ಬೆಂಗಳೂರು:ಲಿಂಗಾಯತ ಉದ್ಯಮಿಗಳಿಗೆ ಧನಸಹಾಯ ನೀಡುವ ಉದ್ದೇಶದಿಂದ ಲಿಂಗಾಯತ ಸೌಹಾರ್ದ ಕ್ರೆಡಿಟ್ ಬ್ಯಾಂಕ್ ಸ್ಥಾಪನೆ ಮಾಡುವುದಾಗಿ ಆರೋಗ್ಯ ಕ್ಷೇತ್ರದ ಉದ್ಯಮಿ ಡಾ.ಚಿನ್ಮಯ ಚಿಗಟೇರಿ ತಿಳಿಸಿದ್ದಾರೆ. ಭಾನುವಾರ ನಡೆದ ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (ಐಎಲ್‌ವೈಎಫ್) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. ಐಎಲ್‌ವೈಎಫ್ ಲಿಂಗಾಯತ ಸಮುದಾಯ ಉದ್ಯಮಿಗಳಿಗಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಲಾದ ವ್ಯಾಪಾರ ಜಾಲವಾಗಿದ್ದು, ಸಮುದಾಯದ ಉದ್ಯಮಿಗಳ ಆರ್ಥಿಕ ಸಭಲತೆ ಮತ್ತು ಸಹಾಯಕ್ಕೆ ಬ್ಯಾಂಕ್ ತೆರೆಯಲಾಗುವುದು ಎಂದು ತಿಳಿಸಿದರು.
ಐಎಲ್‌ವೈಎಫ್ ಅಧ್ಯಕ್ಷರಾಗಿ ತಮ್ಮ ಮೊದಲ ಭಾಷಣದಲ್ಲಿ ಡಾ ಚಿನ್ಮಯ ಚಿಗಟೇರಿ ಅವರು ಮುಂಬರುವ ವರ್ಷಗಳಲ್ಲಿ ಸಮುದಾಯಕ್ಕೆ ಸೀಮಿತವಾದ ಬ್ಯಾಂಕ್ ಸ್ಥಾಪನೆ ಸೇರಿದಂತೆ ಮೂರು ವಿಶೇಷ ಕಾರ್ಯಗಳನ್ನು ಮಾಡುವುದಾಗಿ ಘೋಷಿಸಿದರು.
ಸೌಹಾರ್ಧ ಕ್ರೆಡಿಟ್ ಬ್ಯಾಂಕ್ ಸ್ಥಾಪನೆ, ಲಿಂಗಾಯತ ಉದ್ಯಮಿಗಳಿಗಾಗಿ ಫಂಡಿಂಗ್ ಡೆಸ್ಕ್ ರಚನೆ, ಹಾಗೂ ಈವರೆಗೆ ನಮ್ಮ ಚಟುವಟಿಕೆಗಳು ವಿಸ್ತರಣೆಯಾಗದ ಬೇರೆ ಬೇರೆ ದೇಶಗಳಿಗೆ ವಿಸ್ತರಣೆಯ ಗುರಿ ಇರಿಸಿಕೊಳ್ಳಲಾಗಿದೆ.
2012 ರಲ್ಲಿ ಪ್ರಾರಂಭವಾದ ಐಎಲ್‌ವೈಎಫ್ ಈಗಾಗಲೇ ಜಗತ್ತಿನ ಹಲವು ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿದ್ದು, ಸುಮಾರು 5 ಸಾವಿರ ಕೋಟಿ ಸಾಮೂಹಿಕ ವಹಿವಾಟಿನ್ನು ಸುಗಮಗೊಳಿಸಿದೆ ಎಂದು ಅವರು ವಿವರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
