ಬೆಂಗಳೂರು:ಚುನಾವಣೆಗೆ ಮುನ್ನ ಪಕ್ಷಕ್ಕಾಗಿರುವ ಹಿನ್ನಡೆಗಳನ್ನು ಸರಿಪಡಿಸಿಕೊಳ್ಳಬೇಕು, ಅಸಮಾಧಾನಗಳನ್ನು ತಣಿಸಬೇಕು, ಸಾಧ್ಯವಾದಷ್ಟು ಕಡಿಮೆ ದೋಷವನ್ನಿಟ್ಟು ಕೊಂಡು ಚುನಾವಣೆಗೆ ಹೋಗಬೇಕೆಂಬ ಕಾಂಗ್ರೆಸ್ ತಂತ್ರಗಾರಿಕೆ ಭಾಗವಾಗಿ, ಇದೀಗ ಮುನಿಸಿಕೊಂಡವರಿಗೆ ಪಕ್ಷದಲ್ಲಿ ಅವಕಾಶ ಕೊಡುವ ಪ್ರಯತ್ನ ನಡೆದಿದೆ. ರಾಜ್ಯದಲ್ಲಿ ಪಕ್ಷದ ನಿರ್ಧಾರಗಳಿಗೆ ಅಥವಾ ಬೇರೆ ಬೇರೆ ಕಾರಣಕ್ಕೆ ಬೇಸರಗೊಂಡವರಲ್ಲಿ ಪ್ರಮುಖರಾದವರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಚರ್ಚೆ ನಡೆಸಿದೆ. ಈ ಹಿಂದೆ ಸಂಸದರು, ಸಚಿವರಾಗಿದ್ದವರು, ಪ್ರಮುಖ ಜವಾಬ್ದಾರಿಯಲ್ಲಿದ್ದವರು ಈಗಲೇ ಪ್ರಭಾವಿ ಎನಿಸಿಕೊಂಡಿದ್ದರೆ ಅವರನ್ನು ಕರೆದು ಮಾತನಾಡಿ ಮನವೊಲಿಸಲು ಉದ್ದೇಶಿಸಲಾಗಿದೆ.
ಚುನಾವಣೆ ವೇಳೆ ಜಾತಿ ಲೆಕ್ಕಾಚಾರ ಹೆಚ್ಚು ಕೆಲಸ ಮಾಡುತ್ತದೆ. ಪ್ರಭಾವಿ ಎನಿಸಿಕೊಂಡವರನ್ನು ಈ ಸಂದರ್ಭದಲ್ಲಿ ಕಡೆಗಣಿಸಿದರೆ ಪರಿಣಾಮ ಬೀರಬಹುದು. ಒಂದು ಕ್ಷೇತ್ರದ ಹೊರತು ಬೇರೆ ಬೇರೆ ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರಬಹುದೆಂಬ ದೂರಾಲೋಚನೆಯಲ್ಲಿ ಪಕ್ಷದ ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸಿದೆ. ಪಕ್ಷದ ಬಗ್ಗೆ ಮುನಿಸಿಕೊಂಡವರ ಪಟ್ಟಿಯಲ್ಲಿ ಐದಕ್ಕಿಂತ ಹೆಚ್ಚು ಮಂದಿ ಪ್ರಭಾವಿಗಳಿದ್ದು, ಪ್ರದೇಶ ಅಥವಾ ಜಾತಿ ಕಾರಣದಿಂದ ಅವರನ್ನು ಕಡೆಗಣಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಒಂದು ವೇಳೆ ಮನವೊಲಿಕೆ ತಡವಾದರೆ ನಕಾರಾತ್ಮಕ ಅಭಿಪ್ರಾಯ ಹರಡುವ ಸಾಧ್ಯತೆ ಇದೆ. ಹೀಗಾಗಿ ಆದ್ಯತೆ ಮೇಲೆ ಅವಕಾಶ ನೀಡುವ ಬಗ್ಗೆ ಪಕ್ಷದಲ್ಲಿ ತೀರ್ವನವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೇಂದ್ರದ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ ಹಾಗೂ ಮಾಜಿ ಸಚಿವ ಎಸ್.ಆರ್.ಪಾಟೀಲ್ ಈ ಪಟ್ಟಿಯಲ್ಲಿರುವ ಪ್ರಮುಖ ಹೆಸರುಗಳು. ಕೋಲಾರದಲ್ಲಿ ರಮೇಶ್​ಕುಮಾರ್ ಕಾರಣದಿಂದ ಮುನಿಯಪ್ಪ ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಅಸಮಾಧಾನವನ್ನು ಸೋನಿಯಾ ಗಾಂಧಿ ಅವರಿಗೂ ಮುಟ್ಟಿಸಿದ್ದಾರೆ. ಹೀಗಾಗಿ ಮುನಿಯಪ್ಪರನ್ನು ಕಡೆಗಣಿಸಿದರೆ ಕೋಲಾರ ಜಿಲ್ಲೆಯಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಬಹುದೆಂದು ಅವರಿಗೆ ದಕ್ಷಿಣ ಭಾರತದ ಒಂದು ರಾಜ್ಯದ ಸ್ವತಂತ್ರ ಉಸ್ತುವಾರಿ ಕೊಡಲು ಪಕ್ಷ ಬಯಸಿದೆ. ಈ ಬಗ್ಗೆ ಶೀಘ್ರವೇ ಆದೇಶ ಹೊರಬೀಳಲಿದೆ. ಎಸ್.ಆರ್.ಪಾಟೀಲ್ ಕೂಡ ಗುಡುಗುತ್ತಲೇ ಇದ್ದು, ಬಾಗಲಕೋಟೆ ಭಾಗದಲ್ಲಿ ಅವರ ನಾಯಕತ್ವದ ಛಾಯೆ ಇದೆ. ಅವರ ಮನವೊಲಿಸಲು ಪಕ್ಷ ಬಯಸಿದೆ. ಅವರಿಗೂ ಸೂಕ್ತ ಜವಾಬ್ದಾರಿ ನೀಡಲಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ನಾಯಕರ ಕುರಿತು ದೆಹಲಿಯಲ್ಲಿ ಚರ್ಚೆ ನಡೆಸಿದ್ದರೆಂದು ಗೊತ್ತಾಗಿದೆ. ಇವರೆಲ್ಲ ಪಕ್ಷಕ್ಕೆ ದುಡಿದವರು, ಇತ್ತೀಚೆಗೆ ಕೈಗೊಂಡ ನಿರ್ಣಯಗಳಿಂದ ಬೇಸರಗೊಂಡಿದ್ದು, ಅವರಿಗೆ ಪಕ್ಷದಲ್ಲಿ ಸೂಕ್ತ ಅವಕಾಶ ಕೊಡದೆ ಹೋದರೆ ಕಾರ್ಯಕರ್ತರಿಗೆ, ಪ್ರಬಲ ಸಮುದಾಯಕ್ಕೆ ಬೇರೆ ಸಂದೇಶ ಕಳಿಸಿದಂತಾಗುತ್ತದೆ ಎಂದು ವಿವರಣೆ ನೀಡಿದ್ದರೆನ್ನಲಾಗಿದೆ.
ಬೆಂಗಳೂರು:ಪ್ರತ್ಯೇಕ ಧರ್ಮ ವಿಚಾರವಾಗಿ ಸ್ವಾಮೀಜಿಗಳು ನೀಡಿದ ಹೇಳಿಕೆ ಮತ್ತು ನಂತರದ ಬೆಳವಣಿಗೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಳಿವು ನೀಡಿದ್ದಾರೆ. ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಹಾಗೂ ಸ್ವಾಮೀಜಿ ಅವರ ನಡುವೆ ಆದ ಸಂಭಾಷಣೆ ವಿಚಾರ ತಿಳಿದಿಲ್ಲ. ನಾನು ಆ ಸಮಯದಲ್ಲಿ ಇರಲಿಲ್ಲ. ಈ ಬಗ್ಗೆ ನನಗೆ ಯಾರೂ ತಿಳಿಸಿಲ್ಲ. ಮಾಧ್ಯಮಗಳ ಮಾಹಿತಿ ಅಷ್ಟೇ ನನ್ನ ಬಳಿ ಇದೆ. ಮುಂದಿನ ದಿನಗಳಲ್ಲಿ ನಾವು ಸಭೆ ಕರೆದಾಗ ಈ ವಿಚಾರವಾಗಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು. ಸಿದ್ದರಾಮಯ್ಯ ಮಾಂಸ ಸೇವಿಸಿ ದೇವಾಲಯಕ್ಕೆ ತೆರಳಿದ ವಿಚಾರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಈ ವಿಚಾರವಾಗಿ ನೀವು ಸಿದ್ದರಾಮಯ್ಯ ಅವರ ಬಳಿ ಮಾತನಾಡಬೇಕು ಎಂದರು. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆ ಮಾಹಿತಿಯನ್ನು ಎಐಸಿಸಿ ಪ್ರಕಟಿಸಲಿದೆ ಎಂದರು.
ಮೈಸೂರು:ಇಲ್ಲಿನ ಸಾವರ್ಕರ್ ಪ್ರತಿಷ್ಠಾನ ವತಿಯಿಂದ ಸಾವರ್ಕರ್ ರಥಯಾತ್ರೆಯನ್ನು ಆ.23ರಿಂದ 30ರವರೆಗೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. 23ರ ಬೆಳಗ್ಗೆ 11ಕ್ಕೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ರಥಯಾತ್ರೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡುವರು ಎಂದು ಸಂಘದ ಅಧ್ಯಕ್ಷೆ ಯಶಸ್ವಿನಿ ತಿಳಿಸಿದ್ದಾರೆ. 24ರಂದು ಮೈಸೂರು ಗ್ರಾಮಾಂತರ ಪ್ರದೇಶದಲ್ಲಿ ರಥಯಾತ್ರೆ ಸಂಚರಿಸಲಿದ್ದು, ಜಯಪುರ, ಹಂಪಾಪುರ, ಎಚ್.ಡಿ.ಕೋಟೆ, ಸರಗೂರು ಭಾಗಗಳಲ್ಲಿ ಸಾಗಲಿದೆ. ಸಾವರ್ಕರ್ ಜೀವನ ಚರಿತ್ರೆ ಮತ್ತು ಹೋರಾಟವನ್ನು ಜನರಿಗೆ ತಿಳಿಸಿಕೊಡಲಾಗುವುದು, ಮಂಡ್ಯ, ಚಾಮರಾಜನಗರ ಜಿಲ್ಲೆಯಲ್ಲೂ ಯಾತ್ರೆ ಸಾಗಲಿದೆ ಎಂದರು.
ಬೆಂಗಳೂರು:ರಾಜ್ಯಾದ್ಯಂತ ವೀರ ಸಾವರ್ಕರ್ ವಿವಾದ ತಾರಕಕ್ಕೆ ಏರಿರುವ ಬೆನ್ನಲ್ಲೇ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ ರಾತ್ರೋರಾತ್ರಿ ಸಾವರ್ಕರ್ ಫೋಟೋ ರಾರಾಜಿಸಿದೆ! ಭಾನುವಾರ ರಾತ್ರಿಯೇ ಕಾಂಗ್ರೆಸ್ ಕಚೇರಿ ಕಟ್ಟಡ, ಬಾಗಿಲು, ಕಿಟಕಿ ಹಾಗೂ ಬೋರ್ಡ್​ಗೆ ಸಾವರ್ಕರ್ ಫೋಟೋ ಅಂಟಿಸಲಾಗಿದೆ. ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ್ದು ನಾವು ಮತ್ತು ನಮ್ಮ ಕಾರ್ಯಕರ್ತರು. ಅದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್​ನವರು ಸಾವರ್ಕರ್ ವಿಚಾರದಲ್ಲಿ ಪದೇಪದೆ ವಿವಾದ ಸೃಷ್ಟಿಸುತ್ತಿದ್ದಾರೆ. ಇದನ್ನು ನಿಲ್ಲಿಸದೆ ಹೋದರೆ ಮನೆ ಮನೆಗೆ ಫೋಟೋ ಅಂಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಘಟನೆ ಖಂಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಮ್ಮ ಕಾರ್ಯಕರ್ತರು ಮಲಗಿಲ್ಲ ಎಚ್ಚರವಿದ್ದಾರೆ. ಇದಕ್ಕೆ ಉತ್ತರ ಕೊಡಲು ನಮಗೂ ಬರುತ್ತೆ ಎಂದು ಕಿಡಿಕಾರಿದ್ದಾರೆ.
ರಾಜ್ಯಾದ್ಯಂತ ಗಣೇಶ ಮಂಟಪಗಳಲ್ಲಿ ಸಾವರ್ಕರ್ ಭಾವಚಿತ್ರಗಳನ್ನು ಒಳಗೊಂಡಿರುವ ಬ್ಯಾನರ್ ಹಾಕಲಾಗುವುದು. ಅದಕ್ಕಾಗಿ ಪ್ರತಿ ಮಂಡಳಿಗೆ 10 ಸಾವಿರ ರೂಪಾಯಿ ನೀಡಲು ನಿರ್ಧರಿಸಿದ್ದೇವೆ.
|ಪ್ರಮೋದ್ ಮುತಾಲಿಕ್ಶ್ರೀರಾಮ ಸೇನೆ ಅಧ್ಯಕ್ಷ
ಕೊಡಗಿಗೆ ಟಿಪ್ಪು ಬಂದಾಗಲೇ ಕೊಡವರು ಹೆದರಲಿಲ್ಲ. ಇನ್ನು ಸಿದ್ದು ಸುಲ್ತಾನಾ ಬಂದರೆ ಹೆದರು ತ್ತೇವಾ? 2017ರಲ್ಲಿ ಮಾಂಸ ತಿಂದು ಅಂಬಾರಿ ಮೇಲಿದ್ದ ಶ್ರೀಚಾಮುಂಡೇಶ್ವರಿಗೆ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿ ದಸರಾ ಜಂಬೂಸವಾರಿಗೆ ಚಾಲನೆ ನೀಡಿದ್ದರು. ಇದಕ್ಕೆ ನಾನೇ ಸಾಕ್ಷಿ.
|ಪ್ರತಾಪ್ ಸಿಂಹಸಂಸದ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + eleven =
Remember me
