ಬೆಂಗಳೂರು:ಐ ಮಾನಿಟರಿ ಅಡ್ವೈಸರಿ (ಐಎಂಎ) ಸಂಸ್ಥೆಯ ವಂಚನೆ ಪ್ರಕರಣದ ಸಂತ್ರಸ್ತರಿಗೆ ಹೂಡಿಕೆ ಹಣ ಮರಳಿಸುವುದಕ್ಕಾಗಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಹೊಸ ಆಪ್ ರೂಪಿಸಲು ಮುಂದಾಗಿದ್ದು, ಎರಡು ವಾರದೊಳಗೆ ಈ ಆಪ್ ಬಿಡುಗಡೆಯಾಗಲಿದೆ.ಐಎಂಎ ಮಾಲೀಕ ಮೊಹಮದ್ ಮನ್ಸೂರ್ ಖಾನ್​ಗೆ ಸೇರಿದ 450 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ ಜಪ್ತಿ ಮಾಡಲಾಗಿದ್ದು, ಇದನ್ನು ಗ್ರಾಹಕರಿಗೆ ಹಂಚಲು ಸರ್ಕಾರ ಸಕ್ಷಮ ಪ್ರಾಧಿಕಾರವನ್ನು ರಚಿಸಿದೆ. ಗ್ರಾಹಕರು ಹೂಡಿಕೆ ಮಾಡಿದ ಪ್ರಮಾಣಕ್ಕೆ ಅನುಗುಣವಾಗಿ ಶೇಕಡಾವಾರು ಲೆಕ್ಕದಲ್ಲಿ ಹಣ ಹಿಂದಿರುಗಿಸಲು ಸಕ್ಷಮ ಪ್ರಾಧಿಕಾರ ನಿರ್ಧರಿಸಿದೆ. ಹೂಡಿಕೆ ಮಾಡಿದ ಅಷ್ಟೂ ಹಣ ಸಿಗದಿದ್ದರೂ ಸ್ವಲ್ಪ ಪ್ರಮಾಣದಲ್ಲಿ ಸಿಗಬಹುದು ಎನ್ನಲಾಗಿದೆ.
ವಂಚನೆಗೊಳಗಾದ 55 ಸಾವಿರಕ್ಕೂ ಅಧಿಕ ಮಂದಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೂಡಿಕೆ ಹಣ ಪಡೆಯಲು ಇಚ್ಛಿಸುವವರು ಕಡ್ಡಾಯವಾಗಿ ಸಕ್ಷಮ ಪ್ರಾಧಿಕಾರ ಬಿಡುಗಡೆ ಮಾಡಲಿರುವ ಆಪ್​ನ್ನು ಮೊಬೈಲ್​ನಲ್ಲಿ ಡೌನ್​ಲೋಡ್ ಮಾಡಿಕೊಂಡು ಅದರಲ್ಲಿ ಕೇಳುವ ಆಯ್ಕೆಯನ್ನು ಭರ್ತಿ ಮಾಡಿ ಸರ್ಕಾರಿ ಸೇವಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಡೇಟಾದಲ್ಲಿದೆ ಮಾಹಿತಿ
ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ತನಿಖಾಧಿಕಾರಿಗಳಿಂದ ಈಗಾಗಲೇ ಐಎಂಎ ಕಂಪನಿಯ ಡೇಟಾ ಪಡೆದುಕೊಂಡಿದ್ದಾರೆ. ಇದರಲ್ಲಿ ಕಂಪನಿಯ ಅಷ್ಟೂ ಹೂಡಿಕೆದಾರರ ಮಾಹಿತಿ ಹಾಗೂ ಮೊಬೈಲ್ ನಂಬರ್ ಲಭ್ಯವಿದೆ. ಆಪ್ ಬಿಡುಗಡೆಯಾದ ಕೂಡಲೇ ಹೂಡಿಕೆ ಮಾಡಿದ ಎಲ್ಲ ಗ್ರಾಹಕರಿಗೂ ಕರೆ ಮಾಡಿ ಆಪ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅಧಿಕಾರಿಗಳು ಕರೆ ಮಾಡಿದಾಗ ಗ್ರಾಹಕರು ತಮ್ಮ ಗೊಂದಲ ಬಗೆಹರಿಸಿಕೊಳ್ಳಬಹುದಾಗಿದೆ.
ಆಧಾರ್ ಲಿಂಕ್​ಗೆ ಅನುಮತಿ ಕೋರಿಕೆ
ಹೂಡಿಕೆ ಮಾಡಿದ ಗ್ರಾಹಕರಿಗೆ ಸೂಕ್ತ ರೀತಿಯಲ್ಲಿ ಹಣ ಹಿಂದಿರುಗಿಸುವ ಉದ್ದೇಶದಿಂದ ಆಪ್​ಗೆ ಆಧಾರ್ ನಂಬರ್ ಲಿಂಕ್ ಮಾಡುವ ಸಂಬಂಧ ಈಗಾಗಲೇ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಆಧಾರ್ ಪ್ರಾಧಿಕಾರಕ್ಕೆ ಪತ್ರ ಬರೆದು ಅನುಮತಿ ಕೇಳಿದ್ದಾರೆ. ಹೂಡಿಕೆ ಮಾಡದಿದ್ದರೂ ಕೆಲ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಗ್ರಾಹಕರೆಂದು ಹೇಳಿ ಹಣ ಪಡೆದುಕೊಳ್ಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಈ ಆಪ್​ಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಗ್ರಾಹಕರು ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ, ಐಎಂಎ ಕಂಪನಿಯಲ್ಲಿ ಹೂಡಿಕೆ ಮಾಡುವ ವೇಳೆ ನೀಡಿರುವ ನಂಬರ್ ಸೇರಿ ಕೆಲ ದಾಖಲೆಗಳನ್ನು ಆಪ್​ನಲ್ಲಿ ಅಳವಡಿಸಬೇಕಾಗುತ್ತದೆ.
ಗ್ರಾಹಕರಿಗೆ ಫೋನ್​ನಿಂದ ಮಾಹಿತಿ
ಮುಂದಿನ 2 ವಾರದೊಳಗೆ ಆಪ್ ಬಿಡುಗಡೆಯಾಗಲಿದೆ. ಇದಕ್ಕೆ ಸಂಬಂಧಿಸಿದ ಕೆಲ ಪ್ರಕ್ರಿಯೆಗಳು ನಡೆಯುತ್ತಿದ್ದು, ಎಲ್ಲ ಗ್ರಾಹಕರಿಗೂ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಲಾಗುವುದು.
| ಹರ್ಷ ಗುಪ್ತ ಸಕ್ಷಮ ಪ್ರಾಧಿಕಾರದ ಅಧಿಕಾರಿ
| ಅವಿನಾಶ ಮೂಡಂಬಿಕಾನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eleven =
Remember me
