ಬೆಂಗಳೂರುರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 3ನೇ ತರಗತಿವರೆಗೂ ಅನುಸರಿಸುತ್ತಿರುವ ನಲಿಕಲಿ ಕಾರ್ಯಕ್ರಮದಡಿ ವಿದ್ಯಾ ಪ್ರವೇಶ, ಸೇತುಬಂಧ ಮತ್ತು ಕಲಿಕಾಂಶಗಳ ಕಲಿಕೆಯನ್ನು ಪ್ರಮುಖವಾಗಿ ಅನುಷ್ಠಾನ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ. ಪ್ರತಿ ಜಿಲ್ಲೆ ಮತ್ತು ಬ್ಲಾಕ್ ಅಧಿಕಾರಿಗಳು ಅಗತ್ಯ ಕ್ರಮ ವಹಿಸುವಂತೆ ನಿರ್ದೇಶನ ನೀಡಲಾಗಿದೆ.
ನಲಿಕಲಿ ಘಟಕಗಳಲ್ಲಿನ ಕ್ರಮಗಳು:
ಒಂದನೇ ತರಗತಿ ಮಕ್ಕಳಿಗೆ ಜೂನ್ 1ರಿಂದ 19ರವರೆಗೂ 40 ದಿನಗಳ ವಿದ್ಯಾಪ್ರವೇಶ ಕಾರ್ಯಕ್ರಮವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವುದು. ಪರಿಷ್ಕೃತ ಚಟುವಟಿಕೆಗಳನ್ನು ಡಿಎಸ್‌ಇಆರ್‌ಟಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.
2 ಮತ್ತು 3ನೇ ತರಗತಿ ಮಕ್ಕಳಿಗೆ ಜೂ.1ರಿಂದ 30ರವರೆಗೆ ಸೇತುಬಂಧ ಕಾರ್ಯಕ್ರಮವನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಬೇಕು. ಮಕ್ಕಳ ಅಭ್ಯಾಸ ಪುಸ್ತಕಗಳಲ್ಲಿ ಕಲಿಕಾ ಚಟುವಟಿಕೆಗಳನ್ನು ಅಳವಡಿಸಲಾಗಿದ್ದು, ಸುಗಮಕಾರರಿಗೆ ನೀಡಿರುವ ಸೂಚನೆಯಂತೆ ನಿರ್ವಹಿಸಬೇಕು.ಬರವಣಿಗೆ, ಅಭ್ಯಾಸ ಮತ್ತು ಸ್ವಯಂ ಮೌಲ್ಯಮಾಪನಕ್ಕೆ ವಿುಲವಾದ ಅವಕಾಶಗಳನ್ನು ಕಲ್ಪಿಸಿದ್ದು, ನಿರ್ವಹಣೆಯ ನಂತರದಲ್ಲಿ ಸುಗಮಕಾರರು ಅವುಗಳನ್ನು ಕಡ್ಡಾಯವಾಗಿ ಪರಿಶೀಲಿಸಿ, ಮಕ್ಕಳು ಮಾಡಿರುವ ತಪ್ಪುಗಳನ್ನು ತಿದ್ದಿ ಸೂಕ್ತ ಹಿಮ್ಮಾಹಿತಿಯನ್ನು ನೀಡಿ ಮಗುವಿನ ಕಲಿಕೆಗೆ ಮುಂದಾಗಬೇಕು.
ಕಲಿಕಾಂಶದ ಗುಂಪು, ಅಭ್ಯಾಸ/ಬಳಕೆಯ ಗುಂಪು ಮತ್ತು ಮೌಲ್ಯಮಾಪನ ಗುಂಪುಗಳ ಬಳಕೆಗೆ ಅವಕಾಶ ಕಲ್ಪಿಸಬೇಕು. ಮಕ್ಕಳ ಕಲಿಕೆಗೆ ಕುರಿತ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸಲು ಎಲ್ಲ ಹಂತದ ಅಧಿಕಾರಿಗಳು ನಿಯಮಿತವಾಗಿ ಶಾಲೆಗಳಿಗೆ ಭೇಟಿ ಕೈಗೊಳ್ಳುವ ಮೂಲಕ ಸಮರ್ಥ ಮೇಲುಸ್ತುವಾರಿ ಮತ್ತು ಮಾರ್ಗದರ್ಶನದೊಂದಿಗೆ ಪ್ರಾಥಮಿಕ ತರಗತಿಯ ಮಕ್ಕಳ ಕಲಿಕೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ.
ಇಂಗ್ಲಿಷ್ ನಲಿಕಲಿ ಕಾರ್ಯಕ್ರಮ:
ಇಂಗ್ಲಿಷ್ ನಲಿಕಲಿ ಕಾರ್ಯಕ್ರಮದಲ್ಲಿ ಶೇ.20 ಕೇಳುವುದು ಮತ್ತು ಮಾತನಾಡುವುದು, ಶೇ.80 ಓದುವುದು ಮತ್ತು ಬರೆಯುವ ಕೆಲಸದ ಮೇಲೆ ಕೇಂದ್ರೀಕರಿಸಬೇಕು.ಕ್ರಿಯಾತ್ಮಕ ವ್ಯಾಕರಣ ಮತ್ತು ಶಬ್ಧಕೋಶವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಭಾಷಾ ಆಟಗಳು-ಸಂಭಾಷಣೆಯ ವೃತ್ತಗಳನ್ನು ಆಯ್ಕೆ ಮಾಡಿಕೊಳ್ಳಬೇಕು.ಐ ಸ್ಪೈ, ಪಾಸಿಂಗ್ ದಿ ಪಾರ್ಸೆಲ್, ೈರ್ ಇನ್ ದಿ ಮೌಂಟೇನ್ ಮತ್ತು ಸೈಮನ್ ಸೇಸ್ ನಂತಹ ಆಟಗಳನ್ನು ಸೂಕ್ತವಾಗಿ ಬಳಸಿಕೊಳ್ಳುವುದು.
ನಲಿಕಲಿಗಳ ಮೌಲ್ಯಾಂಕನ ಅನುಷ್ಠಾನ
ಪ್ರತಿ ಅಭ್ಯಾಸ ಸಹಿತ ನಲಿಕಲಿ ಪಠ್ಯಪುಸ್ತಕಗಳ ಕೊನೆಯಲ್ಲಿ ವಿಷಯವಾರು ಕಲಿಕೆಯ ಲಗಳನ್ನು ನೀಡಲಾಗಿದೆ. ಕಲಿಕಾ ಲಗಳನ್ನು ಸಂಕಲಾತ್ಮಕ ಮತ್ತು ರಚನಾತ್ಮಕ ಮೌಲ್ಯಮಾಪನಕ್ಕೆ ಅನುಗುಣವಾಗಿ ವರ್ಗೀಕರಿಸಿದ್ದು, ಸುಗಮಕಾರರು ಅವುಗಳನ್ನು ಅವಲೋಕಿಸಿ ಮೌಲ್ಯಾಂಕನ ಪ್ರಕ್ರಿಯಯಲ್ಲಿ ತೊಡಗಿಸಿಕೊಳ್ಳಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
