ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಯಾವುದೇ ಕಟ್ಟಡ ಕಾರ್ಯಾಚರಣೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಎನ್​ಒಸಿ ಪಡೆಯಲೇಬೇಕು. ಅದಕ್ಕಾಗಿ ನಿಗದಿತ ಶುಲ್ಕವಿದೆ. ಇಲಾಖೆಯ ತೆರಿಗೆಯೇತರ ಆದಾಯದ ದರಗಳನ್ನು ವೆಚ್ಚದ ಹಣದುಬ್ಬರ ಸೂಚ್ಯಂಕ (ಕಾಸ್ಟ್ ಇನ್​ಫ್ಲೇಶನ್ ಇಂಡೆಕ್ಸ್) ಪ್ರಕಾರ ಆರ್ಥಿಕ ಇಲಾಖೆ ಸಹಮತದೊಂದಿಗೆ ಈಗಾಗಲೇ ಚಾಲ್ತಿಯಲ್ಲಿರುವ ದರ ಪರಿಷ್ಕರಿಸಿರುವುದಾಗಿ ಸರ್ಕಾರ ಸಮರ್ಥಿಸಿಕೊಂಡಿದೆ. ಬಹುಮಹಡಿ ವಸತಿ ಕಟ್ಟಡಗಳಿಗೆ ಸದ್ಯ ಪ್ರತಿನಿರ್ವಿುತ ಪ್ರದೇಶದ (ಸೂಪರ್ ಬಿಲ್ಟ್ ಅಪ್ ಏರಿಯಾ) ಚದರ ಮೀಟರ್​ಗೆ 35 ರೂ. ಅಥವಾ 2.50 ಲಕ್ಷ ರೂ. (ಯಾವುದು ಹೆಚ್ಚಿರುತ್ತದೆ ಅದು ಪಾವತಿಸಬೇಕು) ಇತ್ತು.
ಪರಿಷ್ಕೃತ ದರವನ್ನು ಚದರ ಮೀಟರ್​ಗೆ 60 ರೂ. ಅಥವಾ 3 ಲಕ್ಷ ರೂ.ಗೆ ಏರಿಸಲಾಗಿದೆ. ಅಂದರೆ ಶೇಕಡಾವಾರು ಶೇ.71.42 ಜಾಸ್ತಿಯಾಗಿದೆ. 2 ವರ್ಷಕೊಮ್ಮೆ ಹೆಚ್ಚಿಸಲು ಪ್ರಸ್ತಾವನೆ: ಇದೇ ವೇಳೆ ಎನ್​ಒಸಿ ಶುಲ್ಕವನ್ನು ಪ್ರತಿ ಎರಡು ವರ್ಷಕೊಮ್ಮೆ ಹೆಚ್ಚಿಸಲು ಹೊಸದಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ವಸತಿ ಕಟ್ಟಡಗಳಿಗೆ 5000 ರೂ., ಹೋಟೆಲ್, ಆಸ್ಪತ್ರೆ, ಕಚೇರಿ, ಕೈಗಾರಿಕೆಗಳಿಗೆ 10 ಸಾವಿರ ರೂ. ಹಾಗೂ ಶೈಕ್ಷಣಿಕ ಕಟ್ಟಡಗಳಿಗೆ 1000 ರೂ. ಏರಿಸಬೇಕು ಎಂದು ಪರಿಷ್ಕೃತ ದರದ ಪ್ರಸ್ತಾವನೆ ರೂಪಿಸಲಾಗಿದೆ.
ಎಷ್ಟಿತ್ತು? ಎಷ್ಟಾಯ್ತು?
ಶೈಕ್ಷಣಿಕ ಕಟ್ಟಡಕ್ಕೆಷ್ಟು?
ಸಲಹಾ ಪತ್ರದ ಶುಲ್ಕವೂ ಹೆಚ್ಚಳ
ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿರುವ ಬಹುಮಹಡಿ ಕಟ್ಟಡಗಳಲ್ಲದ ಹೋಟೆಲ್, ಆಸ್ಪತ್ರೆ, ಕೈಗಾರಿಕಾ ಕಚೇರಿ, ಶಾಲಾ-ಕಾಲೇಜು ಹಾಗೂ ಶೈಕ್ಷಣಿಕ ಕಟ್ಟಡಗಳಲ್ಲಿ ಅಗ್ನಿಶಾಮಕ ವಿಧಾನಗಳ ಬಗ್ಗೆ ಸಲಹಾ ಪತ್ರ ನೀಡಲು ನಿಗದಿಯಾಗಿದ್ದ ಶುಲ್ಕವೂ ಪರಿಷ್ಕೃತಗೊಂಡಿದೆ. ಅದರಂತೆ ವಸತಿ ಕಟ್ಟಡಕ್ಕೆ ಸದ್ಯ -ಠಿ;50 ಸಾವಿರ ಇದ್ದು, ಅದನ್ನು -ಠಿ;55 ಸಾವಿರಕ್ಕೆ (ಶೇ.10) ಏರಿಸಲಾಗಿದೆ. ಹೋಟೆಲ್, ಆಸ್ಪತ್ರೆ, ಕೈಗಾರಿಕಾ ಕಚೇರಿಗೆ 50 ಸಾವಿರ ರೂ.ನಿಂದ 1 ಲಕ್ಷ ರೂ.ಗೆ ಏರಿಸಲಾಗಿದೆ. ಅಂದರೆ ಚಾಲ್ತಿಯಲ್ಲಿರುವುದಕ್ಕಿಂತ ಶೇ.100 ಜಾಸ್ತಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seven =
Remember me
