಅಂಶದಲ್ಲಿ ‘ಕನ್ನಡ ಓದು ಬರಹ ಬಲ್ಲ ಎಲ್ಲ ವ್ಯಕ್ತಿಗಳೂ ಸದಸ್ಯತ್ವವನ್ನು ಪಡೆಯಬಹುದು’ ಎಂದು ತಿಳಿಸಲಾಗಿದೆ. ಆದರೆ ಕೆಲವರು ಓಟಿನ ಆಸೆಗಾಗಿ ಅನಕ್ಷರಸ್ಥರನ್ನೂ ಸದಸ್ಯರನ್ನಾಗಿಸಿದ್ದಾರೆ.
ಇನ್ನು ಮುಂದೆ ಸದಸ್ಯರಾಗುವವರು ಕನಿಷ್ಠ 7ನೇ ತರಗತಿ ತೇರ್ಗಡೆ ಹೊಂದಿರಬೇಕು ಎಂಬ ತಿದ್ದುಪಡಿಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. 7ನೇ ತರಗತಿ ತೇರ್ಗಡೆಯಾಗಿಲ್ಲದಿದ್ದರೆ ಕಸಾಪ ವತಿಯಿಂದ ನೀಡುವ ‘ಸರಳ ಕನ್ನಡ ಪರೀಕ್ಷೆ’ ತೇರ್ಗಡೆ ಹೊಂದಬೇಕು. ಅನಕ್ಷರಸ್ಥರು ಸದಸ್ಯರಾಗಬೇಕೆಂದು ಬಯಸಿದರೆ ಕಸಾಪ ವತಿಯಿಂದ ಉಚಿತವಾಗಿ ಕನ್ನಡ ಕಲಿಸಿ ಸದಸ್ಯರನ್ನಾಗಿ ಮಾಡಲಾಗುತ್ತದೆ. ಈಗಾಗಲೆ ಸದಸ್ಯರಾಗಿರುವ ಅನಕ್ಷರಸ್ಥರಿಗೂ ಕನ್ನಡ ಕಲಿಸುವ ಎಲ್ಲ ಪ್ರಯತ್ನ ಮಾಡಲಾಗುತ್ತದೆ. ಇಷ್ಟರ ನಂತರವೂ ವಿವಿಧ ಕಾರಣಕ್ಕೆ ಕನ್ನಡ ಕಲಿಯಲಾಗದಿದ್ದರೆ ಸದಸ್ಯತ್ವದಿಂದ ವಜಾ ಮಾಡುವ ಉದ್ದೇಶ ಇಲ್ಲ. ಆದರೆ ಹೊಸದಾಗಿ ಸದಸ್ಯರಾಗುವವರಿಗೆ ನಿಯಮದಲ್ಲಿ ವಿನಾಯಿತಿ ಇರುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ನೇ. ಭ. ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ. ಪಟೇಲ್ ಪಾಂಡು, ಪ್ರಸರಣ ವಿಭಾಗದ ಸಂಚಾಲಕ ರಾಜಕುಮಾರ್ ಉಪಸ್ಥಿತರಿದ್ದರು.
ಬರಗೂರು ಆಗಮಿಸುವುದಿಲ್ಲ:ಈಗಾಗಲೆ ನಿಬಂಧನೆಗಳ ಕರಡು ಸಿದ್ಧವಾಗಿದ್ದು, ಇದರ ಕುರಿತು ಸಲಹೆ ಸೂಚನೆಗಳಿಗೆ ಫೆ.17ರ ಬೆ.11ಕ್ಕೆ ಸಮಾಲೋಚನಾ ಸಭೆ ನಡೆಯುತ್ತಿದೆ. ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಶ್ರೀ ಶಿವರುದ್ರ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ ಜತೆಗೆ ಡಾ. ಪ್ರಧಾನ್ ಗುರುದತ್ತ, ಹರಿಕೃಷ್ಣ ಪುನರೂರು, ಡಾ. ನಲ್ಲೂರು ಪ್ರಸಾದ್, ನಾ. ಡಿಸೋಜಾ, ಡಾ. ದೊಡ್ಡರಂಗೇಗೌಡ ಸೇರಿ ವಿವಿಧ ಕ್ಷೇತ್ರಗಳ 31 ಗಣ್ಯರನ್ನು ಆಹ್ವಾನಿಸಲಾಗಿದೆ. ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ತಾವು ಆಗಮಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರವಾಣಿ ಮೂಲಕ ತಿಳಿಸಿದ್ದರಿಂದ ಅವರನ್ನು ಆಹ್ವಾನಿತರ ಪಟ್ಟಿಯಿಂದ ಕೈಬಿಡಲಾಗಿದೆ ಎಂದರು.
ಕೇರಳ ಕನ್ನಡ ವಿಭಾಗಕ್ಕೆ ಸಹಾಯ:ಕೇರಳ ಕೇಂದ್ರೀಯ ವಿವಿ ಕನ್ನಡ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು ಪ್ರವೇಶ ಬಯಸಿದ್ದರೂ ಬಡತನದ ಕಾರಣಕ್ಕೆ ಶುಲ್ಕ ಪಾವತಿಸಲು ಆಗಿರಲಿಲ್ಲ. ಇಬ್ಬರೂ ದಾಖಲಾಗದಿದ್ದರೆ ವಿಭಾಗವೇ ಮುಚ್ಚುವ ಆತಂಕವಿದೆ ಎಂದು ಅಲ್ಲಿನ ಮುಖ್ಯಸ್ಥರು ಕಸಾಪಕ್ಕೆ ಪತ್ರ ಬರೆದಿದ್ದರು. 24 ಸಾವಿರ ರೂ. ಶುಲ್ಕ ಪಾವತಿಸಿ ಇಬ್ಬರು ವಿದ್ಯಾರ್ಥಿಗಳಿಗೆ ನೆರವಾಗುವುದರ ಜತೆಗೆ ಕನ್ನಡ ವಿಭಾಗವನ್ನೂ ಉಳಿಸಲಾಗಿದೆ ಎಂದು ಮಹೇಶ ಜೋಶಿ ತಿಳಿಸಿದರು.
ಕನ್ನಡ ನುಡಿ ಆನ್​ಲೈನ್:ಕನ್ನಡ ನುಡಿ ತ್ರೖೆಮಾಸಿಕಕ್ಕೆ ಪ್ರತಿ ವರ್ಷ ಅಂದಾಜು 1 ಕೋಟಿ ರೂ.ಗೂ ವೆಚ್ಚವಾಗುತ್ತಿದೆ. ಹೊಸ ನಿಬಂಧನೆ ಒಪ್ಪಿಗೆಯಾದ ಬಳಿಕ ಕನ್ನಡ ನುಡಿ ಮುದ್ರಣ ಸ್ಥಗಿತವಾಗುತ್ತದೆ. ಎಲ್ಲ ಸದಸ್ಯರಿಗೂ ಆಪ್ ಮೂಲಕ ರವಾನೆ ಮಾಡಲಾಗುತ್ತದೆ. ಅಗತ್ಯವಿದ್ದವರು ಡೌನ್​ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಜೋಶಿ ಹೇಳಿದರು.
‘ಇನ್ನೂ ಗ್ಯಾರಂಟೀ..’ ಎನ್ನುತ್ತ ಆ ನೆನಪನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
