ಬೆಂಗಳೂರು:ನ್ಯಾಯ ಬೆಲೆ ಅಂಗಡಿಗಳ ಪಡಿತರ ವಿತರಕರಿಗೆ ಪ್ರತಿ ಕೆಜಿ ಅಕ್ಕಿಗೆ ನೀಡುತ್ತಿರುವ ಕಮಿಷನ್ ಅನ್ನು 1.24 ರೂ. ಗಳಿಂದ 1.50 ರೂ.ಗೆ ಹೆಚ್ಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಅರಮನೆ ಮೈದಾನದಲ್ಲಿ ಗುರುವಾರ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಹಮ್ಮಿಕೊಂಡಿದ್ದ ‘ರಾಜ್ಯ ಸರ್ಕಾರಿ ಪಡಿತರ ವಿತರಕರ ಸಮಾವೇಶ ಮತ್ತು ಅನ್ನಭಾಗ್ಯ ದಶಮಾನೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಎಪಿಎಲ್, ಬಿಪಿಎಲ್ ಮತ್ತು ಅಂತ್ಯೋದಯ 1,51,71,863 ಪಡಿತರ ಕಾರ್ಡ್​ಗಳಿಗೆ 20,204 ನ್ಯಾಯಬೆಲೆ ಅಂಗಡಿಗಳು ಪಡಿತರ ವಿತರಿಸುತ್ತಿವೆ. ನಾನು ಹಳ್ಳಿಯಿಂದ ಬಂದವನಾಗಿರುವುದರಿಂದ ಪರಿಸ್ಥಿತಿ ತಿಳಿದು ನಿಮ್ಮ ಬೇಡಿಕೆ ಈಡೇರಿಸಲು ಒಪ್ಪಿದ್ದೇನೆ ಎಂದು ಹೇಳಿದರು.
ಅಕ್ಕಿ ನೀಡದವರನ್ನು ತಿರಸ್ಕರಿಸಿ:ಅನ್ನಭಾಗ್ಯ ಯೋಜನೆಗೆ ಪ್ರತಿ ವ್ಯಕ್ತಿಗೂ 10 ಕೆಜಿ ಅಕ್ಕಿ ನೀಡಲು ಕೇಂದ್ರ ಆಹಾರ ನಿಗಮದಿಂದ 2.29 ಮೆಟ್ರಿಕ್ ಟನ್ ಅಕ್ಕಿ ಕೊಡಿ ಎಂದು ಕೇಳಿಕೊಂಡೆವು. ಆರಂಭದಲ್ಲಿ ಕೊಡುತ್ತೇವೆಂದು ನಂತರ ರಾಜಕೀಯ ಮಾಡಿದರು. ಕೆಜಿಗೆ 34 ರೂ. ನೀಡುತ್ತೇವೆಂದರೂ ಕೊಡಲಿಲ್ಲ. ಬಡವರು, ಕಾರ್ವಿುಕರು, ಹಿಂದುಳಿದವರು, ದಲಿತರು, ರೈತರು ಮತ್ತು ಮಹಿಳೆಯರ ಪರವಾಗಿ ಇಲ್ಲದವರನ್ನು ಜನ ತಿರಸ್ಕರಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಅನ್ನಭಾಗ್ಯ ವಿರೋಧಿ:2013ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸಿದಾಗ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರೋಧ ವ್ಯಕ್ತಪಡಿಸಿದ್ದರು. ಅಂದು ವಿರೋಧ ಪಕ್ಷದಲ್ಲಿದ್ದ ರಾಜನಾಥ ಸಿಂಗ್, ಸುಷ್ಮಾ ಸ್ವರಾಜ್, ಮುರುಳಿ ಮನೋಹರ್ ಜೋಷಿ ಅವರು ‘ಕಾಂಗ್ರೆಸ್ ಮತಕ್ಕಾಗಿ ಯೋಜನೆ’ ಜಾರಿಗೊಳಿಸುತ್ತಿದೆ ಎಂದು ಕಾಲೆಳೆದಿದ್ದರು. ಹಾಗೆಯೇ ನಮ್ಮ ಗ್ಯಾರಂಟಿ ಜಾರಿ ಮಾಡಿದಾಗಲೂ ನರೇಂದ್ರ ಮೋದಿ ಕರ್ನಾಟಕವು ಆರ್ಥಿಕ ದಿವಾಳಿಯಾಗಲಿದೆ ಎಂದಿದ್ದರು. ನಂತರ ನಮ್ಮ ಗ್ಯಾರಂಟಿಗಳನ್ನೇ ನಕಲು ಮಾಡಿದರು. ಈಗ ಬಿಜೆಪಿಯವರು ಮೋದಿ ಗ್ಯಾರಂಟಿ ಎಂದು ಹಾದಿಬೀದಿಯಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಟೀಕಿಸಿದರು. ಗ್ಯಾರಂಟಿ ಜಾರಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಆಹಾರ ನಿಗಮ ಅಧ್ಯಕ್ಷ ಬಿ.ಜಿ. ಗೋವಿಂದಪ್ಪ ಮತ್ತು ಇಲಾಖೆ ಕಾರ್ಯದರ್ಶಿ ಎಚ್.ಜಿ. ಪ್ರಕಾಶ್ ಉಪಸ್ಥಿತರಿದ್ದರು.
ದೇಶಕ್ಕೆ ಮಾದರಿ:ಸರ್ಕಾರವು ಹಿಂದಿನ ಅವಧಿ ಮತ್ತು ಈ ಅವಧಿಯಲ್ಲಿ ದೇಶಕ್ಕೆ ಮಾದರಿ ಅನ್ನಭಾಗ್ಯ ಮತ್ತು ಪರಿಶಿಷ್ಟ ಜಾತಿ/ಪಂಗಡದವರಿಗೆ ಜನಸಂಖ್ಯೆಯ ಆಧಾರದಲ್ಲಿ ಎಸ್​ಸಿಪಿ ಟಿಎಸ್​ಪಿ ಶೇ.24.1 ಅನುದಾನ ಮೀಸಲಿಡುವ ಯೋಜನೆ ಮೂಲಕ ಬಡವರ ಪರವಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಬಣ್ಣಿಸಿದರು.
ಸಹಾಯವಾಣಿ:ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರಿಗೆ ಮೋಸವಾಗದಂತೆ ತಡೆಗಟ್ಟಲು ಜಾರಿಗೊಳಿಸುತ್ತಿರುವ ‘ಗ್ರಾಹಕ ರಕ್ಷಕ’ ವಾಹನಗಳಿಗೆ ಸಿಎಂ ಚಾಲನೆ ನೀಡಿದರು. ಪಡಿತರ ವಿತರಣೆಯಲ್ಲಿ ಮೋಸವಾಗುತ್ತಿದ್ದರೆ18005991100ಸಹಾಯವಾಣಿಗೆ ಕರೆ ಮಾಡಬಹುದು.
ಬಿಜೆಪಿಯವರು ಕಾಂಗ್ರೆಸ್​ವುುಕ್ತ ಭಾರತ ಮಾಡುತ್ತೇವೆ ಎನ್ನುತ್ತಾರೆ. ಆದರೆ, ನಾವು ರಾಜ್ಯದ ಕಡು ಬಡವರಿಗೂ ದಿನಕ್ಕೆ ಎರಡು ಹೊತ್ತಿನ ಊಟ ನೀಡುವ ಮೂಲಕ ‘ಹಸಿವುಮುಕ್ತ ಕರ್ನಾಟಕ’ ಮಾಡುತ್ತೇವೆಂದು ಭರವಸೆ ನೀಡುತ್ತಿದ್ದೇವೆ.
| ಸಿದ್ದರಾಮಯ್ಯ ಮುಖ್ಯಮಂತ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + nine =
Remember me
