ಬಳ್ಳಾರಿ:ಇದು ಎರಡು ಪ್ರತ್ಯೇಕ ಪ್ರಕರಣವಾದರೂ ಎರಡೂ ಪ್ರಕರಣಕ್ಕೆ ಸಾಮ್ಯತೆ ಇದೆ. ಆತ್ಮಹತ್ಯೆ ಮಾಡಿಕೊಂಡವರಿಬ್ಬರೂ ಪುರುಷರೇ, ಇಬ್ಬರೂ ನೇಣು ಹಾಕಿಕೊಂಡಿದ್ದರು. ಹಾಗೆಯೇ ಇಬ್ಬರ ಆತ್ಮಹತ್ಯೆಗೂ ಕಾರಣ ಒಂದೇ.. ಅದು ಹೆಂಡತಿಯೊಂದಿಗಿನ ಜಗಳ. ಹೆಂಡತಿಯೊಂದಿಗೆ ಜಗಳ ಮಾಡಿಕೊಂಡ ಇಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಎರಡು ಪ್ರತ್ಯೇಕ ಪ್ರಕರಣಗಳು ನಗರದ ಗಾಂಧಿನಗರ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿವೆ.
ನಗರದ ಹಳೇ ಬಸ್ ನಿಲ್ದಾಣದ ಸಮೀಪದಲ್ಲಿ ಲಾಡ್ಜ್​ವೊಂದರಲ್ಲಿ ವಾಸವಾಗಿದ್ದ ರಾಜಸ್ಥಾನ ಮೂಲದ ಅತುಲ್ ಕುಮಾರ್ (24) ಪತ್ನಿಯೊಂದಿಗೆ ಶುಕ್ರವಾರ ಫೋನ್​ನಲ್ಲಿ ಜಗಳ ಮಾಡಿಕೊಂಡು ಬೇಸರದಿಂದ ಅಂಗಿಯಿಂದ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಇವರು ನಗರದಲ್ಲಿ ವೆಲ್ಡರ್ ಕೆಲಸ ಮಾಡಿಕೊಂಡಿದ್ದರು. ಹಾಸನದಲ್ಲಿರುವ ಮೃತನ ಸಂಬಂಧಿಕರು ಶನಿವಾರ ಬಂದು ನೋಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ಪಟೇಲ್ ನಗರದ ದುರ್ಗಾ ಕಾಲನಿ ನಿವಾಸಿ ವಸಂತ್ ಕುಮಾರ್ (28) ನೇಣಿಗೆ ಶರಣಾಗಿರುವ ಮತ್ತೊಬ್ಬ ದುರ್ದೈವಿ. ಇವರು ನಗರದಲ್ಲಿ ಕಾರ್ ಶೋರೂಂ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ತುಮಕೂರಿನ ಯುವತಿಯನ್ನು ಪ್ರೇಮ ವಿವಾಹವಾಗಿದ್ದರು. ಕಳೆದ ಮಾರ್ಚ್​ನಲ್ಲಿ ಕೋವಿಡ್ ಬಂದ ನಂತರ ಇವರ ಪತ್ನಿ ತವರು ಮನೆಗೆ ಹೋಗಿ ವಾಪಸ್​ ಬರದೆ ಅಲ್ಲೇ ಉಳಿದುಕೊಂಡಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿರಲು ಇವರನ್ನು ಕರೆದಿದ್ದರು. ಈ ವಿಷಯದಲ್ಲಿ ಜಗಳವಾಗಿ ಬೇಸರಗೊಂಡಿದ್ದ ಇವರು ನೇಣು ಹಾಕಿಕೊಂಡಿದ್ದರು.
ಕಬ್ಜ ಶೂಟಿಂಗ್​ ವೇಳೆ ನಟ ಉಪೇಂದ್ರ ತಲೆಗೆ ಬಡಿಯಿತು ಸಹ ನಟ ಬೀಸಿದ ರಾಡ್..!

ಇಲ್ಲೆಲ್ಲ ಈ ಲಸಿಕೆ ಕೊಡುವುದು ನಿಲ್ಲಿಸಿದ್ದಾರಂತೆ!; ರಕ್ತಹೆಪ್ಪುಗಟ್ಟುತ್ತದೆ ಎಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + fifteen =
Remember me
