ಬೆಂಗಳೂರು:ರಾಜ್ಯದಲ್ಲಿ ಕರೊನಾ ಸೋಕಿತರ ಸಂಖ್ಯೆ ಇಂದು ಮತ್ತೆ 6 ಸಾವಿರದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ ಸೋಂಕಿಗೆ ಒಳಗಾದವರು 6,257. ನಿನ್ನೆ ಈ ಸಂಖ್ಯೆ 4,267 ಆಗಿತ್ತು. ಆದರೆ, ಸಂತೋಷದ ಸಂಗತಿ ಎಂದರೆ ಇಂದೂ ಕೂಡ ಸೋಂಕಿಗೆ ಒಳಗಾದವರಿಗಿಂತ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದವರ ಸಂಖ್ಯೆಯೇ ಹೆಚ್ಚಾಗಿದೆ.
ಕೋವಿಡ್​ನಿಂದ ಗುಣವಾದವರ ಸಂಖ್ಯೆ ನಿನ್ನೆ 5,218 ಆಗಿದ್ದರೆ, ಇಂದು ಬರೋಬ್ಬರಿ 6,473 ಮಂದಿ ಚೇತರಿಕೆ ಕಂಡಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,88,611 ತಲುಪಿದ್ದರೆ, ಚೇತರಿಕೆ ಕಂಡವರ ಸಂಖ್ಯೆ ಒಂದು ಲಕ್ಷ ದಾಟಿ 1,05,599 ಆಗಿದೆ. ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ ನಿನ್ನೆಯ 79,908ರಿಂದ ಇಂದು 79,606ಕ್ಕೆ ಇಳಿದಿದೆ.
ಇದನ್ನೂ ಓದಿ;ರಷ್ಯಾದಲ್ಲಿ ನೋಂದಣಿಯಾಯ್ತು ವಿಶ್ವದ ಪ್ರಪ್ರಥಮ ಕರೊನಾ ಲಸಿಕೆ; ಅಧ್ಯಕ್ಷ ಪುಟಿನ್​ ಮಗಳಿಗೆ ಚುಚ್ಚುಮದ್ದು ಪ್ರಯೋಗ
ನಿನ್ನೆಗೆ ಹೋಲಿಸಿದಲ್ಲಿ ಸಾವಿನ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ನಿನ್ನೆ 114 ಜನರು ಮೃತಪಟ್ಟಿದ್ದರೆ, ಇಂದು ಈ ಸಂಖ್ಯೆ 86ಕ್ಕೆ ಕುಸಿದಿದೆ. ಕೋವಿಡ್​ನಿಂದ ಮೃತಪಟ್ಟವರ ಒಟ್ಟಾರೆ ಸಂಖ್ಯೆ 3,398ಕ್ಕೆ ಹೆಚ್ಚಳವಾಗಿದೆ. ಗಂಭೀರ ಸ್ಥಿತಿಯಲ್ಲಿದ್ದು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 699.
ರಾಜಧಾನಿಯಲ್ಲಿ ಕೋವಿಡ್​ ಸಂಖ್ಯೆಯಲ್ಲಿ ನಿನ್ನೆಗೆ ಹೋಲಿಸಿದಲ್ಲಿ ಕೊಂಚ ಏರಿಕೆಯಾಗಿದೆ. ನಿನ್ನೆ ಸೋಂಕಿತರ ಸಂಖ್ಯೆ 1,243 ಆಗಿದ್ದರೆ, ಇಂದು 1,610ಕ್ಕೆ ಏರಿಕೆಯಾಗಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 77,038 ಆಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 1,508 ಆಗಿದೆ. ಒಟ್ಟಾರೆ ಗುಣವಾದವರ ಸಂಖ್ಯೆ 42,674. ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು ಕಳೆದ 24 ತಾಸುಗಳಲ್ಲಿ 17 ಜನರು ಮೃತಪಟ್ಟಿದ್ದಾರೆ. ಒಟ್ಟು ಸಾವಿಗೀಡಾದವರು ಸಂಖ್ಯೆ 1,293ಕ್ಕೆ ಏರಿದೆ.
ಜಿಲ್ಲಾವಾರು ಕೋವಿಡ್​ ಅಂಕಿ-ಅಂಶ ಇಲ್ಲಿದೆ

ರಷ್ಯಾ ಕರೊನಾ ಲಸಿಕೆ ಬಗ್ಗೆ ಜಗತ್ತಿಗೆ ಸಂಶಯ; 9 ತಿಂಗಳಲ್ಲಿ ಚುಚ್ಚುಮದ್ದು ತಯಾರಾಗಿದ್ದೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 5 =
Remember me
