| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ದೇಶಕ್ಕೆ ಬರುವ ವಿದೇಶಿಗರ ಮೇಲಿನ ಅಪರಾಧಕ್ಕಿಂತ ಅವರು ಎಸಗುವ ದುಷ್ಕೃತ್ಯಗಳೇ ಹೆಚ್ಚಾಗುತ್ತಿವೆ. 2019ರಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ ಸೇರಿದಂತೆ 409 ಅಪರಾಧಗಳಲ್ಲಿ ವಿದೇಶಿಗರು ಸಂತ್ರಸ್ತರು. ವಿದೇಶಿಗರು ವಿರುದ್ಧ 2,257 ಕೇಸ್ ದಾಖಲಾಗಿವೆ. ಅನ್ಯದೇಶದ ಪ್ರಜೆಗಳು ಇಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡುಗುತ್ತಿರುವುದು ಅಧಿಕ ಆಗುತ್ತಿರುವುದು ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗ(ಎನ್​ಸಿಆರ್​ಬಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಶಿಕ್ಷಣ, ಪ್ರವಾಸ, ವ್ಯಾಪಾರ, ಆರೋಗ್ಯ ಚಿಕಿತ್ಸೆ ಪಡೆಯಲು ಇನ್ನಿತ್ತರ ಕಾರಣಕ್ಕೆ ಬರುವ ವಿದೇಶಿಗರು ಮಾದಕ ದ್ರವ್ಯ ಮಾಫಿಯಾ, ಪಾಸ್​ಪೋರ್ಟ್ ನಿಯಮ ಉಲ್ಲಂಘನೆ, ಕಳ್ಳತನ, ಕೊಲೆ, ವಂಚನೆ, ನಕಲಿ ದಾಖಲೆ ಸೃಷ್ಟಿ ಸೇರಿದಂತೆ ನಾನಾ ಅಪರಾಧಗಳಲ್ಲಿ ತೊಡಗಿದ್ದ 41 ದೇಶಗಳ ಪ್ರಜೆಗಳ ವಿರುದ್ಧ ಎಫ್​ಐಆರ್ ದಾಖಲಾಗಿವೆ. ಇದರಲ್ಲಿ ಅಕ್ರಮ ವಲಸಿಗರಾದ ಬಾಂಗ್ಲಾ ಪ್ರಜೆಗಳ ವಿರುದ್ಧ ಅತೀ ಹೆಚ್ಚು(2232) ಪ್ರಕರಣಗಳು ದಾಖಲಾಗಿವೆ.
ಇದಾದ ಮೇಲೆ ನೈಜೀರಿಯಾ ಪ್ರಜೆಗಳ ವಿರುದ್ಧ ಎನ್​ಡಿಪಿಎಸ್ 210, ವಿದೇಶಿ ಕಾಯ್ದೆ ಉಲ್ಲಂಘನೆ 113 ಮತ್ತು ವಂಚನೆ 123 ಕೇಸ್ ದಾಖಲಾಗಿವೆ. ಆಫ್ರಿಕನ್ ಪ್ರಜೆಗಳ ವಿರುದ್ಧವೂ 175 ಎಫ್​ಐಆರ್ ದಾಖಲಾಗಿವೆ. ನಂತರದ ಸ್ಥಾನ ನೇಪಾಳ(316) ಮತ್ತು ಮಯನ್ಮಾರ್ (216) ಪ್ರಜೆಗಳ ವಿರುದ್ಧ ಪ್ರಕರಣ ದಾಖಲಾಗಿವೆ. ಪಾಸ್​ಪೋರ್ಟ್ ಮತ್ತು ವಿದೇಶಿ ಕಾಯ್ದೆ ಉಲ್ಲಂಘನೆಯೇ ಹೆಚ್ಚಾಗುತ್ತಿದ್ದು, ನಂತರದಲ್ಲಿ ಎನ್​ಡಿಪಿಎಸ್, ವಂಚನೆ, ಕಳ್ಳತನ ಮತ್ತು ಕೊಲೆ ಕೃತ್ಯಗಳಲ್ಲಿ ತೊಡಗಿದ್ದಾರೆ.
ವಿದೇಶಿ ಪ್ರವಾಸಿಗರಿಗೆ ಅಭದ್ರತೆ:ವಿದೇಶಿ ಪ್ರವಾಸಿಗರ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿವೆ. 2019ರಲ್ಲಿ ವಿದೇಶಿಗರು ನೀಡಿರುವ 409 ದೂರಗಳಲ್ಲಿ 142 ಅತ್ಯಾಚಾರ ಪ್ರಕರಣಗಳೇ ಆಗಿವೆ. ಈ ಪೈಕಿ 115 ಪ್ರವಾಸಿಗಳೇ ಆಗಿದ್ದಾರೆ. ಮಾನವ ಕಳ್ಳ ಸಾಗಾಣೆ ದಂಧೆಯಲ್ಲಿ ಬಾಂಗ್ಲಾ ಪ್ರಜೆಗಳು ಹೆಚ್ಚಾಗಿ ಸಿಲುಕಿದ್ದಾರೆ. ಅಮೆರಿಕಾ, ಏಷಿಯನ್ ದೇಶಗಳ ಪ್ರಜೆಗಳು ಕಳ್ಳತನಕ್ಕೆ ಒಳಗಾಗುತ್ತಿದ್ದಾರೆ. ವಿದೇಶಿಗರ ಮೇಲೆ ಅಪರಾಧ ಎಸಗಿದವರ ಪೈಕಿ 23 ಅಪರಾಧಿಗಳಿಗೆ ಶಿಕ್ಷೆಯಾಗಿದೆ. 44 ಪ್ರಕರಣಗಳು ವಜಾಗೊಂಡಿವೆ.
ಕೋರ್ಟ್​ಲಿ್ಲ ಪಾಸ್​ಪೋರ್ಟ್ ಕಾಯ್ದೆ ಮತ್ತು ವಿದೇಶಿ ಕಾಯ್ದೆಯಡಿ ವಿದೇಶಿಗರಿಗೆ ಹೆಚ್ಚು ಶಿಕ್ಷೆ ಆಗುತ್ತಿದೆ. 1104 ಪ್ರಕರಣಗಳಲ್ಲಿ ವಿದೇಶಿ ಅಪರಾಧಿಗಳಿಗೆ ಜೈಲು ಸೇರಿದ್ದು, 775 ವಿದೇಶಿ ಕಾಯ್ದೆ ಮತ್ತು 136 ಪಾಸ್​ಪೋರ್ಟ್ ನಿಯಮ ಉಲ್ಲಂಘನೆ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ. 185 ಪ್ರಕರಣಗಳು ವಜಾಗೊಂಡಿವೆ.
ಪಶ್ಚಿಮ ಬಂಗಾಳದಲ್ಲಿಯೇ ಹೆಚ್ಚು ವಿದೇಶಿಗರ ವಿರುದ್ಧ ಎಫ್​ಐಆರ್(744) ದಾಖಲಾಗಿವೆ. ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ಒಳನುಸುಳಿದ ಕಾರಣಕ್ಕೆ ವಿದೇಶಿ ಕಾಯ್ದೆ ಉಲ್ಲಂಘನೆಯಡಿ ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ ವಿದೇಶಿಗರಿಗೆ ಸುರಕ್ಷತೆ ಇಲ್ಲದಂತಾಗಿದೆ. ಅತ್ಯಾಚಾರ, ಕೊಲೆ, ಕಳ್ಳತನ, ಸುಲಿಗೆ ಅಂತಹ ಅಪರಾಧ ಪ್ರಕರಣಗಳಲ್ಲಿ ವಿದೇಶಿಗರು ಹೆಚ್ಚು ಸಿಲುಕಿಕೊಳ್ಳುತ್ತಿದ್ದಾರೆ.
ರಾಜ್ಯ 2017- 2018- 2019
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
