ಕುಂದಾಪುರ:ತಡರಾತ್ರಿಯಲ್ಲಿ ನಾಯಿಯೊಂದಕ್ಕೆ ಹೆದರಿ ಓಡಿ ಹೋದ ಚಿರತೆ ತೆರೆದ ಬಾವಿಯೊಳಕ್ಕೆ ಬಿದ್ದು ಪರದಾಡಿದ ಪ್ರಸಂಗವೊಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರ ತಾಲೂಕು ಹೆಮ್ಮಾಡಿಯ ಕಟ್ ಬೆಲ್ತೂರು ಗ್ರಾಮದ ಸುಳ್ಸೆ ಬಳಿ ಶುಕ್ರವಾರ ತಡರಾತ್ರಿ ಈ ಪ್ರಸಂಗ ನಡೆದಿದೆ. ನಾಯಿಯೊಂದು ಓಡಿಸಿಕೊಂಡು ಬಂದಿದ್ದರಿಂದ ಹೆದರಿ ಓಡಿ ಹೋದ ಚಿರತೆ ತೋಟದಲ್ಲಿನ ಆವರಣವಿಲ್ಲದ ಬಾವಿಗೆ ಬಿದ್ದಿದೆ. ಹೀಗೆ ಬಿದ್ದ ಎರಡು ವರ್ಷದ ಗಂಡು ಚಿರತೆಯನ್ನು ಕಾರ್ಯಾಚರಣೆ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ.
ಇದನ್ನೂ ಓದಿ:ಗೋವಿಂದಬಾಬು ಪೂಜಾರಿ ಮೇಲೇ ಆರೋಪ ಇರುವುದರಿಂದ ಅವರ ದೂರಿನ ಮೇಲೆ ಅನುಮಾನ ಇದೆ: ವಕೀಲ ಅರುಣ್​ ಶ್ಯಾಂ
ಸುಳ್ಸೆ ನಿವಾಸಿ ಬಾಬು ಪೂಜಾರಿ ಎಂಬವರ ಮನೆ ಸಮೀಪದ ತೋಟದಲ್ಲಿನ ಬಾವಿಗೆ ಚಿರತೆ ಬಿದ್ದಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದ್ದು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು ಬಾವಿಗೆ ಬೋನು ಇಳಿಸಿ ಚಿರತೆ ಬೋನಿನೊಳಕ್ಕೆ ಹೋದಾಗ ಮೇಲಕ್ಕೆತ್ತಿದ್ದಾರೆ. ಎರಡು ವರ್ಷ ಪ್ರಾಯದ ಗಂಡು ಚಿರತೆಯನ್ನು ರಕ್ಷಣೆ ಮಾಡಲಾಗಿದ್ದು, ಅದು ಆರೋಗ್ಯವಾಗಿದೆ. ಬಾವಿಯಲ್ಲಿ ಹೆಚ್ಚು ನೀರಿಲ್ಲದೆ ಇದ್ದಿದ್ದರಿಂದ ಚಿರತೆ ಜೀವ ಉಳಿದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಚೈತ್ರಾ ಕುಂದಾಪುರ ಪ್ರಕರಣಕ್ಕೂ ಬಿಜೆಪಿಗೂ ಹೇಗೆ ಸಂಬಂಧ?: ಇಲ್ಲಿದೆ ಕಾಂಗ್ರೆಸ್​ ವಿವರಣೆ
ಕುಂದಾಪುರ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ ಎಂ. ನಾಯಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಪರ್ಡ್ ಲೊಬೋ ಮಾರ್ಗದರ್ಶನದಲ್ಲಿ ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ. ಕಿರಣ್ ಬಾಬು, ಉಪ ವಲಯ ಅರಣ್ಯಾಧಿಕಾರಿಗಳಾದ ಉದಯ್, ಶರತ್, ಗುರುರಾಜ್, ದಿಲೀಪ್, ಸುನೀಲ್, ಗೀತಾ, ಅರಣ್ಯ ಇಲಾಖೆ ಸಿಬ್ಬಂದಿ ದೀಪಶ್ರೀ, ಮಾಲತಿ, ಉದಯ, ಬಸವರಾಜ್, ಚಂದ್ರಾವತಿ, ರಾಘವೇಂದ್ರ ಈ ಕಾರ್ಯಾಚರಣೆ ನಡೆಸಿದ್ದರು.
ಕುಂದಾಪುರದಲ್ಲಿ ನಾಯಿಗೆ ಹೆದರಿ ಓಡಿ ಹೋಗಿ ಬಾವಿಗೆ ಬಿದ್ದ ಚಿರತೆ!
ವಿವರಗಳಿಗೆhttps://t.co/YaFZZchMRhನೋಡಿ..👇👇👇👇👇#Dog#Leopard#Kundapura#Wellhttps://t.co/2h0OBMQl1rpic.twitter.com/dftzknn6Z6
— Vijayavani (@VVani4U)September 16, 2023

ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eight =
Remember me
