ದಾವಣಗೆರೆ:ಕೋವಿಡ್​ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ ಅಧಿಕಾರಿಗಳು ದಂಡ ವಿಧಿಸುವುದಾಗಿ ಹೇಳಿದಾಗ, ಅದಕ್ಕೆ ಹೆದರಿದ ವರ್ತಕ ಅಂಗಡಿ ಬಾಗಿಲು ಮುಚ್ಚಲು ಮುಂದಾಗಿರುವ ಪ್ರಕರಣ ಕಂಡುಬಂದಿದೆ.
ಕೋವಿಡ್‌ ನಿಯಮ ಪಾಲನೆಗೆ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಗರದಲ್ಲಿ ಪರಿಶೀಲನೆ ನಡೆಸಿದ್ದು, ಈ ವೇಳೆ ಕರೊನಾ ಮಾರ್ಗಸೂಚಿ ಪಾಲಿಸದ ವರ್ತಕರ ಮೇಲೆ ಗರಂ ಆಗಿದ್ದಾರೆ. ಹಾಗೆಯೇ ಮಳಿಗೆಯೊಂದರ ಮಾಲೀಕನ ಮೇಲೂ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದಾಗ, ಆತ ದಂಡಕ್ಕೆ ಹೆದರಿ ಅಂಗಡಿ ಬಾಗಿಲು ಮುಚ್ಚಲು ಮುಂದಾಗಿದ್ದಾನೆ.
ದಾವಣಗೆರೆಯ ಕಾಳಿಕಾದೇವಿ ರಸ್ತೆಯ ಜವಳಿ ಅಂಗಡಿಯೊಂದರ ಮಾಲೀಕ ದಂಡ ಕಟ್ಟುವ ಬದಲು ಹೀಗೆ ಅಂಗಡಿ ಶಟರ್ ಎಳೆಸಲು ಮುಂದಾಗಿದ್ದಕ್ಕೆ ಸಿಟ್ಟಾದ ಜಿಲ್ಲಾಧಿಕಾರಿ ಅಂಗಡಿ ಮಾಲೀಕರ ಮೇಲೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ. ಅಂಗಡಿಯಲ್ಲಿ ಜನರನ್ನು ನಿಯಂತ್ರಿಸಲು ಆಗುತ್ತಿಲ್ಲ ಎಂದು ಹೀಗೆ ಮಾಡಿದ್ದಾಗಿ ಮಾಲೀಕ ಹೇಳಿದ್ದಾನೆ.
ಇದನ್ನೂ ಓದಿ:ಕೋವಿಡ್​ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್​ ಸಿಗುತ್ತಿಲ್ಲ ಎಂಬ ಚಿಂತೆಯೇ?; ಇಲ್ಲಿದೆ ನೋಡಿ ರಿಯಲ್ ಟೈಮ್ ಮಾಹಿತಿ
ಆಗ ಮಧ್ಯಪ್ರವೇಶಿಸಿದ ಎಸ್​​ಪಿ ಹನುಮಂತರಾಯ, ಕೋವಿಡ್​ ನಿಯಮಗಳನ್ನು ಪಾಲಿಸಲೇಬೇಕು. ನಿಮಗೆ ಆಗಲಿಲ್ಲ ಎಂದರೆ ನಾವು ಅದಕ್ಕೆ ಬೇಕಾದ ಸಹಕಾರ ನೀಡುತ್ತೇವೆ ಎಂದು ಸಮಾಧಾನ ಪಡಿಸಿದರು. ಕೋವಿಡ್ ನಿಯಮಗಳ ಉಲ್ಲಂಘನೆ ಆಗದಂತೆ ವ್ಯಾಪಾರ ನಡೆಸಿ. ನಿಯಮ ಪಾಲಿಸದಿದ್ದರೆ ದಂಡ ಕಟ್ಟುವುದು ಅನಿವಾರ್ಯ ಎಂದು ಸೂಚನೆ ನೀಡಿ ತೆರಳಿದರು.
ಅಮ್ಮ ಸಾಯ್ತಿದಾರೆ ಎಂದು ಬೇಡ್ಕೊಂಡ್ರೂ ಒಂದ್ ಹಾಸಿಗೆ ಅರೇಂಜ್​ ಮಾಡೋಕ್​ ಆಗ್ತಿಲ್ಲ; ಪ್ಲೀಸ್​.. ಹೊರಗೆ ಹೋಗೋ ಮುಂಚೆ 100 ಸಲ ಯೋಚ್ನೆ ಮಾಡಿ..

ಸಿನಿಮಾ ಥಿಯೇಟರ್​, ಬಾರ್​ ಎಲ್ಲ ಬಂದ್​! ಕರ್ನಾಟಕದಲ್ಲಿ ಜಾರಿಯಾಯ್ತಾ ಟಫ್​ ರೂಲ್ಸ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
