ಗಿರೀಶ್ ಗರಗ ಬೆಂಗಳೂರು
ಊರಿಗೆ ಹೋದರೆ ಜೀವ ಉಳಿಸಿಕೊಳ್ಳುವಷ್ಟಾದರೂ ಊಟ ಸಿಗುತ್ತೆ, ಬೆಂಗಳೂರಿನಲ್ಲಿದ್ದರೆ ಸಾಯುವುದೇ ಗತಿ… ಇದು ಊರಿನತ್ತ ಹೊರಟ ಕಟ್ಟಡ ಕಾರ್ವಿುಕರ ಮಾತುಗಳು!
ಲಾಕ್​ಡೌನ್​ನಿಂದ ಹೆಚ್ಚು ಸಮಸ್ಯೆಗೊಳಗಾದವರು ಕಾರ್ವಿುಕರು. ಕೆಲಸವಿಲ್ಲ, ಆದಾಯವಿಲ್ಲ, ಉಳಿದುಕೊಳ್ಳಲು ಮನೆಯಿಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ಊಟ ಸಿಗುತ್ತಿಲ್ಲ. ಒಂದೂವರೆ ತಿಂಗಳಿನಿಂದ ಹಲವು ‘ಇಲ್ಲ’ಗಳ ನಡುವೆಯೇ ದಿನ ದೂಡಿದವರು ಈಗ ರಾಜ್ಯ ಸರ್ಕಾರದ ನೆರವಿನೊಂದಿಗೆ ತಂತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಕುಟುಂಬದವರನ್ನು ಸೇರಿಕೊಳ್ಳುವ ಸಮಾಧಾನ ಒಂದೆಡೆಯಾದರೆ, ಅಲ್ಲಿ ಹೋಗಿ ಮಾಡುವುದಾದರೂ ಏನು ಎಂಬುದು ಚಿಂತೆಗೀಡುಮಾಡಿದೆ. ಆದರೂ, ‘ತಮ್ಮೂರೇ ತಮಗೆ ಮೇಲು’ ಎಂಬ ಭಾವನೆ ಪ್ರತಿಯೊಬ್ಬರದ್ದಾಗಿದೆ.
ಇದನ್ನೂ ಓದಿಸಲಹೆಗಳಿಂದಲೇ ಸಂಕಷ್ಟ: ಹಗಲಿರುಳು ಕರೊನಾ ಪರಿಹಾರ, ಪ್ರಚಾರಕ್ಕೆ ಹಲವರ ಪೈಪೋಟಿ
ಊಟವೂ ಇಲ್ಲ, ಕರೆ ತಂದವರು ಪತ್ತೆಯಿಲ್ಲ:
ಪ್ರತಿ ಹೊತ್ತಿಗೂ ದಾನಿಗಳು ನೀಡುವ ಆಹಾರ ಕ್ಕಾಗಿ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಕಟ್ಟಡ ಕಾರ್ವಿುಕರಿಗೆ ಎದುರಾಗಿತ್ತು. ಅಲ್ಲದೆ, ಊರಿಂದ ಕೆಲಸಕ್ಕಾಗಿ ಕರೆತಂದ ಮೇಸ್ತ್ರಿಗಳು ಕಷ್ಟ ಕಾಲದಲ್ಲಿ ಬಳಿಗೆ ಸುಳಿದಿರಲಿಲ್ಲ. ನಿವೇಶನಗಳಲ್ಲಿ ಶೆಡ್ ನಿರ್ವಿುಸಿ ಮಲಗಲು ಅವಕಾಶ ನೀಡಿದ್ದರಾದರೂ ಇತರ ಅಗತ್ಯ ವ್ಯವಸ್ಥೆ ಗಳನ್ನು ಮಾಡಿರಲಿಲ್ಲ. ಪ್ರತಿ ಕಾರ್ವಿುಕರು ತಮ್ಮಲ್ಲಿದ್ದ ಚೀಲದಲ್ಲಿ, ತಮ್ಮ ಜೀವನದಲ್ಲಿ ಈವರೆಗೆ ಸಂಪಾದಿಸಿದ್ದ ಪಾತ್ರೆ, ಬಟ್ಟೆಗಳನ್ನು ತುಂಬಿಕೊಂಡು ಊರಿಗೆ ಹೊರಟ ದೃಶ್ಯ ಕೆಂಪೇಗೌಡ ಕೇಂದ್ರ ಬಸ್ ನಿಲ್ದಾಣದಲ್ಲಿ ಕಂಡುಬಂತು. ಪತಿ ಮತ್ತು ಪತ್ನಿ ಕೇವಲ ಎರಡು ಚೀಲಗಳಲ್ಲಿ ತಮ್ಮಲ್ಲಾ ವಸ್ತುಗಳನ್ನು ತುಂಬಿಕೊಂಡು ಹೊರಟಿದ್ದರು.
ಬೆಂಗಳೂರು ಸಹವಾಸ ಬ್ಯಾಡ್ರಿ: ಬಹುತೇಕ ಕಾರ್ವಿುಕರು ಬೆಂಗಳೂರಿನ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರು! ಊರಲ್ಲಿದ್ದರೆ ಇರುವ ಅಲ್ಪಸ್ವಲ್ಪ ಹೊಲದಲ್ಲಿಯೇ ಕೃಷಿ ಮಾಡೋಣ ಅಥವಾ ತಮ್ಮ ಊರಿಗೆ ಹತ್ತಿರದ ನಗರಗಳಲ್ಲಿ ಕೂಲಿ ಮಾಡಿ ಜೀವನ ಸಾಗಿಸೋಣ ಎಂದು ಹೇಳುತ್ತಿದ್ದರು. ‘ಬೆಂಗಳೂರಿನಲ್ಲಿ ಈವರೆಗೆ ಯಾವುದೋ ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಆದರೆ, ಊರಲ್ಲಿ ಹೊಲವೂ ಇಲ್ಲ, ಕೆಲಸವೂ ಇಲ್ಲ. ಬೆಂಗಳೂರಿನಿಂದ ಬಂದವರೆಂದು ತಮ್ಮನ್ನು ಊರೊಳಗೆ ಬಿಟ್ಟುಕೊಳ್ಳುವುದೇ ಅನುಮಾನ’ ಎಂಬುದು ಕೆಲವರ ಆತಂಕ.
ಒಂದು ವಾರದ ಯೋಜನೆ
ವಲಸೆ ಕಾರ್ವಿುಕರನ್ನು ಊರಿಗೆ ಕಳುಹಿಸುವ ಕುರಿತು ಕೆಎಸ್​ಆರ್​ಟಿಸಿ ಅಧಿಕಾರಿಗಳು ಕಳೆದೊಂದು ವಾರದಿಂದ ಸಿದ್ಧತೆ ನಡೆಸಿದ್ದರು. ಬೆಂಗಳೂರು ಸುತ್ತಮುತ್ತ ವಾಸಿಸಿರುವ ಚಾಲಕರಿಗೆ ಕರ್ತವ್ಯಕ್ಕೆ ಹಾಜರಾಗಲು ಸಿದ್ಧರಾಗಿರುವಂತೆ ಸೂಚಿಸಲಾಗಿತ್ತು. ಅದರಿಂದ ಸರ್ಕಾರ ವಲಸೆ ಕಾರ್ವಿುಕರನ್ನು ಕರೆದುಕೊಂಡು ಹೋಗಲು ಸೂಚಿಸುತ್ತಿದ್ದಂತೆ, ಕೆಎಸ್​ಆರ್​ಟಿಸಿ ಗೊಂದಲವಿಲ್ಲದೆ ವ್ಯವಸ್ಥೆ ಮಾಡಿಕೊಂಡಿತು.
ಇದನ್ನೂ ಓದಿಮೈಸೂರು ಜಿಲ್ಲೆಯನ್ನು ಕಾಡಿದ್ದ ಜುಬಿಲೆಂಟ್ ಕಾರ್ಖಾನೆ ಕಾರ್ವಿುಕರಿಗೆ ಸೋಂಕು ಹರಡಿದ ಪ್ರಕರಣದ ತನಿಖೆ ಏನಾಯ್ತು?
ನಾಲ್ಕು ಶ್ರಮಿಕ್ ರೈಲುಗಳಲ್ಲಿ ಪ್ರಯಾಣ
ರಾಜ್ಯ ಸರ್ಕಾರದ ಸೂಚನೆ ಮೇರೆಗೆ ನೈಋತ್ಯ ರೈಲ್ವೆ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿದ್ದ ಹೊರರಾಜ್ಯದ ಕಾರ್ವಿುಕರಿಗಾಗಿ ಭಾನುವಾರ 4 ‘ಶ್ರಮಿಕ್’ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು. ಮಾಲೂರು ನಿಲ್ದಾಣದಿಂದ ಬಿಹಾರದ ಧನಪುರಕ್ಕೆ ಎರಡು ರೈಲುಗಳು, ಜಾರ್ಖಂಡ್​ನ ಹಟಿಯಾಗೆ ಒಂದು ರೈಲು ಮತ್ತು ಚಿಕ್ಕಬಾಣಾವಾರ ನಿಲ್ದಾಣದಿಂದ ಒಡಿಶಾದ ಭುವನೇಶ್ವರಕ್ಕೆ 1 ರೈಲು ತೆರಳಿತು. ಮೂರು ರೈಲುಗಳಿಂದ ಒಟ್ಟಾರೆ 4,787 ಕಾರ್ವಿುಕರು ಪ್ರಯಾಣಿಸಿದರು. ಕಾರ್ವಿುಕರನ್ನು ರೈಲು ನಿಲ್ದಾಣಕ್ಕೆ ಕರೆತರಲು ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು.
ಬಸ್ ನಿಲ್ದಾಣದಲ್ಲೇ ವಾಸ್ತವ್ಯ
ಊರಿಗೆ ತೆರಳಲು ಶನಿವಾರ ಬಂದಿದ್ದವರಿಗೆ ಬಸ್ ದೊರೆಯದ ಕಾರಣ ರಾತ್ರಿಯಿಡೀ ಬಸ್ ನಿಲ್ದಾಣದಲ್ಲೇ ಉಳಿಯುವಂತಾಗಿತ್ತು. ಭಾನುವಾರ ರಾತ್ರಿಯಾದರೂ ಕಾರ್ವಿುಕರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಹೀಗಾಗಿ ರಾತ್ರಿ 7 ಗಂಟೆವರೆಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಉಳಿದವರನ್ನು ಸೋಮವಾರ ಕಳುಹಿಸಿಕೊಡಲು ಅಧಿಕಾರಿಗಳು ನಿರ್ಧರಿಸಿದರು.
ಇದನ್ನೂ ಓದಿಹಸಿರು ಜಿಲ್ಲೆಗಳಲ್ಲಿ ಬಸ್ ಸಂಚಾರ ಶುರು
ಬೇರೆ ವಿಭಾಗಗಳ 200 ಬಸ್
ಕೆಎಸ್​ಆರ್​ಟಿಸಿ ಮಾತ್ರವಲ್ಲದೆ, ವಾಯವ್ಯ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗಳಿಂದ 200 ಬಸ್​ಗಳನ್ನು ತರಿಸಲಾಗಿತ್ತು. ಕಾರ್ವಿುಕರು ವಾಪಸ್ ಬೆಂಗಳೂರಿಗೆ ಬರದಂತೆ ತಡೆಯಲು ಈ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಸೋಮವಾರ ಮತ್ತೆ 400 ಬಸ್​ಗಳು ವಾಯವ್ಯ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗಳಿಂದ ಬರುತ್ತಿವೆ.
ಹೊರರಾಜ್ಯದ ನಿವಾಸಿಗಳಿಗೆ ಸಂಕಷ್ಟ
ಕೆಎಸ್​ಆರ್​ಟಿಸಿ ರಾಜ್ಯದೊಳಗಿನ ಕಾರ್ವಿುಕರಿಗೆ ಮಾತ್ರ ಬಸ್ ವ್ಯವಸ್ಥೆ ಮಾಡಿತ್ತು. ಆದರೆ, ಹೊರರಾಜ್ಯದ ಸಾವಿರಾರು ಕಾರ್ವಿುಕರು ಬಸ್ ನಿಲ್ದಾಣದ ಅಕ್ಕಪಕ್ಕದ ರಸ್ತೆಗಳಲ್ಲಿ ಕುಳಿತ್ತಿದ್ದ ದೃಶ್ಯ ಕಂಡುಬಂತು. ಅಲ್ಲದೆ, ರೈಲ್ವೆಯಿಂದ ‘ಶ್ರಮಿಕ್’ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದರೂ, ಆ ರೈಲುಗಳು ಮಾಲೂರು ಮತ್ತು ಚಿಕ್ಕಬಾಣಾವಾರದಿಂದ ತೆರಳಿದವು. ಆ ಕುರಿತು ಮಾಹಿತಿಯಿಲ್ಲದ ಕಾರ್ವಿುಕರು ಮೆಜೆಸ್ಟಿಕ್​ನಲ್ಲಿ ರೈಲು ಮತ್ತು ಬಸ್​ಗಳಿಗಾಗಿ ಕಾಯುವಂತಾಗಿತ್ತು.
ಹದಿನೈದು ಸಾವಿರ ಕಾರ್ವಿುಕರ ಪ್ರಯಾಣ
ಭಾನುವಾರ ಒಂದೇ ದಿನ 500 ಬಸ್​ಗಳು ರಾಜ್ಯದ 20ಕ್ಕೂ ಹೆಚ್ಚಿನ ಜಿಲ್ಲೆಗಳತ್ತ ತೆರಳಿವೆ. ಪ್ರತಿ ಬಸ್​ನಲ್ಲಿ 30 ಜನರಂತೆ ಒಟ್ಟು 15 ಸಾವಿರ ಜನರು ಪ್ರಯಾಣಿಸಿದ್ದಾರೆ. ಕಾರ್ವಿುಕರ ಜತೆಗೆ ಇತರರಿಗೂ ಬಸ್​ನಲ್ಲಿ ಸಂಚರಿಸಲು ಅವಕಾಶ ನೀಡಲಾಗಿತ್ತು.
ಇದನ್ನೂ ಓದಿಕಾರ್ವಿುಕರ ವಿಚಾರದಲ್ಲೂ ರಾಜಕೀಯ, ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ತೆರಳಿ ಸಮಸ್ಯೆ ಆಲಿಸಿದ ನಾಯಕರು
ಚಾಲಕರ ಸುರಕ್ಷತೆಗೆ ಆದ್ಯತೆ
ದೂರದ ಜಿಲ್ಲೆಗಳಿಗೆ ಪ್ರಯಾಣಿಸಿದ ಬಸ್​ಗಳಲ್ಲಿ ಇಬ್ಬರು ಚಾಲಕರನ್ನು ಕಳುಹಿಸಿಕೊಡಲಾಯಿತು. ಅದರಿಂದ ನಿರಂತರ ಬಸ್ ಚಾಲನೆಯಿಂದ ಚಾಲಕರಿಗೆ ಸಮಸ್ಯೆಯಾಗದಂತೆ ಮಾಡಲಾಗಿತ್ತು. ಜತೆಗೆ ಚಾಲಕರು ಮಾಸ್ಕ್, ಗ್ಲೌಸ್ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು.
ಬಸ್ ಹೊರಡುವ ಸ್ಥಳ ವಿಂಗಡಣೆ
ಬಸ್ ನಿಲ್ದಾಣದಲ್ಲಿ ಕಾರ್ವಿುಕರ ದಟ್ಟಣೆ ಕಡಿಮೆ ಮಾಡಲು ಸೋಮವಾರದಿಂದ ಕೆಎಸ್​ಆರ್​ಟಿಸಿ ಬಸ್ ಹೊರಡುವ ಸ್ಥಳ ಗಳನ್ನು ವಿಂಗಡಿಸಲಾಗಿದೆ. ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ ಮತ್ತು ಯಾದಗಿರಿ ಕಡೆಗೆ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್​ಗಳು ಹೊರಡಲಿವೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮಂಗಳೂರು, ಮಡಿಕೇರಿ, ಉಡುಪಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಿಂದ ಬಸ್​ಗಳು ತೆರಳಲಿವೆ.
ಒಂದು ಬಸ್​ಗೆ ಮೂವತ್ತು ಜನ
ಪ್ರತಿ ಬಸ್​ನಲ್ಲಿ 30 ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಪ್ರತಿಯೊಬ್ಬರಿಗೂ ಥರ್ಮಲ್ಸ್ಕ್ರೀನಿಂಗ್ ಮಾಡುತ್ತಿದ್ದರು. ಜತೆಗೆ, ಪ್ರತಿ ಪ್ರಯಾಣಿಕರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಪಡೆದುಪ್ರಯಾಣಕ್ಕೆ ಅನುವು ಮಾಡಿಕೊಡಲಾಯಿತು. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು.
ಇದನ್ನೂ ಓದಿರಾಜ್ಯದಲ್ಲಿ ಎಂಟು ಜನರಿಂದಲೇ ಹರಡಿದೆ ಶೇ.40 ಕರೊನಾ: ಪ್ರತಿಯೊಬ್ಬರ ಎಚ್ಚರಿಕೆಯೂ ಅವಶ್ಯಕ
ಇದನ್ನೂ ಓದಿತಂದೆಯ ಅಂತ್ಯಸಂಸ್ಕಾರಕ್ಕೆ ಹೋಗಲಾಗದೆ ಕಣ್ಣೀರಿಟ್ಟ ರಾಜಕುಮಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eleven =
Remember me
