ಬೆಂಗಳೂರು:ಪಾಕ್​ ಪರ ಘೋಷಣೆ ಕೂಗಿ, ಜೈಲುಪಾಲಾಗಿರುವ ಅಮೂಲ್ಯಾ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದಾಳೆ. ಬಸವೇಶ್ವರನಗರ ಠಾಣೆಯಲ್ಲಿರುವ ಅಮೂಲ್ಯಾಳನ್ನು ವಿಚಾರಣೆ ನಡೆಸುವುದು ಎಸ್​ಐಟಿ ತಂಡಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ತಿನ್ನಲು ಚಿಕನ್​ ಪಾಪ್​ಕಾರ್ನ್​, ಕುಡಿಯಲು ಕಿನ್ಲೆ ಮಿನರಲ್​ ವಾಟರ್​ ಬೇಕು ಎನ್ನುತ್ತಿದ್ದಾಳೆ. ಪೊಲೀಸರು ಏನೇ ಪ್ರಶ್ನೆ ಕೇಳಿದರೂ, ಮೊದಲು ನಾನು ಕೇಳಿದ್ದನ್ನು ತಂದುಕೊಡಿ, ಆಮೇಲೆ ಪ್ರಶ್ನೆ ಮಾಡಿ ಎಂದು ಹೇಳುತ್ತಿದ್ದಾಳೆ.ಅಷ್ಟೇ ಅಲ್ಲದೆ, ಅಮೂಲ್ಯಾ ಮಹಿಳಾ ಪೊಲೀಸ್​ ಪೇದೆಗಳಿಗೆ ಸಿಕ್ಕಾಪಟೆ ಕಿಚಾಯಿಸುತ್ತಿದ್ದಾಳೆ. ತಲೆಕೂದಲು ಉದ್ದವಾಗಿ ಬಿಟ್ಟು ಜಡೆ ಹಾಕಿಕೊಳ್ಳುವ ಮಹಿಳಾ ಪೇದೆಗಳಿಗೆ ಅಮೂಲ್ಯಾ ಹೇರ್​ಕಟ್​ ಮಾಡುವಂತೆ ಸಲಹೆ ನೀಡುತ್ತಿದ್ದಾಳೆ. ನೀವ್ಯಾಕೆ ನನ್ನ ತರಹನೇ ಕೂದಲು ಕತ್ತರಿಸಿಕೊಳ್ಳಬಾರದು ಎಂದು ಪ್ರಶ್ನೆ ಮಾಡುತ್ತಿದ್ದಾಳೆ. ಇನ್ನು ಅಮೂಲ್ಯಾ ಪಾಕಿಸ್ತಾನ ಪರ ಘೋಷಣೆ ಕೂಗಿದ ನಂತರ ಆಕೆಯ ಫ್ಯಾನ್ಸ್​ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಪಾಕಿಸ್ತಾನಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.
ಅಮೂಲ್ಯಾಳ ಫೇಸ್​ಬುಕ್​, ಟ್ವಿಟರ್​ ಅಕೌಂಟ್​ಗಳನ್ನು ಪಾಕ್​ ಪ್ರಜೆಗಳು ಫಾಲೋ ಮಾಡುತ್ತಿದ್ದಾರೆ. ಆಕೆಯ ಪೋಸ್ಟ್​ಗೆ ಪಾಕ್​ ಅಭಿಮಾನಿಗಳು ಲೈಕ್ಸ್​ ನೀಡುತ್ತಿದ್ದಾರೆ. ಅಲ್ಲದೆ, ಪಾಕಿಸ್ತಾನ ಜಿಂದಾಬಾದ್​ ಎಂದು ಕಾಮೆಂಟ್​ಗಳನ್ನು ಬರೆಯುತ್ತಿದ್ದಾರೆ.
ಫೆ.17ರಂದು ಬಿಲಾಲ್​ಬಾಘ್​ನಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯ ಫೋಟೋಕ್ಕೆ ಪಾಕಿಸ್ತಾನದ ಮೊರಾದಾಬಾದ್​ನ ಮುಮ್ತಾಜ್​ ಎಂಬಾತ ಪಾಕಿಸ್ತಾನ ಜಿಂದಾಬಾದ್​ ಎಂದು ಕಾಮೆಂಟ್​ ಹಾಕಿದ್ದಾನೆ. (ದಿಗ್ವಿಜಯ ನ್ಯೂಸ್)
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:19 + 6 =
Remember me
