ಬೆಂಗಳೂರು:ಬಸವರಾಜ ಬೊಮ್ಮಾಯಿ ಸಂಪುಟ ಸೇರಿದ ನೂತನ 29 ಮಂತ್ರಿಗಳಿಗೆ ಕೊನೆಗೂ ಖಾತೆಗಳ ಹಂಚಿಕೆಯಾಗಿದೆ. ಹಳಬರು ಮತ್ತು ವಲಸಿಗರನ್ನು ಮತ್ತದೇ ಖಾತೆಗಳಲ್ಲಿ ಮುಂದುವರಿಸಲಾಗಿದ್ದರೆ, ಹೊಸಬರ ಪೈಕಿ ಸಂಘ ನಿಷ್ಠರಿಗೆ ಪ್ರಮುಖ ಖಾತೆ ಬಳುವಳಿಯಾಗಿ ಸಿಕ್ಕಿದೆ. ಇನ್ನು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ನಿಷ್ಠರಿಗೂ ಮಹತ್ವದ ಖಾತೆ ನೀಡಿ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಲಾಗಿದೆ. ಒಟ್ಟಾರೆ ಖಾತೆ ಹಂಚಿಕೆ ಕಸರತ್ತಿನ ಬಳಿಕವಾದರೂ, ಆಡಳಿತಯಂತ್ರ ಚುರುಕಾಗಿ ಕೆಲಸಗಳು ವೇಗ ಪಡೆಯಬಹುದೆಂಬ ನಿರೀಕ್ಷೆ ಜನ-ಸಾಮಾನ್ಯರಲ್ಲಿ ಗರಿಗೆದರಿದೆ.
ವಿಳಂಬಕ್ಕೆ ಕಾರಣ:ಹಿರಿಯರು, ಹೊರಗಿನಿಂದ ಬಂದವರು ಮಹತ್ವದ ಖಾತೆಗಳಿಗೆ ಪಟ್ಟು ಹಿಡಿದಿದ್ದರೆ, ಸಂಘ ನಿಷ್ಠರಿಗೆ ಪ್ರಮುಖ ಖಾತೆಗಳನ್ನು ನೀಡಬೇಕೆಂದು ಸಂಘ-ಪರಿವಾರದ ಸೂಚನೆಯಿತ್ತು. ಇದು ಸಿಎಂ ಬೊಮ್ಮಾಯಿಗೆ ತಲೆನೋವಾಗಿ ಪರಿಣಮಿಸಿತ್ತು. ಈ ಬೆಳವಣಿಗೆ ಸೂಕ್ಷ್ಮವಾಗಿ ಗಮನಿಸಿದ ವರಿಷ್ಠರು ಮಧ್ಯ ಪ್ರವೇಶಿಸುವ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಖಾತೆಗಳ ಹಂಚಿಕೆ ಪಟ್ಟಿ ಶುಕ್ರವಾರ ರಾತ್ರಿಯೇ ಸಿದ್ಧವಾಗಿತ್ತು. ದೆಹಲಿ ನಾಯಕರ ಗ್ರೀನ್ ಸಿಗ್ನಲ್ ಬಳಿಕ ಶನಿವಾರ ಬೆಳಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅಂಕಿತದೊಂದಿಗೆ ಬೊಮ್ಮಾಯಿ ಈ ಕಸರತ್ತು ಮುಗಿಸಿದ್ದು, ಸಂಭಾವ್ಯ ಅಪಸ್ವರ ನಿವಾರಿಸುವ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.
ಜೊಲ್ಲೆಗೆ ಹಿಂಬಡ್ತಿ:ಬಿಎಸ್​ವೈ ಆಡಳಿತಾವಧಿಯ ಕೊನೇ ದಿನಗಳಲ್ಲಿ ಶಶಿಕಲಾ ಜೊಲ್ಲೆಗೆ ಮೊಟ್ಟೆ ಖರೀದಿ ಅವ್ಯವಹಾರದ ಕಳಂಕ ತಟ್ಟಿತ್ತು. ಆದರೂ ದೆಹಲಿ ನಾಯಕರ ಕೃಪಾಕಟಾಕ್ಷದಿಂದ ಬೊಮ್ಮಾಯಿ ಸಂಪುಟದಲ್ಲಿ ಜೊಲ್ಲೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭ್ರಷ್ಟಾಚಾರ ವಿರೋಧಿಸುವ ಬಿಜೆಪಿ ತದ್ವಿರುದ್ಧ ನಿಲುವು ತಳೆದಿದೆ ಎಂಬ ಅಪವಾದ, ಆಕ್ರೋಶ ತಣಿಸಲೆಂದು ಜೊಲ್ಲೆ ಖಾತೆ ಬದಲಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹಲವರಿಗೆ ಡಬಲ್ ಖಾತೆ:ಸಂಘ ನಿಷ್ಠರಾದ ವಿ. ಸುನೀಲ್ ಕುಮಾರ್, ಅರಗ ಜ್ಞಾನೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ.ನಾಗೇಶ್, ಮೂಲ ಬಿಜೆಪಿಯವರಾದ ಹಾಲಪ್ಪ ಆಚಾರ್​ಗೆ ಮಣೆ ಹಾಕಿ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಜೆ.ಸಿ. ಮಾಧುಸ್ವಾಮಿ, ಬಿ.ಶ್ರೀರಾಮುಲು, ವಿ.ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಉಮೇಶ್ ಕತ್ತಿ, ಹಾಲಪ್ಪ ಆಚಾರ್, ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಡಾ.ಕೆ.ಸುಧಾಕರ್, ಕೆ.ಸಿ.ನಾರಾಯಣಗೌಡ ಡಬಲ್ ಖಾತೆಗಳ ಭಾಗ್ಯಶಾಲಿಗಳಾಗಿದ್ದರೆ, ಮುರುಗೇಶ್ ನಿರಾಣಿ ಬಯಸಿದ ಖಾತೆಯನ್ನೇ ಗಿಟ್ಟಿಸಿಕೊಂಡಿದ್ದಾರೆ.
ಬಸವರಾಜ ಬೊಮ್ಮಾಯಿ:ಮುಖ್ಯಮಂತ್ರಿ, ಹಣಕಾಸು, ಸಂಪುಟ ವ್ಯವಹಾರ, ಡಿಪಿಎಆರ್, ಗುಪ್ತದಳ, ಬೆಂಗಳೂರು ನಗರಾಭಿವೃದ್ಧಿ ಹಾಗೂ ಹಂಚಿಕೆಯಾಗದೇ ಉಳಿದ ಖಾತೆಗಳು
ಆಡಳಿತದಲ್ಲಿ ಬದಲಾವಣೆ ತರಬೇಕು ಎನ್ನುವ ಉದ್ದೇಶದಿಂದ ಖಾತೆಗಳು ಹಂಚಿಕೆಯಾಗಿವೆ. ಹಳಬ ಹಾಗೂ ಹೊಸಬರೆಂಬ ವ್ಯತ್ಯಾಸವಿಲ್ಲದೆ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಎಲ್ಲರೂ ಉತ್ತಮವಾಗಿ ಜವಾಬ್ದಾರಿ ನಿಭಾಯಿಸಲಿದ್ದಾರೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − ten =
Remember me
