ಬೆಂಗಳೂರು:ಗ್ರಾಹಕರೇ, ಅಲ್ಲಿ-ಇಲ್ಲಿ ಸಿಗುವ ಕಸ್ಟಮರ್​ ಕೇರ್​ ನಂಬರ್​ಗೆ ಕರೆ ಮಾಡುವ ಮುನ್ನ ಜಾಗ್ರತೆ. ಆ ಕರೆಯಿಂದಲೇ ನಿಮ್ಮ ಜೇಬಿಗೆ ಬ್ಲೇಡ್​ ಬೀಳುವ ಸಾಧ್ಯತೆ ಹೆಚ್ಚು.
ಗೂಗಲ್ ಪೇ ಕಸ್ಟಮರ್ ಸೋಗಿನಲ್ಲಿ ಸಕ್ರಿಯವಾಗಿರುವ ಸೈಬರ್ ವಂಚಕರು ವ್ಯಕ್ತಿಯೊಬ್ಬನ ಖಾತೆಯಿಂದ 19 ಸಾವಿರ ರೂಪಾಯಿ ದೋಚಿದ್ದಾರೆ. ಖಾಸಗಿ ಕಂಪನಿಯೊಂದರ ಉದ್ಯೋಗಿ ನಂದಕಿಶೋರ್ ಹಣ ಕಳೆದುಕೊಂಡವರು. ಏರ್​ಟೆಲ್ ಬಿಲ್ ಪೇ ಮಾಡುವ ಸಲುವಾಗಿ ಗೂಗಲ್ ಪೇ ಮೂಲಕ 1,176 ರೂ. ಕಟ್ಟಿದ್ದರೂ ಬಿಲ್ ಪೇ ಆಗಿರಲಿಲ್ಲ. ಈ ಬಗ್ಗೆ ವೆರಿಫೈ ಮಾಡಲೆಂದು ನಂದಕಿಶೋರ್​, ಕಸ್ಟಮರ್ ಕೇರ್ ನಂಬರ್​ ಅನ್ನು ಗೂಗಲ್​ನಲ್ಲಿ ಸರ್ಚ್ ಮಾಡಿದ್ದಾರೆ. ಆ ವೇಳೆ ಗೂಗಲ್​ ಪೇ ಕಸ್ಟಮರ್​ ಸೋಗಿನಲ್ಲಿದ್ದ ಸೈಬರ್​ ವಂಚಕರ ನಂಬರ್​ ಸಿಕ್ಕಿದೆ.
ಇದನ್ನೂ ಓದಿರಿಪ್ರಥಮ ಪಿಯುಸಿ ಪರೀಕ್ಷೆ ರದ್ದು, ಎಲ್ಲ ವಿದ್ಯಾರ್ಥಿಗಳು ಪಾಸ್!
ಗೂಗಲ್​ನಲ್ಲಿ ಸಿಕ್ಕ ನಂಬರ್​ಗೆ ಕರೆ ಮಾಡಿದ ನಂದಕಿಶೋರ್, ಬಿಲ್​ ಪಾವತಿ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಅಕೌಂಟ್​ಗೆ ಲಿಂಕ್ ಒಂದನ್ನ ಸೇರಿಸುವಂತೆ ಕಸ್ಟಮರ್​ ಸೋಗಿನಲ್ಲಿ ಮಾತನಾಡುತ್ತಿದ್ದವರು ಹೇಳಿದ್ದಾರೆ. ಆ ಸೂಚನೆಯಂತೆ ಲಿಂಕ್ ಹಾಕಿದ ಕೂಡಲೇ ನಂದಕಿಶೋರ್ ಖಾತೆಯಿಂದ 19 ಸಾವಿರ ಹಣ ಡ್ರಾ ಆಗಿದೆ. ಕೂಡಲೇ ಆ ನಂಬರ್​ಗೆ ವಾಪಸ್​ ಕರೆ ಮಾಡಿದ್ದು, ಸ್ವಿಚ್ಡ್ ಆಫ್ ಎಂದು ಬಂದಿದೆ.
ಈ ಬಗ್ಗೆ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಂದಕಿಶೋರ್ ದೂರು ನೀಡಿದ್ದಾರೆ.
ಐವರ ಕೊಲೆಗೆ ಕಾರಣವಾಯ್ತು ಒಂದು ಲವ್​ ಸ್ಟೋರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − twelve =
Remember me
