ಬೆಂಗಳೂರು:ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಐಪಿಎಸ್​ ಅಧಿಕಾರಿಗಳಾದ ಹೇಮಂತ್​ ನಿಂಬಾಳ್ಕರ್​ ಮತ್ತು ಅಜಯ್​ ಹಿಲೋರಿ ಕುರಿತು ಸಿಬಿಐ ಅಧಿಕಾರಿಗಳಿಂದ ತನಿಖಾ ವರದಿ ತರಿಸಿಕೊಳ್ಳುವಂತೆ ಐಎಂಎ ಸಕ್ಷಮ ಪ್ರಾಧಿಕಾರದ ವಿಶೇಷ ತನಿಖಾಧಿಕಾರಿ ಹರ್ಷಾಗುಪ್ತಾ ಅವರು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಐಎಂಎ ಸಂಸ್ಥೆಯ ಮಾಲೀಕ ಮೊಹಮದ್​ ಮನ್ಸೂರ್​ ಖಾನ್​ ಪರ ವರದಿ ನೀಡಿದ್ದಾರೆ ಎನ್ನಲಾದ ಐಪಿಎಸ್​ ಅಧಿಕಾರಿಗಳಾದ ಹೇಮಂತ್​ ನಿಂಬಾಳ್ಕರ್​ ಹಾಗೂ ಅಜಯ್​ ಹಿಲೋರಿ ವಿರುದ್ಧ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಿಬಿಐ ಅಧಿಕಾರಿಗಳಿಂದ ತನಿಖಾ ವರದಿ ತರಿಸಿಕೊಂಡು ಐಪಿಎಸ್​ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಹೂಡಿಕೆದಾರರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಹರ್ಷಗುಪ್ತ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಹರ್ಷಾಗುಪ್ತಾ ಮಂಗಳವಾರ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪತ್ರ ಕೈ ಸೇರಿದ ಬಳಿಕ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಿಬಿಐನಿಂದ ತನಿಖಾ ವರದಿ ತರಿಸಿಕೊಂಡು, ಲಂಚ ಪಡೆದಿರುವುದು ಕಂಡು ಬಂದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಐಎಂಎ ಮಾಲೀಕ ಮೊಹಮದ್​ ಮನ್ಸೂರ್​ ಖಾನ್​ ಪರ ವರದಿ ನೀಡಿದ ಇಬ್ಬರು ಐಪಿಎಸ್​ ಅಧಿಕಾರಿಗಳು ಇದಕ್ಕೆ ಪ್ರತಿಯಾಗಿ ಆತನಿಂದ ಏನೆಲ್ಲ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಇದೀಗ ಐಪಿಎಸ್​ ಅಧಿಕಾರಿಗಳಿಗೆ ಮತ್ತೆ ಸಿಬಿಐ ಕಂಟಕ ಎದುರಾಗಲಿದೆ.
ಯಾರೂ ಇಲ್ಲದ ವೇಳೆ ಮನೆಗೆ ಎಂಟ್ರಿ ಕೊಡುತ್ತಿದ್ದಳು, ಈಕೆಯ ಕೃತ್ಯಕ್ಕೆ ಸ್ಥಳೀಯರೇ ಬೆಚ್ಚಿಬಿದ್ದಿದ್ದರು!

ಅಯ್ಯೋ, ಅಮ್ಮ ಬೇಗ ಬಾ.. ಹಸುಗಳು ಕೂಗುತ್ತಿವೆ… ಎನ್ನುತ್ತ ಒಳಗೆ ಬಂದ ಮಗನಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
