ಬೆಂಗಳೂರು :ವಂಚಕ ಕಂಪನಿ ಐಎಂಎ ಸ್ಥಾಪಕ ಮಹಮದ್ ಮನ್ಸೂರ್ ಖಾನ್, ಮಾಜಿ ಸಚಿವ ರೋಷನ್ ಬೇಗ್​ಗೆ 200 ಕೋಟಿ ರೂ. ಕೊಟ್ಟಿರುವುದಾಗಿ ಹೇಳಿಕೆ ಕೊಟ್ಟಿದ್ದ ಹಿನ್ನೆಲೆಯಲ್ಲಿ ಹಾಗೂ ಮನ್ಸೂರ್ ಜತೆಗೆ ನಂಟು ಹೊಂದಿರುವುದಕ್ಕೆ ಸಾಕ್ಷ್ಯ ಲಭ್ಯವಾದ ಹಿನ್ನೆಲೆಯಲ್ಲಿ ಬೇಗ್​ರನ್ನು ಸಿಬಿಐ ಬಂಧಿಸಿ ಜೈಲಿಗೆ ಕಳುಹಿಸಿದೆ.
ಬಂಧನದ ಮರುದಿನವೇ ಸಿಬಿಐ ತಂಡ ಬೇಗ್ ನಿವಾಸದ ಮೇಲೆ ದಾಳಿ ನಡೆಸಿ ಸತತ 8 ಗಂಟೆಗಳ ಕಾಲ ತಪಾಸಣೆ ನಡೆಸಿ ಕೆಲ ಕಾಗದಪತ್ರಗಳನ್ನು ಜಪ್ತಿ ಮಾಡಿದೆ. ಬೇಗ್ ಬಂಧನಕ್ಕೂ ಮುನ್ನವೇ 3 ದಿನಗಳ ಹಿಂದೆ ಸಿಬಿಐ ಅಧಿಕಾರಿಗಳು ಮನ್ಸೂರ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆ ಸಂದರ್ಭದಲ್ಲಿ ರೋಷನ್ ಬೇಗ್ ಐಎಂಎಗೆ ಸೇರಿದ ಕೋಟ್ಯಂತರ ರೂ. ಪಡೆದಿರುವ ಬಗ್ಗೆ ಮನ್ಸೂರ್ ಮಾಹಿತಿ ನೀಡಿದ್ದ. ಇದರ ಬೆನ್ನಲ್ಲೇ ಐಎಂಎ ಕಂಪನಿ ಜತೆ ಬೇಗ್ ನಡೆಸಿದ್ದ ಹಣಕಾಸು ವ್ಯವಹಾರದ ಬಗ್ಗೆ ಸಿಬಿಐ ತನಿಖೆ ನಡೆಸಿತ್ತು.
ಇದನ್ನೂ ಓದಿ:ಸಿಸಿಬಿ ವಶಕ್ಕೆ ಸಂಪತ್​ರಾಜ್​ – ಕೋರ್ಟ್​ ಆದೇಶ: ‘ಪ್ರಥಮಪ್ರಜೆ’ ಇತಿಹಾಸಕ್ಕೆ ಕಪ್ಪುಚುಕ್ಕೆ!
ಐಎಂಎಗೆ ಸೇರಿದ 200 ಕೋಟಿ ರೂ.ಗಳನ್ನು ಬೇಗ್ ಪಡೆದಿರುವುದಾಗಿ ಮನ್ಸೂರ್ ಹೇಳಿದ್ದ. ಈ ಹಿನ್ನೆಲೆಯಲ್ಲಿ ಭಾನುವಾರ ಬೇಗ್ ಅವರನ್ನು ಸಿಬಿಐ ಕಚೇರಿಗೆ ಕರೆತಂದು ಮನ್ಸೂರ್ ಮತ್ತು ಬೇಗ್​ರನ್ನು ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಿದಾಗ ಬೇಗ್ ಗೊಂದಲದ ಹೇಳಿಕೆ ನೀಡಿದ ಕಾರಣ ಸಿಬಿಐ ಬಂಧಿಸಿತ್ತು. ಮುಂದುವರಿದ ಭಾಗವಾಗಿ ಸೋಮವಾರ ಬೆಳಗ್ಗೆ ಕೋಲ್ಸ್ ಪಾರ್ಕ್ ಬಳಿ ಇರುವ ರೋಷನ್ ಬೇಗ್ ನಿವಾಸಕ್ಕೆ 7ಕ್ಕೂ ಅಧಿಕ ಮಂದಿಯಿದ್ದ ಸಿಬಿಐ ತಂಡ ದಾಳಿ ನಡೆಸಿತ್ತು. ಬೇಗ್ ಪತ್ನಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಮನೆಯ ಸದಸ್ಯರ ಮೊಬೈಲ್ ವಶಕ್ಕೆ ಪಡೆದು ಕೋಣೆಯೊಂದರಲ್ಲಿ ಇರುವಂತೆ ಸೂಚಿಸಿದರು. ಎರಡು ಅಂತಸ್ತಿನ ಮನೆಯೆಲ್ಲಾ ಜಾಲಾಡಿದಾಗ ಹಲವು ದಾಖಲೆಗಳು ಪತ್ತೆಯಾಗಿವೆ.
ಇದನ್ನೂ ಓದಿ:ಸಂಪತ್ ರಾಜ್ ಬಚ್ಚಿಟ್ಟುಕೊಂಡದ್ದೆಲ್ಲಿ- ಡಿಕೆಶಿ ರಕ್ಷಣೆ ಕೊಟ್ರಾ? : ಸಿ.ಟಿ.ರವಿ ಪ್ರಶ್ನೆ
ಬೇಗ್ ಬ್ಯಾಂಕ್ ಖಾತೆ ಹಾಗೂ ಲಾಕರ್ ಬಗ್ಗೆ ಮಾಹಿತಿ ಪಡೆಯುವ ಉದ್ದೇಶದಿಂದ ಅವರ ಪತ್ನಿ ಹಾಗೂ ಇಬ್ಬರು ಮನೆ ಕೆಲಸದವರನ್ನು ಮಹಿಳಾ ಸಿಬಿಐ ಅಧಿಕಾರಿಗಳು ಕಾರಿನಲ್ಲಿ ಕರೆದೊಯ್ದು ಒಂದು ತಾಸಿನ ಬಳಿಕ ಮನೆಗೆ ವಾಪಸ್ ಕರೆ ತಂದರು. ಬೇಗ್ ಮನೆಗೆಲಸದವರಿಂದ ಮನೆ ಸೆಲ್ಲಾರ್​ನಲ್ಲಿರುವ ಕಚೇರಿಯ ಕೀ ಪಡೆದು ಪರಿಶೀಲಿಸಿದೆ. ಬೇಗ್ ಪತ್ನಿ ಹಾಗೂ ಮಗ ರುಮಾನ್ ಬೇಗ್ ಹೇಳಿಕೆ ದಾಖಲಿಸಿಕೊಂಡಿದೆ.
ಇದನ್ನೂ ಓದಿ:ಮಾಜಿ ಮೇಯರ್​ ಸಂಪತ್​ರಾಜ್​ ಜೈಲಿಗೆ ಶಿಫ್ಟ್​
ದಾಳಿ ವೇಳೆ ಭದ್ರತೆಗಾಗಿ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಸೋಮವಾರ ಬೇಗ್​ಗೆ ಸೇರಿದ 2 ಕಡೆ ದಾಳಿ ನಡೆದಿದೆ. ಬೇಗ್ ಹಾಗೂ ಕುಟುಂಬಸ್ಥರು ಹೊಂದಿರುವ ಬ್ಯಾಂಕ್ ಖಾತೆ, ಆಸ್ತಿಗಳು, ಚಿನ್ನಾಭರಣ, ಸಂಬಂಧಿಕರ ಹೆಸರಿನಲ್ಲಿ ಹೊಂದಿದ್ದಾರೆ ಎನ್ನಲಾದ ಆಸ್ತಿಗಳ ಕೆಲ ಮಹತ್ವದ ದಾಖಲೆಗಳು ಸಿಬಿಐ ಕೈ ಸೇರಿವೆ. ಇತ್ತೀಚೆಗೆ ಬೇಗ್ ಪುತ್ರ ರುಮಾನ್ ಬೇಗ್ ಮನೆ, ಜಯಮಹಲ್ ರಸ್ತೆಯಲ್ಲಿರುವ ಕಚೇರಿ, ಇವರಿಗೆ ಸೇರಿದ ಅತಿಥಿ ಗೃಹಗಳ ಮೇಲೂ ಸಿಬಿಐ ಪರಿಶೀಲನೆ ನಡೆಸಿತ್ತು ಎನ್ನಲಾಗಿದೆ.
ನೆನಪು ಅಮರ; ಇಂದು ಅಂಬರೀಷ್​ 2ನೇ ಪುಣ್ಯತಿಥಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 20 =
Remember me
