ಬೆಂಗಳೂರು:ಕರೊನಾ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್​ಡೌನ್ ಜಾರಿಯಾಗಿರುವ ಪರಿಣಾಮ ರಾಜ್ಯದಲ್ಲಿ ದಾಖಲಾದ ಪ್ರಮುಖ ಪ್ರಕರಣಗಳ ತನಿಖೆ ಹಳ್ಳ ಹಿಡಿದಿದೆ. ಸಿಬಿಐ, ಎಸಿಬಿ, ಆದಾಯ ತೆರಿಗೆ ಇಲಾಖೆ (ಐಟಿ), ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಪೊಲೀಸ್ ಠಾಣೆಗಳಲ್ಲಿ ಅಂತಿಮ ಹಂತದಲ್ಲಿದ್ದ ಶೇ.70 ಪ್ರಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.
ಸಿಬಿಐ, ಇಡಿ, ಐಟಿ ಹಾಗೂ ಎಸಿಬಿಯಲ್ಲಿ ಹಿಂದೆ ದಾಖಲಾಗಿದ್ದ ಕೋಟ್ಯಂತರ ರೂ. ಅವ್ಯವಹಾರಕ್ಕೆ ಸಂಬಂಧಿಸಿದ ಕೆಲ ಮಹತ್ವದ ಪ್ರಕರಣಗಳ ತನಿಖೆ ಮುಕ್ತಾಯ ಹಂತಕ್ಕೆ ಬಂದಿವೆ. ಕರೊನಾ ಭೀತಿಯಿಂದ ಕೆಲ ಪ್ರಮುಖ ಪ್ರಕರಣಗಳ ಸಾಕ್ಷ್ಯ ಕಲೆ ಹಾಕಲಾಗದೆ ತನಿಖೆಯೇ ನಿಂತಿದೆ. ಕೆಲ ಪ್ರಕರಣಗಳಲ್ಲಿ ಸಾಕ್ಷ್ಯ ಸಿಕ್ಕಿದರೂ ದಾಳಿಗೊಳಗಾದವರನ್ನು ವಿಚಾರಣೆ ನಡೆಸಿದರೆ ಮಾತ್ರ ತನಿಖೆ ಮುಂದುವರಿಯುತ್ತದೆ. ದಾಳಿಗೆ ಒಳಗಾದವರನ್ನು ಸದ್ಯ ಅಧಿಕಾರಿಗಳು ವಿಚಾರಣೆ ನಡೆಸಲು ಲಾಕ್​ಡೌನ್​ನಿಂದ ಸಾಧ್ಯವಾಗುತ್ತಿಲ್ಲ. ಇದರಿಂದ ಕೆಲ ವರ್ಷಗಳಿಂದ ತನಿಖೆ ನಡೆಸಿ ಅಂತಿಮ ಹಂತದಲ್ಲಿದ್ದ ಪ್ರಮುಖ ಪ್ರಕರಣಗಳ ಚಾರ್ಜ್​ಶೀಟ್ ಸಲ್ಲಿಕೆ ಇನ್ನೂ ವಿಳಂಬವಾಗಲಿದೆ ಎಂದು ಸಿಬಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದಲ್ಲಿ ಪೊಲೀಸ್ ತನಿಖಾಧಿಕಾರಿಗಳು ಲಾಕ್​ಡೌನ್ ಬಂದೋಬಸ್ತ್​ನಲ್ಲಿ ಬಿಜಿಯಾಗಿದ್ದು, ಠಾಣೆ ಮೆಟ್ಟಿಲೇರಿದ ಸಾವಿರಾರು ಪ್ರಕರಣದ ತನಿಖೆಗೂ ಬ್ರೇಕ್ ಬಿದ್ದಿದೆ. ಇದು ಆರೋಪಿಗಳಿಗೆ ವರದಾನವಾದರೆ, ನ್ಯಾಯಕ್ಕಾಗಿ ಪರಿತಪಿಸುತ್ತಿರುವ ಸಾವಿರಾರು ಮಂದಿಗೆ ಹಿನ್ನಡೆಯಾಗಿದೆ. ಕರೊನಾ ಭೀತಿ ಮುಗಿಯುವವರೆಗೂ ಸಿಬಿಐ, ಐಟಿ, ಇಡಿ, ಎಸಿಬಿ ಹಾಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣಗಳ ತನಿಖೆ ಮುಂದುವರಿಯುವುದೇ ಅನುಮಾನ ಎನ್ನುತ್ತಿವೆ ಪೊಲೀಸ್ ಮೂಲಗಳು.
ತನಿಖೆಗಳಿಗೂ ಕರೊನಾ ಎಫೆಕ್ಟ್:ಸಿಬಿಐ ತನಿಖೆ ನಡೆಸುತ್ತಿದ್ದ ಐಎಂಎ ಬಹುಕೋಟಿ ರೂ. ವಂಚನೆ ಹಗರಣ, ಯೋಗೀಶ್ ಗೌಡ ಕೊಲೆ ಪ್ರಕರಣ, ನೈಋತ್ಯ ರೈಲ್ವೆ ಇಲಾಖೆಯ ಟೆಂಡರ್​ನಲ್ಲಿ ನಡೆದ ಅಕ್ರಮ ಸೇರಿ ಹತ್ತಾರು ಪ್ರಕರಣಗಳ ತನಿಖೆಗೆ ಕರೊನಾದಿಂದ ತಡೆ ಉಂಟಾಗಿದೆ. ಎಸಿಬಿಯಲ್ಲಿ ದಾಖಲಾಗಿದ್ದ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್. ಸ್ವಾಮಿ, ಬಿಡಿಎ ಇಂಜಿನಿಯರ್ ಗೌಡಯ್ಯ ಮೇಲಿನ ದಾಳಿ ಪ್ರಕರಣ, ಮಾಜಿ ಸಚಿವ ಪುಟ್ಟರಂಗ ಶೆಟ್ಟಿ ಆಪ್ತ ಲಂಚ ಪಡೆದ ಪ್ರಕರಣ, ಬಿಡಿಎ ಇಂಜಿನಿಯರ್​ಗಳು, ಕೆಐಎಡಿಬಿ ಅಧಿಕಾರಿಗಳು, ಪಿಡಬ್ಲ್ಯೂಡಿ ಇಂಜಿನಿಯರ್​ಗಳು, ಬಿಬಿಎಂಪಿ ಅಧಿಕಾರಿಗಳು, ಬಿಡಿಎ ಉಪನಿರ್ದೇಶಕರ ಮೇಲಿನ ದಾಳಿ ಪ್ರಕರಣದ ತನಿಖೆಗೆ ಅಡ್ಡಿಯಾಗಿದೆ. ಐಟಿ ಅಧಿಕಾರಿಗಳು ನಡೆಸಿದ್ದ ಮಾಜಿ ಸಚಿವ ಡಾ.ಜಿ. ಪರಮೇಶ್ವರ್ ಮೇಲಿನ ದಾಳಿ, ವೈದ್ಯಕೀಯ ಉಪಕರಣಗಳ ತಯಾರಿಕಾ ಕಂಪನಿ, ತೆರಿಗೆ ವಂಚಿಸಿದ ಉದ್ಯಮಿಗಳ ಮೇಲಿನ ದಾಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಅರ್ಧಕ್ಕೆ ನಿಂತಿದೆ. ಅಕ್ರಮ ವಿದೇಶಿ ಬಂಡವಾಳ ಹೂಡಿಕೆ ಪ್ರಕರಣದ ಸಂಬಂಧ ದೇಶಾದ್ಯಂತ ಇಡಿ ಅಧಿಕಾರಿಗಳು ಉದ್ಯಮಿಗಳ ಮೇಲೆ ನಡೆಸಿದ್ದ ದಾಳಿಯ ತನಿಖೆಗೂ ಭಾರಿ ಹಿನ್ನಡೆಯಾಗಿದೆ.
ಆರೋಪಿಗಳಿಗೆ ಸಹಕಾರಿ:10 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟು ಶಿಕ್ಷೆಗೆ ಗುರಿಯಾಗುವ ಅಪರಾಧಗಳಲ್ಲಿ ಭಾಗಿಯಾದ ಆರೋಪಿಗಳು ನ್ಯಾಯಾಂಗ ಬಂಧನಕ್ಕೊಳಗಾಗಿದ್ದರೆ, ಮುಂದಿನ 90 ದಿನದೊಳಗೆ ಪೊಲೀಸರು ತನಿಖೆ ಮುಕ್ತಾಯಗೊಳಿಸಿ ಚಾರ್ಜ್​ಶೀಟ್ ಸಲ್ಲಿಸಬೇಕು. 7 ವರ್ಷ ಮೇಲ್ಪಟ್ಟು, 10 ವರ್ಷದೊಳಗೆ ಶಿಕ್ಷೆಗೆ ಗುರಿಯಾಗುವ ಪ್ರಕರಣಗಳಲ್ಲಿ 60 ದಿನದೊಳಗೆ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಬೇಕು. ಒಂದು ವೇಳೆ ಚಾರ್ಜ್​ಶೀಟ್ ಸಲ್ಲಿಸದಿದ್ದರೆ ಆರೋಪಿಗಳಿಗೆ ಬಿಡುಗಡೆ ಭಾಗ್ಯ ದೊರಕುತ್ತದೆ. ಇದರಿಂದ ಪೊಲೀಸರಿಗೆ ಹಿನ್ನಡೆಯಾಗುತ್ತದೆ. ಇಂತಹ ಪ್ರಕರಣಗಳ ತನಿಖೆ ನಡೆಸುವುದು ಅನಿವಾರ್ಯವಾದ ಕಾರಣ ಸೂಕ್ತ ಸಾಕ್ಷ್ಯ ಸಿಗದಿದ್ದರೂ ಆತುರದಲ್ಲಿ ಜಾರ್ಜ್​ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಪೊಲೀಸರ ಈ ನಡೆ ಆರೋಪಿಗಳಿಗೆ ಜಾಮೀನು ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದು ಹಿರಿಯ ವಕೀಲರೊಬ್ಬರು ತಿಳಿಸಿದ್ದಾರೆ.
ಆನ್​ಲೈನ್ ವಿಚಾರಣೆ:ಕರೊನಾ ಹಿನ್ನೆಲೆಯಲ್ಲಿ ಸದ್ಯ ಕೆಳಹಂತದ ನ್ಯಾಯಾಲಯಗಳಲ್ಲಿ ನಡೆಯುತ್ತಿದ್ದ ವಿಚಾರಣೆಗಳು ಸ್ಥಗಿತಗೊಂಡಿವೆ. ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಪ್ರತಿ ಜಿಲ್ಲೆಗೆ ಒಂದು ಕೋರ್ಟ್ ಮತ್ತು ಓರ್ವ ನ್ಯಾಯಾಧೀಶರನ್ನು ನೇಮಿಸಲಾಗಿದ್ದು, ವಿಡಿಯೋ ಕಾನ್ಪರೆನ್ಸ್ ಮೂಲಕ ಅಗತ್ಯ ಪ್ರಕರಣಗಳ ವಿಚಾರಣೆ ನಡೆಸುತ್ತಾರೆ. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳು ಜಾಮೀನಿಗಾಗಿ ತಮ್ಮ ವಕೀಲರ ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಜೂಮ್ ಆಪ್ ಮೂಲಕ ಅರ್ಜಿ ವಿಚಾರಣೆ ನಡೆಸಲಾಗುತ್ತದೆ. ವಿಚಾರಣೆ ನಡೆಸಿದ ಬಳಿಕ ಆದೇಶ ಪ್ರತಿಯನ್ನು ನ್ಯಾಯಾಧೀಶರು ಇ-ಮೇಲ್ ಮೂಲಕ ಆರೋಪಿ ಪರ ಹಾಗೂ ಸರ್ಕಾರಿ ಪರ ವಕೀಲರಿಗೆ ಕಳುಹಿಸುತ್ತಾರೆ.
| ಅವಿನಾಶ್​ ಮೂಡಂಬಿಕಾನಾ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × one =
Remember me
