ಉಪನಗರ ರೈಲು ಯೋಜನೆ ಜಾರಿಗೆ ಆರಂಭಿಕ ಹಂತದ ಪ್ರಕ್ರಿಯೆಗಳು ಶುರುವಾಗಿವೆ. ಅದಕ್ಕೂ ಮುನ್ನವೇ ಯೋಜನೆಯಿಂದ ಬರುವ ಆದಾಯದ ಬಗ್ಗೆ ಲೆಕ್ಕ ಹಾಕಲಾಗಿದೆ. ಅದರಂತೆ ರೈಲು ಸೇವೆ ಹೊರತುಪಡಿಸಿ ವಾಣಿಜ್ಯ ಚಟುವಟಿಕೆಗಳಿಂದಲೇ 97.16 ಕೋಟಿ ರೂ. ಆದಾಯ ಗಳಿಸುವ ನಿರೀಕ್ಷೆ ಹೊಂದಲಾಗಿದೆ.
ಉಪನಗರ ರೈಲು ಯೋಜನೆ ಜಾರಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡುವುದು ಬಾಕಿ ಉಳಿದಿದೆ. ಅದಕ್ಕೂ ಮುನ್ನ ಯೋಜನೆಗೆ ಅಗತ್ಯವಿರುವ ಭೂಮಿಯ ಸರ್ವೆ, ರೈಲು ಮಾರ್ಗ ಸಾಗುವ ಸ್ಥಳಗಳಲ್ಲಿರುವ ವಿದ್ಯುತ್ ಕೇಬಲ್, ಒಎಫ್​ಸಿ, ಒಳಚರಂಡಿ ಪೈಪ್, ನೀರಿನ ಪೈಪ್ ಸೇರಿ ಇನ್ನಿತರ ಯುಟಿಲಿಟಿಗಳ ಪತ್ತೆಗೂ ಟೆಂಡರ್ ಆಹ್ವಾನಿಸಲಾಗಿದೆ.
ಅದರ ಜತೆಗೆ ಯೋಜನೆ ಕುರಿತಂತೆ ಸಿದ್ಧಪಡಿಸಲಾಗಿರುವ ವಿವರ ಯೋಜನಾ ವರದಿಯಲ್ಲಿ ಆದಾಯದ ಬಗ್ಗೆಯೂ ಲೆಕ್ಕಾಚಾರ ಹಾಕಲಾಗಿದೆ. ಅದರಲ್ಲೂ 2025ರಲ್ಲಿ ಯೋಜನೆ ಅನುಷ್ಠಾನಗೊಂಡರೆ ಸಾರ್ವಜನಿಕ ಸೇವೆ ಹೊರತುಪಡಿಸಿ ವಾಣಿಜ್ಯ ಚಟುವಟಿಕೆಗಳಿಂದ ಎಷ್ಟು ಆದಾಯ ಗಳಿಸಬಹುದು ಎಂಬುದನ್ನು ತಿಳಿಸಲಾಗಿದೆ.
97.16 ಕೋಟಿ ರೂ. ವಾರ್ಷಿಕ ಆದಾಯ:ವರದಿಯಲ್ಲಿರುವಂತೆ ಚಿಲ್ಲರೆ ಅಂಗಡಿಗಳನ್ನು ನಿರ್ವಿುಸುವುದು, ರೈಲು ನಿಲ್ದಾಣಗಳ ಹೆಸರುಗಳ ಮಾರಾಟ, ನಿಲ್ದಾಣ ಮತ್ತು ರೈಲುಗಳಲ್ಲಿ ಜಾಹೀರಾತು ಫಲಕ ಅಳವಡಿಕೆ ಮತ್ತು ರೈಲು ಮೇಲ್ಸೇತು ವೆಗಳಲ್ಲಿ ಜಾಹೀರಾತು ಅಳವಡಿಕೆಗೆ ಅವಕಾಶ ನೀಡಲು ಪ್ರಸ್ತಾಪಿಸಲಾಗಿದೆ. ಅದು ಕೂಡ 2025ರ ನಂತರ ಎಂದು ತಿಳಿಸಲಾಗಿದೆ. ಆ ಮೂಲಗಳಿಂದ ವಾರ್ಷಿಕ 97.16 ಕೋಟಿ ರೂ. ಆದಾಯಗಳಿಸಬಹುದು ಎಂದು ಉಲ್ಲೇಖಿಸಲಾಗಿದೆ.
9.84 ಲಕ್ಷ ಟ್ರಿಪ್​ಗಳು:ವಾಣಿಜ್ಯ ಮತ್ತು ಜಾಹೀರಾತು ಆದಾಯದ ಜತೆಗೆ ರೈಲು ಸೇವೆ ಕುರಿತಂತೆಯೂ ತಿಳಿಸಲಾಗಿದೆ. ಅದರಂತೆ 2025ರಲ್ಲಿ ಮೊದಲಿಗೆ 9,84,374 ಟ್ರಿಪ್ ರೈಲುಗಳ ಸಂಚಾರವಿರಲಿದೆ. ಅದೇ 2031ಕ್ಕೆ 13.41 ಮತ್ತು 2041ಕ್ಕೆ 17.60 ಲಕ್ಷಕ್ಕೆ ಟ್ರಿಪ್​ಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ. 2025ರಲ್ಲಿ 25 ಲಕ್ಷಕ್ಕೂ ಹೆಚ್ಚಿನ ಜನರಿಗೆ ಸಾರಿಗೆ ಸೇವೆ ನೀಡಲು ನಿರ್ಧರಿಸಲಾಗಿದೆ.
ಮೆಟ್ರೋ-ಬಸ್​ಗಳಿಗೆ ಸಂಪರ್ಕ: ಯೋಜನೆಯಲ್ಲಿರುವಂತೆ 6 ಇಂಟರ್ ಚೇಂಜ್ ನಿಲ್ದಾಣಗಳು ಮೆಟ್ರೋ ರೈಲು ಮತ್ತು ಬಸ್​ಗಳಿಗೆ ಸಂಪರ್ಕ ಕಲ್ಪಿಸುವಂತೆ ನಿರ್ವಿುಸಲಾಗುತ್ತದೆ. ಕೆಂಗೇರಿ ನಿಲ್ದಾಣ, ಬೆಂಗಳೂರು ನಗರ ನಿಲ್ದಾಣ, ಬೆಂಗಳೂರು ದಂಡು ನಿಲ್ದಾಣಗಳು ರೈಲು-ಮೆಟ್ರೋಗಳ ನಡುವೆ, ಲೊಟ್ಟೆಗೊಲ್ಲಹಳ್ಳಿ ಮತ್ತು ಮುತ್ಯಾಲನಗರ ನಿಲ್ದಾಣಗಳು ಉಪನಗರ ರೈಲು ಮತ್ತು ಸಾಮಾನ್ಯ ರೈಲಿನ ಜತೆಗೆ ಹಾಗೂ ಚಿಕ್ಕಬಾಣಾವರ ನಿಲ್ದಾಣ ರೈಲು-ಬಸ್ ನಿಲ್ದಾಣಕ್ಕೆ ಸಂರ್ಪಸುವಂತೆ ನಿರ್ವಿುಸಲಾಗುತ್ತಿದೆ. ಆ ಮೂಲಕ ಸಮೂಹ ಸಾರಿಗೆ ಬಳಕೆ ಇನ್ನಷ್ಟು ಉತ್ತಮವಾಗಿಸಲು ಕ್ರಮವಹಿಸಲಾಗುತ್ತದೆ.
ವಿಮಾನ ನಿಲ್ದಾಣಕ್ಕೂ ಸಂಪರ್ಕ
ಮೆಟ್ರೋ ರೈಲು, ಬಸ್​ಗಳ ಜತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂರ್ಪಸುವಂತೆ ಉಪನಗರ ರೈಲು ಮಾರ್ಗ ನಿರ್ವಿುಸಲಾಗುತ್ತದೆ. ಕೆಎಸ್​ಆರ್ ಬೆಂಗಳೂರು ನಗರ ನಿಲ್ದಾಣದಿಂದ ದೇವನಹಳ್ಳಿ ನಿಲ್ದಾಣ ಮಾರ್ಗವು ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ. ಅದರಂತೆ ವಿಮಾನನಿಲ್ದಾಣ ಮಾರ್ಗಕ್ಕಾಗಿ 251.90 ಕೋಟಿ ರೂ. ವ್ಯಯಿಸಬೇಕಿದ್ದು, 15.96 ಎಕರೆ ಜಾಗದ ಅವಶ್ಯಕತೆಯಿದೆ.
ಅಲ್ಲದೆ, ವಿಮಾನನಿಲ್ದಾಣಕ್ಕೆ 5.5 ಕಿ.ಮೀ. ಮಾರ್ಗ ನಿರ್ವಿುಸಲಾಗುತ್ತದೆ. ಅದರಲ್ಲಿ 5 ಕಿ.ಮೀ. ನೆಲಮಟ್ಟದ ಮಾರ್ಗವಾದರೆ, 0.50 ಕಿ.ಮೀ. ಎಲಿವೇಟೆಡ್ ಮಾರ್ಗವಾಗಲಿದೆ. ಅಲ್ಲದೆ, ವಿಮಾನನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿ ಉಪನಗರ ರೈಲು ನಿಲ್ದಾಣ ನಿರ್ವಿುಸಲಾಗುತ್ತದೆ.
ಉಪನಗರ ರೈಲು ಯೋಜನೆ ಕಾರಿಡಾರ್​ಗಳು
| ಗಿರೀಶ್ ಗರಗ ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 12 =
Remember me
