ಬೆಂಗಳೂರು:ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಶಾಖೆಯ 2022ನೇ ಸಾಲಿನ ಶಿಕ್ಷಕ ದಿನಾಚರಣೆ ಪ್ರಶಸ್ತಿ ಪ್ರಕಟಿಸಿದ್ದು, ವೈದ್ಯಕೀಯ ಕಾಲೇಜುಗಳಲ್ಲಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 16 ವೈದ್ಯರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಾಯಚೂರಿನ ಡಾ. ಅರವಿಂದ ಕುಮಾರ್, ಮಂಗಳೂರಿನ ಡಾ. ಎಂ. ಚಕ್ರಪಾಣಿ, ಬೆಂಗಳೂರಿನ ಡಾ. ಜಿ.ವಿ. ದಿವಾಕರ್, ವಿಜಯಪುರದ ಡಾ. ಗುರುಶಾಂತಪ್ಪ, ಬಾಗಲಕೋಟೆಯ ಡಾ. ಕಲಡಗಿ ಪಾಂಡವೀರಪ್ಪ, ಬೆಂಗಳೂರಿನ ಡಾ. ಕೆ.ವಿ. ಮಾಲಿನಿ, ಡಾ. ಆರ್. ನಾಗರತ್ನಾ , ಕೋಲಾರದ ಡಾ. ಎಂ. ನಾರಾಯಣಸ್ವಾಮಿ, ಚಿತ್ರದುರ್ಗದ ಡಾ. ಎನ್.ಬಿ. ಪ್ರಹ್ಲಾದ್, ಮಣಿಪಾಲ್‌ನ ಡಾ. ಶರತ್ ಕುಮಾರ್ ರಾವ್, ಹಾಸನದ ಡಾ. ಟಿ.ಆರ್. ಸುಧಾ, ಚಾಮರಾಜನಗರದ ಡಾ. ಜಿ.ಎಂ. ಸಂಜೀವ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಿವಮೊಗ್ಗದ ಡಾ. ಕೆ.ಎಸ್. ಗಂಗಾಧರ್, ವಿಜಯಪುರದ ಡಾ. ಕೆ. ಸುರೇಶ್, ಚಿಕ್ಕಬಳ್ಳಾಪುರದ ಡಾ. ಎಚ್.ವಿ. ವೆಂಕಟೇಶ್ ಹಾಗೂ ಬೆಂಗಳೂರಿನ ಡಾ.ಎಸ್.ಟಿ. ಯಾವಗಲ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸೆ.4ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಐಎಂಎ ಕಚೇರಿಯ ಡಾ.ಎಂ.ಎ. ನರಸಿಂಹಾಚಾರ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಕಾರ್ಯದರ್ಶಿ ಡಾ.ಎಸ್.ಎಂ. ಪ್ರಸಾದ್ ತಿಳಿಸಿದ್ದಾರೆ.
ರಾಕೇಶ್​ ಬಗ್ಗೆ ವೀಕ್ಷಕರ ಈ ಊಹೆ ಸರಿಯಾಗಿದೆಯೇ? ಹಿಂದಿಯಂತೆ ಇಲ್ಲೂ ನಡೆಯುತ್ತಿದ್ದೀಯಾ ಈ ತಂತ್ರಗಾರಿಕೆ?

ಸಾರ್ವಜನಿಕ ಗಣೇಶೋತ್ಸವ: ಪೊಲೀಸ್​ ಇಲಾಖೆ ಪ್ರಕಟಿಸಿರುವ ಮಾರ್ಗಸೂಚಿ ಹೀಗಿದೆ ನೋಡಿ…

ರಾಜ್ಯದಲ್ಲಿ ಮಳೆ ಇನ್ನಷ್ಟು ಬಿರುಸು: ಮುಂದಿನ ನಾಲ್ಕು ದಿನ ಭಾರಿ ಮಳೆ ಬೀಳುವ ಸಾಧ್ಯತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
