ಬೆಂಗಳೂರು:ಕರೊನಾ ವೈರಸ್​ ಸೋಂಕಿನಿಂದ ಗುಣಮುಖರಾಗಿ ಬಂದಿದ್ದೇನೆ ಎನ್ನುವುದನ್ನೂ ಮರೆತು ಕರೊನಾ ಹಾಟ್​ಸ್ಪಾಟ್​ ಬೆಂಗಳೂರಿನ ಪಾದರಾಯನಪುರದ ಬೀದಿಗಳಲ್ಲಿ ರೋಡ್​ ಷೋ ಮಾಡುವ ಮೂಲಕ ಲಾಕ್​ಡೌನ್​ ನಿಯಮವನ್ನು ಗಾಳಿಗೆ ತೂರಿದ ಪಾದರಾಯನಪುರದ ಕಾರ್ಪೋರೇಟರ್​ ಇಮ್ರಾನ್​ ಪಾಷಾರನ್ನು ಪೊಲೀಸರು ಬಂಧಿಸಿದ್ದಾರೆ.
ಕರೊನಾ ವೈರಸ್​ನಿಂದ ಗುಣಮುಖರಾದವರು ಕಡ್ಡಾಯವಾಗಿ ಹೋಂ ಕ್ವಾರಂಟೈನ್​ನಲ್ಲಿ ಇರಬೇಕು. ಅದರೆ ಅದನ್ನು ಬಿಟ್ಟು ಪಾಷಾ ವೈರಸ್​ನಿಂದ ಗುಣಮುಖರಾಗಿ ವಾಪಸ್​ ಆಗುತ್ತಿದ್ದಂತೆಯೇ ಪಾದರಾಯನಪುರದಲ್ಲಿ ರೋಡ್​ ಷೋ ನಡೆಸಿದರು. ಮೊದಲಿಗೆ ಡಾ. ರಾಜ್​ಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಹಾಕಿ ಷೋ ಆರಂಭಿಸಿದ ಮೇಲೆ ಪಾಷಾ ಅಭಿಮಾನಿಗಳು ಶಾಲು ಹೊದಿಸಿ ಹೂವಿನ ಹಾರ ಹಾಕಿ ಸ್ವಾಗತಿಸಿದರು. ತಮ್ಮ ನೆಚ್ಚಿನ ನಾಯಕನ ಮೇಲೆ ಹೂವನ್ನು ಎಸೆದು ಅಭಿಮಾನ ತೋರಿಸಿದರು.
ಇದನ್ನೂ ಓದಿ:ಕ್ವಾರಂಟೈನ್ ಆಗಲ್ಲ ಎನ್ನುತ್ತಿದ್ದ ಕಾರ್ಪೋರೇಟರ್ ಕೊನೆಗೂ ಆಸ್ಪತ್ರೆಗೆ ರವಾನೆಕರೊನಾ ಕೂಪವಾಗಿರುವ ಪಾದರಾಯನಪುರದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಇಮ್ರಾನ್ ಪಾಷಾ ಅಭಿಮಾನಿಗಳು ಜೈಕಾರ ಕೂಗುತ್ತಾ ಪಟಾಕಿ ಸಿಡಿಸುತ್ತಾ. ಅನುಮತಿ ಇಲ್ಲದೆ ರೋಡ್ ಷೋ ನಡೆಸಿದ್ದಾರೆ. ಮಾಸ್ಕ್​ ಕೂಡ ಹಾಕದೇ ಬೇಜವಬ್ದಾರಿ ತೋರಿದ್ದಾರೆ ಎಂದಿರುವ ಪೊಲೀಸರು ಇಮ್ರಾನ್ ಪಾಷಾರನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ರೋಡ್ ಷೋಗೆ ಬ್ರೇಕ್ ಹಾಕಿದ್ದಾರೆ.
ಇದೇ ವೇಳೆ ಅವರ ಹಿಂದೆ 150ಕ್ಕೂ ಹೆಚ್ಚು ಬೈಕ್​ಗಳಲ್ಲಿ ತೆರಳುತ್ತಿದ್ದ ಅಭಿಮಾನಿಗಳನ್ನು ರಸ್ತೆಯಲ್ಲೇ ತಡೆದ ಜೆಜೆ ನಗರ ಪೊಲೀಸ್ ಠಾಣೆಯ ಪೊಲೀಸ್​ ಅಧಿಕಾರಿ ಖಡಕ್​ ವಾರ್ನಿಂಗ್​ ಕೊಟ್ಟರು.
ಕೂಡಲೇ ಪಾಷಾರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾಯ್ದೆ ಅಡಿ ಬಂಧಿಸಿರುವ ಪೊಲೀಸರು ವಿಕ್ಟೋರಿಯಾ ಜೈಲು ವಾರ್ಡ್​ಗೆ ಪಾಷಾರನ್ನು ಶಿಫ್ಟ್ ಮಾಡಿದ್ದಾರೆ. ಪಾದರಾಯನಪುರದಲ್ಲಿ ಕೆಎಸ್ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ:ಪಾದರಾಯನಪುರ ಪಾಲಿಕೆ ಸದಸ್ಯ ಇಮ್ರಾನ್​ ಪಾಷಾ ವಿರುದ್ಧ ಎಫ್​ಐಆರ್​
ಕೊರೋನಾ ವೈರಸ್​ಗೆ ತುತ್ತಾಗಿದ್ದ ಇಮ್ರಾನ್ ಪಾಷಾ ಅವರನ್ನು 7 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಲೂ ಇದೇ ರೀತಿ ಅಭಿಮಾನಿಗಳು ಕಿಕ್ಕಿರಿದು ತುಂಬಿ ಲಾಕ್​ಡೌನ್​ ನಿಯಮ ಮೀರಿದ್ದರು.
ಜಮೀರ್​ ಗರಂ:ಇಮ್ರಾನ್​ ಪಾಷಾ ನಡೆಗೆ ಶಾಸಕ ಜಮೀರ್​ ಅಹಮ್ಮದ್​ ಖಾನ್​ ಗರಂ ಆಗಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಜಮೀರ್‌ ಅಹಮ್ಮದ್ ಖಾನ್, ರಾಜ್ಯಕ್ಕೆ ರಾಜ್ಯವೇ ಕರೊನಾದಿಂದ ಕಂಗಾಲಾಗಿದೆ, ಇಂತಹ ಸಂದಿಗ್ಧ ಸಮಯದಲ್ಲಿ ಜನರನ್ನು ಗುಂಪುಗೂಡಿಸಿ ಮೆರವಣಿಗೆ ಮಾಡುವುದು ಬೇಜವಾಬ್ದಾರಿಯ ನಡವಳಿಕೆಯಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ತಿಳಿಹೇಳಬೇಕಾದವರೆ ಈ ರೀತಿ ವರ್ತಿಸಿದರೆ ಹೇಗೆ ಎಂದು ಟ್ವೀಟ್​ ಮಾಡಿದ್ದಾರೆ.
ರಾಜ್ಯಕ್ಕೆ ರಾಜ್ಯವೇ ಕೊರೊನಾ ಇಂದ ಕಂಗಾಲಾಗಿದೆ, ಇಂತಹ ಸಂದಿಗ್ಧ ಸಮಯದಲ್ಲಿ ಜನರನ್ನು ಗುಂಪುಗೂಡಿಸಿ ಮೆರವಣಿಗೆ ಮಾಡುವುದು ಬೇಜವಾಬ್ದಾರಿಯ ನಡವಳಿಕೆಯಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ತಿಳಿಹೇಳಬೇಕಾದವರೆ ಈ ರೀತಿ ವರ್ತಿಸಿದರೆ ಹೇಗೆ? 2/2#COVID19— B Z Zameer Ahmed Khan (@BZZameerAhmedK)June 7, 2020
ರಾಜ್ಯಕ್ಕೆ ರಾಜ್ಯವೇ ಕೊರೊನಾ ಇಂದ ಕಂಗಾಲಾಗಿದೆ, ಇಂತಹ ಸಂದಿಗ್ಧ ಸಮಯದಲ್ಲಿ ಜನರನ್ನು ಗುಂಪುಗೂಡಿಸಿ ಮೆರವಣಿಗೆ ಮಾಡುವುದು ಬೇಜವಾಬ್ದಾರಿಯ ನಡವಳಿಕೆಯಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ತಿಳಿಹೇಳಬೇಕಾದವರೆ ಈ ರೀತಿ ವರ್ತಿಸಿದರೆ ಹೇಗೆ? 2/2#COVID19

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − nine =
Remember me
