ಬೆಂಗಳೂರು:ನೆರೆಹೊರೆ ರಾಜ್ಯಗಳಿಗೆಲ್ಲ ಸುಲಭವಾಗಿ ಅಧ್ಯಕ್ಷ- ಪದಾಧಿಕಾರಿಗಳನ್ನು ನೇಮಕ ಮಾಡಿದ್ದ ಅಖಿಲ ಭಾರತ ಕಾಂಗ್ರೆಸ್​ಗೆ ಕೆಪಿಸಿಸಿ ನೇಮಕ ಮಾತ್ರ ಕಗ್ಗಂಟಾಗಿಯೇ ಉಳಿದಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಭಾನುವಾರವೂ ದೆಹಲಿಯಲ್ಲಿ ಉಳಿದಿದ್ದು, ಒತ್ತಡ ತಂತ್ರ ಮುಂದುವರಿಸಿದ್ದಾರೆ.
ಅವರಿಗೇ ಸ್ಥಾನ ಕಾಯಂ ಎಂಬ ಪರೋಕ್ಷ ಸಂದೇಶ ಸಿಕ್ಕರೂ, ನಾಲ್ವರು ಕಾರ್ಯಾಧ್ಯಕ್ಷರ ನೇಮಕ ಸಂಬಂಧ ಬಿಕ್ಕಟ್ಟು ಬಗೆಹರಿದಿಲ್ಲ. ಪ್ರತಿಪಕ್ಷ- ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕಗೊಳಿಸುವ ವಿಚಾರದಲ್ಲೂ ಪಕ್ಷಕ್ಕೆ ತೀರ್ಮಾನ ಸಾಧ್ಯವಾಗಿಲ್ಲ. ಇನ್ನು 3-4 ದಿನಗಳೊಳಗೆ ನಿರ್ಧಾರ ಪ್ರಕಟವಾಗದೆ ಇದ್ದಲ್ಲಿ ದೆಹಲಿ ಚುನಾವಣೆ ಮುಗಿಯುವವರೆಗೂ, ಅಂದರೆ ಫೆ.9ರವರೆಗೂ ಇತ್ಯರ್ಥವಾಗಲ್ಲ ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಉತ್ತರ ಕರ್ನಾಟಕ ಮತ್ತು ವೀರಶೈವ ಲಿಂಗಾಯತರ ಮನವೊಲಿಸಲು ಪಕ್ಷಕ್ಕೆ ಸಿದ್ಧಸೂತ್ರ ಸಿಗುತ್ತಿಲ್ಲ ಎನ್ನಲಾಗಿದೆ. ಮಾಜಿ ಸಚಿವ ಎಂ.ಬಿ.ಪಾಟೀಲ್ ಕೂಡ ಇದೇ ವಿಷಯ ಇಟ್ಟುಕೊಂಡು ಹೈಕಮಾಂಡ್ ನೆನಪಿಸಿದ್ದಾರೆ. 2015-16ರಲ್ಲಿ ಪಕ್ಷದ ಜವಾಬ್ದಾರಿ ಕೊಡುವುದಾಗಿ ಹೇಳಿದ್ದಿರಿ, ಈಗ ಅವಕಾಶ ಕೊಡಿ ಎಂದೂ ಕೋರಿದ್ದಾರೆಂದು ತಿಳಿದುಬಂದಿದೆ.
ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದರೆ ಒಕ್ಕಲಿಗ ಸಮುದಾಯ ಹಾಗೂ ಹಳೇ ಮೈಸೂರು ಪ್ರಾಂತ್ಯ ಪ್ರತಿನಿಧಿಸಿದಂತಾಗುತ್ತದೆ, ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಲು ಈಶ್ವರ್ ಖಂಡ್ರೆ ಮುಂದುವರಿಸುವುದು ಮತ್ತು ಸತೀಶ್ ಜಾರಕಿಹೊಳಿ ಅವರನ್ನು ಮತ್ತೊಬ್ಬ ಕಾರ್ಯಾಧ್ಯಕ್ಷರನ್ನಾಗಿ ಮಾಡಲು ಪಕ್ಷ ಹೆಚ್ಚು ಆಸಕ್ತಿ ವಹಿಸಿದೆ. ಆದರೆ, ಈ ಸೂತ್ರ ಅಷ್ಟೊಂದು ಪರಿಣಾಮಕಾರಿಯಾಗಿ ಕಾಣಿಸಿಲ್ಲ ಎನ್ನಲಾಗಿದೆ.
2018ರ ವಿಧಾನಸಭಾ ಚುನಾವಣೆ ಬಳಿಕ ಪಕ್ಷದಿಂದ ದೂರ ಸರಿದಿರುವ ಉತ್ತರ ಕರ್ನಾಟಕ ಮತ್ತು ವೀರಶೈವ ಲಿಂಗಾಯತರನ್ನು ಓಲೈಸಲು ಇರುವ ಅವಕಾಶಗಳ ಬಗ್ಗೆಯೂ ಪಕ್ಷ ಮತ್ತೆ ಮತ್ತೆ ಚರ್ಚೆ ನಡೆಸಿದೆ. ಕಾರ್ಯಾಧ್ಯಕ್ಷ ಸ್ಥಾನ ಎರಡು ಸಂಖ್ಯೆಗೆ ಸೀಮಿತಗೊಳಿಸಿದರೆ ಪ್ರಚಾರ ಸಮಿತಿ ಮತ್ತು ಸಮನ್ವಯ ಸಮಿತಿ ಹುದ್ದೆಯನ್ನು ಉತ್ತರ ಕರ್ನಾಟಕ, ವೀರಶೈವ ಲಿಂಗಾಯತರಿಗೆ ನೀಡುವ ಬಗ್ಗೆ ದೆಹಲಿ ನಾಯಕರು ಅಭಿಪ್ರಾಯ ಸಂಗ್ರಹಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ದೆಹಲಿ ಪೊಲೀಸರಿಗೆ ಡಿಕೆಶಿ ಧನ್ಯವಾದ
ದೆಹಲಿಯ ತುಘಲಕ್ ಪೊಲೀಸ್ ಠಾಣೆ ಪಿಎಸ್​ಐ ಗೋವಿಂದ್ ಚೌಹಾಣ್ ಹಾಗೂ ಖಾನ್ ಮಾರ್ಕೆಟ್ ಠಾಣೆಯ ಸುನೀಲ್​ಕುಮಾರ್​ರನ್ನು ಭಾನುವಾರ ಭೇಟಿ ಮಾಡಿದ ಡಿ.ಕೆ. ಶಿವಕುಮಾರ್ ಧನ್ಯವಾದ ಅರ್ಪಿಸಿದರು. ಐಟಿ ವಿಚಾರಣೆ ಸಂದರ್ಭ 13 ದಿನ ತುಘಲಕ್ ಠಾಣೆಯಲ್ಲಿದ್ದ ವೇಳೆ ನನಗೆ ನೈತಿಕ ಬೆಂಬಲ ನೀಡಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದೆ ಎಂದು ಡಿಕೆಶಿ ತಿಳಿಸಿದ್ದಾರೆ.
ಖರ್ಗೆ-ಸಿದ್ದು ಟೀ ಪಾರ್ಟಿ
ಮಹತ್ವದ ಬೆಳವಣಿಗೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಟ್ಟಿಗೆ ಹೋಟೆಲ್​ಗೆ ತೆರಳಿ ಚಹಾ ಸೇವಿಸಿ ಚರ್ಚೆ ನಡೆಸಿದರು. ಮೂಲ ಕಾಂಗ್ರೆಸ್ ನಾಯಕರಲ್ಲಿ ಗುರುತಿಸಿಕೊಂಡಿರುವ ಖರ್ಗೆ ಹಾಗೂ ಪ್ರತ್ಯೇಕವಾಗಿ ಕಾಣಿಸಿಕೊಳ್ಳುವ ಸಿದ್ದರಾಮಯ್ಯ ಒಂದೆಡೆ ಸೇರುವ ಮೂಲಕ ಚರ್ಚೆಗೂ ಕಾರಣರಾದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಸರತ್ತು ನಡೆದಿರುವಾಗ ಇಬ್ಬರೂ ನಾಯಕರ ಮಾತುಕತೆ ಡಿ.ಕೆ.ಶಿವಕುಮಾರ್ ಕೇಂದ್ರಿತವೇ? ಪ್ರತಿಪಕ್ಷ-ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕಗೊಳಿಸುವ ವಿಚಾರವೇ? ಎಂಬುದು ಕುತೂಹಲದ ಸಂಗತಿ. ಖರ್ಗೆ ರಾಜ್ಯಸಭೆ ಪ್ರವೇಶದ ಬಗ್ಗೆ ವಿಚಾರ ವಿನಿಮಯ ನಡೆಯಿತೆನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 10 =
Remember me
