| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆಯ ಹದಿನಾಲ್ಕನೇ ಬಜೆಟ್​ನಲ್ಲಿ ಘೋಷಣೆ ಮಾಡಿರುವ ಸಾರ್ವತ್ರಿಕ ಮೂಲ ಆದಾಯ (ಯೂನಿವರ್ಸಲ್ ಬೇಸಿಕ್ ಇನ್​ಕಂ) ಪರಿಕಲ್ಪನೆ ಏನು? ಇಂತಹ ಪದ್ಧತಿ ಯಾವ ರಾಷ್ಟ್ರಗಳಲ್ಲಿ ಇದೆ? ನಾಗರಿಕರಿಗೆ ಆಗುವ ಅನುಕೂಲವೇನು? ಸರ್ಕಾರಕ್ಕಾಗುವ ಹೊರೆ ಏನು?
ಸಾರ್ವತ್ರಿಕ ಮೂಲ ಆದಾಯದ ಬಗ್ಗೆ ದೇಶದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದರೂ ಸಹ ಕೇಂದ್ರ ಸರ್ಕಾರವೇ ಆಗಲಿ, ಬೇರೆ ಯಾವುದೇ ರಾಜ್ಯಗಳಲ್ಲಿಯೇ ಆಗಲಿ ಈ ಪದ್ಧತಿ ಅಳವಡಿಕೆ ಮಾಡುವ ಪ್ರಯತ್ನ ನಡೆದಿಲ್ಲ. ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಳವಡಿಸಲು ಮುಂದಾಗಿದ್ದು, ಹಲವು ರಾಜ್ಯಗಳು ಈ ಕಡೆ ತಿರುಗಿ ನೋಡುವಂತೆ ಮಾಡಿದೆ.
ಆದರೆ ಸಿದ್ದರಾಮಯ್ಯ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಐದು ಗ್ಯಾರಂಟಿಗಳ ಮೂಲಕ ರಾಜ್ಯದ 1.30 ಕೋಟಿ ಕುಟುಂಬಗಳಿಗೆ ವಾರ್ಷಿಕ 48 ರಿಂದ 60 ಸಾವಿರ ರೂ.ಗಳನ್ನು ನೀಡುವ ಮೂಲಕ ಬಡವರ ಕೈಗೆ ಹಣ ಸಿಗುವಂತೆ ಮಾಡುವುದು ಇದರ ಉದ್ದೇಶ. ಏಕೆಂದರೆ ಶೇ.60 ಜಿಎಸ್​ಟಿ ಸಂಗ್ರಹವಾಗುವುದೇ ಬಡವರಿಂದ, ಆದರೆ ಲಾಭ ಆಗುತ್ತಿರುವುದು ಶೇ.10 ಶ್ರೀಮಂತರಿಗೆ. ಆದ್ದರಿಂದಲೇ ಸಂಪತ್ತಿನ ಮರು ಹಂಚಿಕೆ ಮಾಡಬೇಕೆಂಬ ಉದ್ದೇಶ ಹೊಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಬಜೆಟ್ ಕೇವಲ ಅಕ್ಷರವಾಗದೇ ಹಸಿದವರ ಅನ್ನವಾಗಬೇಕು ಎಂಬುದನ್ನು ತೋರಿಸಿದ್ದಾರೆ. ಆ ಮೂಲಕ ಕರ್ನಾಟಕ ಮಾದರಿಯೊಂದು ಇಡೀ ದೇಶಕ್ಕೆ ಸೃಷ್ಟಿಯಾಗುತ್ತಿದೆ.
ಎಲ್ಲಿ ಯಶಸ್ವಿ?:ಹಾಗೇ ನೋಡಿದರೆ ಉತ್ತರ ಯೂರೋಪ್​ನ ದೇಶಗಳಲ್ಲಿ ಯುಬಿಐ ಅತ್ಯಂತ ಯಶಸ್ವಿಯಾಗಿದೆ ಎಂಬುದನ್ನು ಅರ್ಥಶಾಸ್ತ್ರಜ್ಞರೇ ಗುರುತಿಸುತ್ತಾರೆ. ಸಂತೋಷ ಸೂಚ್ಯಂಕ ಸೇರಿ ಅನೇಕ ವಿಷಯಗಳಲ್ಲಿ ಸದಾ ಮುಂದಿರುವ, ಹಲವು ಮುಂದುವರೆದ ದೇಶಗಳ ಹೊಟ್ಟೆಕಿಚ್ಚಿಗೂ ಕಾರಣವಾಗಿರುವ ಸ್ಕಾ್ಯಂಡಿನೇವಿಯಾ ದೇಶಗಳಾದ ಡೆನ್ಮಾರ್ಕ್, ಫಿನ್​ಲೆಂಡ್, ಅಲ್ಲದೆ ಹಾಲೆಂಡ್, ಸ್ವಿಜ್ಡರ್​ಲೆಂಡ್ ಸಹ ಯುಬಿಐಯನ್ನು ಅಳವಡಿಸಿಕೊಂಡಿವೆ. ಇನ್ನೂ ಕೆಲವು ದೇಶಗಳಲ್ಲಿ ಈ ಪ್ರಯತ್ನ ನಡೆದಿದೆ.
ಉದ್ದೇಶವೇನು?:ನಿರುದ್ಯೋಗಿ ಭತ್ಯೆ ನೀಡುವುದು, ಆಹಾರ, ಆರೋಗ್ಯ, ವಸತಿ, ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ ಎಂಬುದನ್ನು ಇಲ್ಲಿನ ಸರ್ಕಾರಗಳು ಮಾಡುತ್ತಿವೆ. ಆ ಮೂಲಕ ಕಲ್ಯಾಣ ರಾಷ್ಟ್ರ ಕಟ್ಟುವ ಉದ್ದೇಶವನ್ನು ಹೊಂದಿವೆ ಎಂಬುದನ್ನು ತೋರಿಸಿವೆ. ಎಷ್ಟೋ ರಾಷ್ಟ್ರಗಳಲ್ಲಿ ಜೈಲುಗಳೇ ಇಲ್ಲ, ಸೈನ್ಯವೂ ಇಲ್ಲ ಎಂದು ಮೂಲಗಳು ಹೇಳುತ್ತವೆ.
ಏನಾಗಿದೆ?:ಯುಬಿಐ ಅಳವಡಿಸಿರುವ ದೇಶಗಳಲ್ಲಿ ಆದಾಯ ತೆರಿಗೆ ಶೇ.80 ಸಂಗ್ರಹವಾಗುತ್ತಿದೆ. ಶ್ರೀಮಂತರ ಬಳಿಯ ಹಣ ಕಪು್ಪಹಣವಾಗುತ್ತದೆ ಹೊರತು ಮಾರುಕಟ್ಟೆಯ ಆರ್ಥಿಕತೆಗೆ ಹೆಚ್ಚು ಉಪಯೋಗವಾಗುವುದಿಲ್ಲ. ಆದರೆ ಬಡವರ ಬಳಿಯಲ್ಲಿದ್ದರೆ ಅದು ಮಾರುಕಟ್ಟೆ ಆರ್ಥಿಕತೆಯನ್ನು ವೃದ್ಧಿಸುತ್ತದೆ ಎಂಬುದನ್ನು ಯುಬಿಐ ಅಳವಡಿಸಿಕೊಂಡಿರುವ ದೇಶಗಳಲ್ಲಿ ತೋರಿಸಿದೆ ಎಂದು ಮೂಲಗಳು ಅಭಿಪ್ರಾಯಪಡುತ್ತವೆ.
ಯುಬಿಐ ತರಲು ಕಾರಣವೇನು?:ನಮ್ಮಲ್ಲಿ ಸರಾಸರಿ ಆದಾಯ 8,200 ರೂ.ಗಳಿದೆ ಎಂಬುದು ಒಂದು ಅಧ್ಯಯನ ವರದಿ ಹೇಳುತ್ತದೆ. ಅಷ್ಟು ಕಡಿಮೆ ಮೊತ್ತದಲ್ಲಿ ಜೀವನ ನಿರ್ವಹಣೆ ಇಂದಿನ ದಿನಗಳಲ್ಲಿ ಸಾಧ್ಯವಿಲ್ಲ. ಆದ್ದರಿಂದಲೇ ಯುಬಿಐ ಮೂಲಕ ಆದಾಯದ ಪ್ರಮಾಣವನ್ನು ಹಿಗ್ಗಿಸಲಾಗುತ್ತಿದೆ.
ಸಂಪನ್ಮೂಲ ಕ್ರೋಡೀಕರಣ ಹೇಗಾಗಿದೆ?:ಐದು ಗ್ಯಾರಂಟಿಗಳ ಮೂಲಕ ಯುಬಿಐ ತರಲು ಮುಂದಾಗಿರುವ ಸಿದ್ದರಾಮಯ್ಯ ಸಂಪನ್ಮೂಲ ಹೇಗೆ ಕ್ರೋಡೀಕರಿಸಲಿದ್ದಾರೆ ಎಂಬ ಪ್ರಶ್ನೆಯೂ ಇಲ್ಲಿದೆ. 52 ಸಾವಿರ ಕೋಟಿ ರೂ.ಗಳನ್ನು ಯುಬಿಐ ಮೂಲಕ ತುಂಬಲಿದ್ದಾರೆ. ಹಿಂದಿನ ಬಸವರಾಜ ಬೊಮ್ಮಾಯಿ ಬಜೆಟ್​ನ ಸುಮಾರು 17 ಕಾರ್ಯಕ್ರಮಗಳನ್ನು ಕೈ ಬಿಡುತ್ತಿದ್ದಾರೆ. ಕೆಲ ಯೋಜನೆಗಳನ್ನು ಕೈ ಬಿಡುವ ಮೂಲಕ 7,500 ಕೋಟಿ ರೂ.ಗಳನ್ನು ಉಳಿಸಿಕೊಳ್ಳಲಿದ್ದಾರೆ. ಇದರ ಜತೆಗೆ 8 ಸಾವಿರ ಕೋಟಿ ರೂ. ಹೊಸದಾಗಿ ಸಾಲ ಮಾಡುತ್ತಿದ್ದಾರೆ. ಅಲ್ಲಿಗೆ 15,500 ಕೋಟಿ ರೂ.ಗಳು ಲಭ್ಯವಾಗಲಿವೆ. ಉಳಿದಂತೆ ತೆರಿಗೆ ಸಂಗ್ರಹದ ಇಲಾಖೆಗಳಿಗೆ ಗುರಿ ಹೆಚ್ಚಳ ಮಾಡುವ ಮೂಲಕ ಉಳಿದ ಸಂಪನ್ಮೂಲ ಕ್ರೋಡೀಕರಣವಾಗಲಿದೆ ಎಂಬುದು ಹಣಕಾಸು ಇಲಾಖೆಯ ಉನ್ನತ ಮೂಲಗಳ ಮಾಹಿತಿ.
ಹಗ್ಗದ ಮೇಲಿನ ನಡಿಗೆ:ಬಜೆಟ್ ರೂಪಿಸಿ ಜಾರಿಗೊಳಿ ಸುವುದು ಹಗ್ಗದ ಮೇಲಿನ ನಡಿಗೆಯೇ ಆಗಿರುತ್ತದೆ. ಆದ್ದರಿಂದಲೇ ಬಹುತೇಕರು ಹೊಸ ಘೋಷಣೆಗಳಿರುವುದಿಲ್ಲವೆಂದೇ ಭಾವಿಸಿದ್ದರು. ಆ ನಿರೀಕ್ಷೆ ಸುಳ್ಳಾಗಿದೆ ಎಂದು ಸರ್ಕಾರದ ಮೂಲಗಳು ವಿಶ್ಲೇಷಣೆ ಮಾಡುತ್ತವೆ. ಬಜೆಟನ್ನು ಮೂರು ರೀತಿಯಲ್ಲಿ ಗುರುತಿಸಲಾಗುತ್ತಿದೆ. ಮೊದಲನೆಯದು ಬಜೆಟ್ ಬಡವರ ಹಾಗೂ ಮೇಲ್ವರ್ಗದ ಬಡವರ ಪರವಾಗಿದೆ. ಎರಡನೇಯದು ಅಂಗೈಯಲ್ಲಿ ಆಕಾಶ ತೋರಿಸುತ್ತಿಲ್ಲ, ಆರ್ಥಿಕ ಶಿಸ್ತು ಮೀರಿಲ್ಲ ಹಾಗೂ ಮೂರನೇಯದು ಪ್ರತಿ ಇಲಾಖೆಗೂ ಕನಿಷ್ಠ ಒಂದಾದರೂ ಹೊಸ ಕಾರ್ಯಕ್ರಮವಿದೆ.
ಪ್ರಣಾಳಿಕೆಗೂ ಒತ್ತು:ಕಾಂಗ್ರೆಸ್ ಸರ್ಕಾರ ಪ್ರಣಾ ಳಿಕೆಯ ಜಾರಿಗೆ ಯಾವಾಗಲೂ ಒತ್ತು ನೀಡುತ್ತ ಬರುತ್ತಿದೆ. ಈ ಬಜೆಟ್ ಮೂಲಕವೂ ಚುನಾವಣಾ ಪ್ರಣಾಳಿಕೆಯ 75 ಭರವಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ಸಮರ್ಥನೆ ಮಾಡುತ್ತವೆ.
ಕಾಮಕುಮಾರ ಸ್ವಾಮೀಜಿಯ ಭೀಕರ ಕೊಲೆ; ತಲೆ ಇಬ್ಭಾಗ, ಕೈ-ಕಾಲುಗಳೂ ಕಟ್, ಶವ 9 ತುಂಡು!

ಯಥಾಸ್ಥಿತಿ ಕಾಪಾಡಿ, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ: ಮದ್ಯಪಾನಪ್ರಿಯರ ಸಂಘದಿಂದ ಸರ್ಕಾರಕ್ಕೆ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
