ಬೆಂಗಳೂರು:ಕರೊನಾ ಸೋಂಕು ಪೀಡಿತರ ಸಂಖ್ಯೆ ಕರ್ನಾಟಕದಲ್ಲಿಯೂ ದಿನೇ ದಿನೇ ಏರುತ್ತಿದೆ. ಈವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಗರ್ಭಿಣಿಯೊಬ್ಬರು ಸೇರಿದಂತೆ ಒಟ್ಟು 128 ಮಂದಿ ಸೋಂಕು ಪೀಡಿತರಾಗಿದ್ದಾರೆ. ಆದರೆ ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗುತ್ತಿಲ್ಲ ಎನ್ನುವುದು ಮಾತ್ರ ಸಮಾಧಾನದ ಸಂಗತಿ. ಈವರೆಗೆ ಮೂವರು ಮೃತಪಟ್ಟಿದ್ದು, 11 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 128 ಮಂದಿಯ ಪೈಕಿ ಏಳು ಮಂದಿ ಕೇರಳಕ್ಕೆ ಪ್ರವಾಸ ಹೊರಟಿದ್ದು, ಕರ್ನಾಟಕದ ವಿಮಾನ ನಿಲ್ದಾಣದಲ್ಲಿ ಇಳಿದುಕೊಂಡಿದ್ದರು. ಅವರಿಗೆ ಸೋಂಕು ಪತ್ತೆಯಾದ ಕಾರಣ, ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ ಇಂದು ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ. ತುಮಕೂರಿನಲ್ಲಿ 4, ಕಲ್ಬುರ್ಗಿಯಲ್ಲಿ 7, ಬಳ್ಳಾರಿಯಲ್ಲಿ 9, ಕೋಲಾರದಲ್ಲಿ 5, ಮೈಸೂರಿನಲ್ಲಿ 2, ಧಾರವಾಡದಲ್ಲಿ 11, ಗದಗದಲ್ಲಿ 3, ಶಿವಮೊಗ್ಗದಲ್ಲಿ 11, ದಾವಣಗೆರೆಯಲ್ಲಿ 2 ಹೊಸ ಸೋಂಕಿತರು ದಾಖಲಾಗಿದ್ದಾರೆ.
ಮಾರ್ಚ್‌ 31ಕ್ಕೆ ನಿವೃತ್ತಿಯಾಗಬೇಕಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಕೀಯ, ಅರೆವೈದ್ಯಕೀಯ ಮತ್ತು ಕ್ಲಿನಿಕ್‌, ನಾನ್‌ ಕ್ಲಿನಿಕಲ್‌ ಸಿಬ್ಬಂದಿಯ ಸೇವೆಯನ್ನು ಕರೊನಾ ವೈರಸ್‌ ಸೋಂಕಿತರಿಗೆ ತುರ್ತು ಚಿಕಿತ್ಸೆ ನೀಡಬೇಕಿರುವ ಹಿನ್ನೆಲೆಯಲ್ಲಿ ಮೂರು ತಿಂಗಳವರೆಗೆ (ಜೂನ್‌ 30) ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಅಗತ್ಯ ವಸ್ತುಗಳ ಸಾಗಾಟಕ್ಕೆ ಮತ್ತು ಅವಶ್ಯಕ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಅಗತ್ಯವಿರುವವರಿಗೆ ರಸ್ತೆಯಲ್ಲಿ ಸಂಚರಿಸಲು ಕರ್ನಾಟಕ ಸ್ಟೇಟ್‌ ಪೊಲೀಸ್‌ ಕ್ಲಿಯರ್‌ ಪಾಸ್‌ ಪಡೆಯುವುದು ಕಡ್ಡಾಯವಾಗಿದೆ. ಈ ಪಾಸ್‌ಗಳನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳಬಹುದು.ವೆಬ್‌ಸೈಟ್‌: https://kspclearpass.mygate.com/signup
ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ರಾಜ್ಯ ಆರೋಗ್ಯ ಇಲಾಖೆಯ ಉಚಿತ ಆರೋಗ್ಯ ಸಹಾಯವಾಣಿ 080-29711171 ಕ್ಕೆ ಕರೆ ಮಾಡುವಂತೆ ಸರ್ಕಾರ ತಿಳಿಸಿದೆ.
ಕರೊನಾ ಸೋಂಕಿತ ಪ್ರದೇಶಗಳಿಂದ ಬಂದ ವ್ಯಕ್ತಿಗಳು ಅಥವಾ ಸೋಂಕಿತರನ್ನು ಸಂಪರ್ಕಿಸಿದವರು ಕಡ್ಡಾಯವಾಗಿ ಮನೆಯಲ್ಲಿಯೇ 14 ದಿನಗಳ ಕಾಲ ಇರುವಂತೆ ಹಾಗೂ ಏನಾದರೂ ಆರೋಗ್ಯದಲ್ಲಿ ಏರುಪೇರಾದರೆ 104ಕ್ಕೆ ಕರೆ ಮಾಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − fourteen =
Remember me
