ಬೆಂಗಳೂರು:ವಕೀಲರ ಹಿತರಕ್ಷಣೆಗಾಗಿ ಕಾಯ್ದೆ ಜಾರಿ ಮಾಡಬೇಕೆಂಬ ಕೂಗಿಗೆ ಕೊನೆಗೂ ಸರ್ಕಾರ ಸ್ಪಂದಿಸಿದ್ದರೂ ಸಚಿವ ಸಂಪುಟ ಸಭೆಯಲ್ಲಿ ಒಮ್ಮತ ಮೂಡಿಲ್ಲ. ಸಚಿವ ಸಂಪುಟದ ಮುಂದೆ ವಕೀಲರ ರಕ್ಷಣಾ ಕಾಯ್ದೆ ತರುವ ಪ್ರಸ್ತಾಪಕ್ಕೆ ನಾಲ್ವರು ಸಚಿವರು ಈ ಕಾಯ್ದೆಗೆ ಸಹಮತ ನೀಡಿಲ್ಲ. ಹಿರಿಯ ಸಚಿವರೊಬ್ಬರು ಲಿಖಿತವಾಗಿ ತಮ್ಮ ಅಸಮ್ಮತಿ ವ್ಯಕ್ತಮಾಡಿದ್ದಾರೆ. ಅಂತಿಮವಾಗಿ ಕಾಯ್ದೆ ಮಂಡನೆಯನ್ನು ಸಿಎಂ ವಿವೇಚನೆಗೆ ಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ನೇಕಾರರ ಪ್ಯಾಕೇಜ್ ಯೋಜನೆಯಡಿ ಜವಳಿ ವಲಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಹಣಕಾಸಿನ ನೆರವು ನೀಡಲು ವಿದ್ಯುತ್ ಮಗ್ಗ ನೇಕಾರರಿಗೆ ಹಣಕಾಸಿನ ನೆರವು ನೀಡಲು, ವಿದ್ಯುತ್ ಮಗ್ಗ ನೇಕಾರರಿಗೆ ಮತ್ತು ಮಗ್ಗ ಪೂರ್ವ ಘಟಕಗಳ ಕಾರ್ವಿುಕರಿಗೆ ವಾರ್ಷಿಕ 5 ಸಾವಿರ ರೂ.ನಂತೆ ಆರ್ಥಿಕ ನೆರವು ನೀಡಲು ಹಾಗೂ ನೇಯ್ಗೆ ಉದ್ದೇಶಗಳಿಗಾಗಿವ ಸಹಕಾರಿ ಬ್ಯಾಂಕುಗಳು ಮತ್ತು ಸಹಕಾರ ಸಂಘಗಳ ಮೂಲಕ 2 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿಯ ಸಾಲ ಸೌಲಭ್ಯ ಒದಗಿಸಲು ಹೊರಡಿಸಿರುವ ಆದೇಶಕ್ಕೆ ಸಂಪುಟ ಅನುಮೋದನೆ ನೀಡಿತು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ 3ರಲ್ಲಿ 230 ಕಿಮೀ ಹಾಗೂ 585.83 ಮೀ ಉದ್ದದ ಸೇತುವೆಗಳು ಸೇರಿದಂತೆ ಒಟ್ಟಾರೆ 230.81 ಕಿಮೀಗಳ ರಸ್ತೆ ಅಭಿವೃದ್ಧಿಗೆ 222 ಕೋಟಿ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಇದೆ.
ಮಂಡ್ಯಕ್ಕೆ 885.19 ಕೋಟಿ ರೂ.:ಮಂಡ್ಯ ಜಿಲ್ಲೆಯ ವಿವಿಧ ತಾಲೂಕುಗಳ ಒಟ್ಟಾರೆ 628 ಜನ ವಸತಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಮೂಲಕ ಮನೆ ಮನೆ ನಲ್ಲಿ ಸಂಪರ್ಕ ಕಲ್ಪಿಸಲು 885.19 ಕೋಟಿ ರೂ. ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಫ್ಲೋರೈಡ್ ಬಾಧಿತ 48 ಗ್ರಾಮಗಳ, ಬೇಲೂರು ತಾಲೂಕಿನ 12 ಗ್ರಾಮಗಳಿಗೆ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ 38.96 ಕೋಟಿ ರೂ. ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಅದೇ ರೀತಿ ಬೀದರ್ ಜಿಲ್ಲೆ ಬಾಲ್ಕಿಯ 54 ಜನವಸತಿಗೆ 91.22 ಕೋಟಿ ರೂ., ಹಾವೇರಿ ಜಿಲ್ಲೆ ಬ್ಯಾಡಗಿಯ 15 ಗ್ರಾಮಗಳಿಗೆ 36.50 ಕೋಟಿ ರೂ.ನ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.
650 ಬಸ್ ಖರೀದಿಗೆ ಒಪ್ಪಿಗೆ:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 650 ಬಸ್ ವಿವಿಧ ಮಾದರಿಯ ಹೊಸ ಬಸ್ ಖರೀದಿಸಲು 269.68 ಕೋಟಿ ರೂ. ಹಾಗೂ 152 ವೇಗದೂತ ಬಸ್​ಗಳನ್ನು 60.65 ಕೋಟಿ ಮೊತ್ತದಲ್ಲಿ ಖರೀದಿಸಲು ಸಂಪುಟ ಒಪ್ಪಿಗೆ ನೀಡಿದೆ.
1. ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆಯು 20 ಎಲೆಕ್ಟ್ರಿಕ್ ಮಿನಿ ಬಸ್ ಖರೀದಿಗೆ 19.13 ಕೋಟಿ ರೂ.
2. ಹಾವೇರಿ ಜಿಲ್ಲಾ ಪೊಲೀಸ್ ಕಾರ್ಯಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯ 18.75 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಒಪ್ಪಿಗೆ.
3. 17 ವೈದ್ಯಕೀಯ ಕಾಲೇಜುಗಳಿಗೆ ತಲಾ ಮೂರು ಸಿಟಿ ಸ್ಕಾ್ಯನ್ ಮತ್ತು ತಲಾ ಮೂರು ಎಂಆರ್​ಐ, ಇತರೆ ಉಪಕರಣ ಖರೀದಿಗೆ 96.84 ಕೋಟಿ ರೂ.
4. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ 2022-23, 2023-24ನೇ ಸಾಲುಗಳಲ್ಲಿ ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ 138 ಕಾಮಗಾರಿಗಳಿಗೆ (ಬ್ರಿಡ್ಜ್ ಕಂ ಬ್ಯಾರೇಜ್, ಅಣೆಕಟ್ಟು ನಿರ್ವಣ) 443.46 ಕೋಟಿ ರೂ.
5. ಬೆಂಗಳೂರು ಗಾಲ್ಪ್ ಸಂಸ್ಥೆಗೆ ಸ್ಯಾಂಕಿ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯ 59.18 ಎಕರೆ ಜಾಗದ ಲೀಸ್ ಅವಧಿ ಮುಂದುವರಿಕೆ.
6. ಕಲ್ಯಾಣ ಕರ್ನಾಟಕ ಭಾಗದ ಐದು ವಸತಿ ಶಾಲಾ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ 75 ಕೋಟಿ ರೂ.
7. ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕು ಕಾಳೇನಹಳ್ಳಿ ಗ್ರಾಮದಲ್ಲಿ 15 ಗುಂಟೆ ಜಾಗ ಶ್ರೀ ಬಸವೇಶ್ವರ ಜ್ಞಾನ ಜ್ಯೋತಿ ಚಾರಿಟಬಲ್ ಟ್ರಸ್ಟ್​ಗೆ ಮಂಜೂರು
8. ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಯ 21.23 ಕೋಟಿ ರೂ.
9. ಅಥಣಿ ತಾಲೂಕಿನ ಯಲ್ಲಮ್ಮವಾಡಿ ಕೆರೆಯಿಂದ 8 ಕೆರೆಗಳಿಗೆ ನೀರು ತುಂಬಿಸುವ ಜುಂಬರವಾಡ ಏತ ನೀರಾವರಿ ಯೋಜನೆಯ ಎರಡನೇ ಹಂತಕ್ಕೆ 95. ಕೋಟಿ ರೂ.
10. ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಹೊಸದಾಗಿ ಮೂರು ಹಂತದಲ್ಲಿ ಮಾಡ್ಯುಲರ್ ವಿಧಾನದಲ್ಲಿ ನಿರ್ವಿುಸಲು 297 ಕೋಟಿ ರೂ.
11. ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ 2022ಕ್ಕೆ ಅನುಮೋದನೆ, ಬೃಹತ್ ಬೆಂಗಳೂರು ಮಹಾ ನ ಗರ ಪಾಲಿಕೆ (ತಿದ್ದುಪಡಿ) ವಿಧೇಯಕ 2023ನ್ನು ಶಾಸನ ಸಭೆಯಲ್ಲಿ ಮಂಡಿಸಲು ಒಪ್ಪಿಗೆ ನೀಡಲಾಗಿದೆ.
12. ಕರ್ನಾಟಕ ಸಹಕಾರ ಸೇವೆ (ವೃಂದ ಮತ್ತು ನೇಮಕಾತಿ ನಿಯಮಗಳು 2023)ಕ್ಕೆ ಅನುಮೋದನೆ.
13. ಮೈಸೂರು ಯೋಜನಾ ಪ್ರದೇಶದ 92 ಬಹು ಗ್ರಾಮಗಳಿಗೆ ನೀರು ಒದಗಿಸಲು 595 ಕೋಟಿ ರೂ.
ಬರ್ತ್​ಡೇ ಪಾರ್ಟಿಯಲ್ಲಿ ಚಿತ್ರನಟನ ಮೇಲೆ ಹಲ್ಲೆ; ಆಡಿ ಕಾರಿನ ಗಾಜುಗಳು ಧ್ವಂಸ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
