ಹುಬ್ಬಳ್ಳಿ:ರಾಜ್ಯಾದ್ಯಂತ ಕರೊನಾ ಕಾಡಲಾರಂಭಿಸುತ್ತಿದ್ದಂತೆ 108 ಆಂಬುಲೆನ್ಸ್​ಗೆ ಬಹುಬೇಡಿಕೆ ಶುರುವಾಗಿದೆ. ಸೋಂಕು ಶಂಕಿತ ವ್ಯಕ್ತಿಯ ಮಾಹಿತಿಯನ್ನು 108 ದೂರವಾಣಿಗೆ ಕರೆ ಮಾಡಿ ಮಾಹಿತಿ ರವಾನಿಸುತ್ತಿದ್ದು, ಆಸ್ಪತ್ರೆಗೆ ದಾಖಲಾತಿ ಕಾರ್ಯ ಚುರುಕುಗೊಂಡಿದೆ.
ರಾಜ್ಯಾದ್ಯಂತ 108 ಆಂಬುಲೆನ್ಸ್​ಗೆ ನಿತ್ಯ ಏನಿಲ್ಲವೆಂದರೂ 30 ಸಾವಿರಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ನಿರ್ದಿಷ್ಟ ಮಾಹಿತಿ ಆಧರಿಸಿ ನಿಗದಿತ ಸ್ಥಳಕ್ಕೆ ಕಳುಹಿಸಲಾಗುತ್ತಿದೆ. ಮೊದಲೆಲ್ಲ ನಿತ್ಯ 13 ಸಾವಿರ ಕರೆಗಳು ಬರುತ್ತಿದ್ದವು. ಇವುಗಳಲ್ಲಿ 1200ಕ್ಕೂ ಹೆಚ್ಚು ಮಾತ್ರ ಅರ್ಹ ಇರುತ್ತಿದ್ದವು. ಈಗ ಅತಿ ಹೆಚ್ಚು ಕರೆಗಳು ಬರುತ್ತಿದ್ದು, ಸುಳ್ಳು ಇದ್ದರೆ ತಿರಸ್ಕರಿಸಲಾಗುತ್ತಿದೆ. ಆದರೂ 2500 ಕರೆಗಳು ಅಧಿಕೃತವಾಗಿರುತ್ತವೆ. ಬೆಂಗಳೂರಿನಲ್ಲಿ 30 ಆಂಬುಲೆನ್ಸ್ ಓಡಾಡುತ್ತಿದ್ದು, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯಲ್ಲಿ ತಲಾ 5 ವಾಹನಗಳಿವೆ. ಉಳಿದ ಜಿಲ್ಲೆಗಳಿಗೆ ಗರಿಷ್ಠ ಕ್ಷಮತೆ ಆಧರಿಸಿ 1 ಅಥವಾ 2 ಆಂಬುಲೆನ್ಸ್ ಒದಗಿಸಲಾಗುತ್ತಿದೆ. ನಿತ್ಯ 3100 ಸಿಬ್ಬಂದಿ ಹಗಲಿರಳಲು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆಂಬುಲೆನ್ಸ್​ನ ತುರ್ತು ನಿರ್ವಹಣಾ ತಂತ್ರಜ್ಞ (ಇಎಂಟಿ) ಹಾಗೂ ಪೈಲಟ್ (ಚಾಲಕ)ಗಳಿಗೆ ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್​ವೆುಂಟ್ (ಪಿಪಿಇ) ಒದಗಿಸಲಾಗಿದೆ. ಒಂದು ಸಲ ಸೋಂಕಿತ ವ್ಯಕ್ತಿಯನ್ನು ಆಂಬುಲೆನ್ಸ್ ಒಳಗಡೆ ಕರೆದುಕೊಳ್ಳುವುದಕ್ಕಿಂತ ಮುಂಚೆ ಸೋಡಿಯಂ ಹೈಡ್ರೋಕ್ಲೋರೈಟ್ ರಾಸಾಯನಿಕ ಬಳಸಲಾಗುತ್ತದೆ. ರೋಗಿಯನ್ನು ಆಸ್ಪತ್ರೆಗೆ ಕಳುಹಿಸಿದ ಮೇಲೂ ಇದನ್ನೇ ಬಳಸಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ. ಹಗಲಿರುಳು ದುಡಿಯುವ ಸಿಬ್ಬಂದಿಗೆ ಆರೋಗ್ಯ ಇಲಾಖೆ ಊಟದ ವ್ಯವಸ್ಥೆ ಕಲ್ಪಿಸಿದೆ.
ಒಂದೇ ದಿನ 14 ಪ್ರಕರಣ
ಬೆಂಗಳೂರಿನಲ್ಲಿ ಒಟ್ಟು 40 ಠಾಣೆಗಳಲ್ಲಿದ್ದು, ಠಾಣೆಗೊಂದರಂತೆ ಪೊಲೀಸ್ ಪೇದೆ, ವಾಕಿಟಾಕಿ ಹಾಗೂ ಆಯುಷ್ ವೈದ್ಯರ ತಂಡ ನಿಯೋಜಿಸಲಾಗಿದೆ. ಇದಕ್ಕೆ ಹೋಂ ಕ್ವಾರಂಟೇನ್ ಎನ್​ಫೋರ್ಸ್ ಮೆಂಟ್ ಸ್ಕಾ್ವಡ್ ಎಂದು ಹೆಸರಿಡಲಾಗಿದೆ. ರಸ್ತೆಯಲ್ಲಿ ಹೋಂ ಕ್ವಾರಂಟೇನ್ ಅಥವಾ ಶಂಕಿತ ಓಡಾಡುತ್ತಿರುವ ಮಾಹಿತಿ ಬಂದರೆ, ಆತನನ್ನು ಆಸ್ಪತ್ರೆಗೆ ತಲುಪಿಸುವುದಲ್ಲದೆ ಪ್ರಕರಣವನ್ನೂ ದಾಖಲಿಸಲಾಗುತ್ತಿದೆ. ಇದುವರೆಗೆ 40 ಕೇಸ್ ದಾಖಲಾಗಿದ್ದು, ಭಾನುವಾರ ಒಂದೇ ದಿನ 14 ಪ್ರಕರಣ ದಾಖಲಾಗಿವೆ.
ಪಾಳಿಗೆ 200ಕ್ಕಿಂತ ಹೆಚ್ಚು ಕರೆ
ಒಂದು ಪಾಳಿಗೆ ಒಬ್ಬ ವ್ಯಕ್ತಿ 200 ಕರೆ ಮಾತ್ರ ಸ್ವೀಕರಿಸಬೇಕು ಎಂಬುದಿದೆ. ಭೀತಿಯಲ್ಲಿ ಇರುವ ಅಥವಾ ಸೋಂಕಿನ ತಿಳಿವಳಿಕೆ ಇಲ್ಲದ ಜನ ಪ್ರತಿಯೊಂದಕ್ಕೂ ಕರೆ ಮಾಡುತ್ತಿದ್ದಾರೆ. ಇದರಿಂದ ಹಲವು ಸಿಬ್ಬಂದಿಗೆ ಕಿವಿ ನೋವು ಕಾಣಿಸಿಕೊಳ್ಳುತ್ತಿದೆ. ಮಾಹಿತಿ ರವಾನಿ ಸುವುದಕ್ಕಿಂತ ಮುನ್ನ ‘ನಾನೇಕೆ ಕರೆ ಮಾಡುತ್ತಿದ್ದೇನೆ’ ಎಂಬುದನ್ನು ಜನರೇ ತಿಳಿದುಕೊಂಡರೆ ಒಳ್ಳೆಯದು.
ಒಲ್ಲೆ ಎನ್ನುವವರಿಗೆ ಮನೋಸ್ಥೈರ್ಯ
ಕರೊನಾ ಶಂಕೆಯ ಕರೆ ಬರುತ್ತಿದ್ದಂತೆ ಆಂಬುಲೆನ್ಸ್ ಸಿಬ್ಬಂದಿ ಅಣಿಯಾಗಬೇಕು. ಆದರೆ ಸಿಬ್ಬಂದಿಯ ಕುಟುಂಬ ಹಿಂಜರಿಯುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಕುಟುಂಬಕ್ಕೆ ಧೈರ್ಯ, ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ.
ಆಂಬುಲೆನ್ಸ್ ಬೇಡಿಕೆ ಹೆಚ್ಚಿದ್ದು, ಬೆಂಗಳೂರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉಳಿದ ಜಿಲ್ಲೆಯಲ್ಲೂ ನಿಗಾ ಇರಲಿದೆ. ಆಂಬುಲೆನ್ಸ್ ಸಿಬ್ಬಂದಿಗೆ ಊಟ, ನೀರು, ಪಿಪಿಇ ಕಿಟ್ ವಿತರಿಸಲು ವಾಹನಗಳನ್ನು ನಿಯೋಜಿಸಲಾಗಿದೆ.
| ಡಾ.ಸ್ವತಂತ್ರಕುಮಾರ ಬಣಕಾರ ಉಪನಿರ್ದೇಶಕರು, 108 ಆಂಬುಲೆನ್ಸ್ ಸರ್ವಿಸ್ ಬೆಂಗಳೂರು
| ಮರಿದೇವ ಹೂಗಾರ
ಈ ಮರಿ ಬೆಂಗಾಲ್​ ಟೈಗರ್ ಹೆಸರು ಕೇಳಿದ್ರೆ ನೀವು ಖಂಡಿತ ಅಚ್ಚರಿ ಪಡ್ತಿರಾ!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − nine =
Remember me
