ಬೆಳಗಾವಿ:ಆಗಸ್ಟ್​ 5 ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮಂದಿರ ನಿರ್ಮಾಣದ ಶೀಲಾನ್ಯಾಸದ ಕಾರ್ಯಕ್ರಮ ದೇಶದ ಲಕ್ಷಾಂತರ ಶ್ರೀರಾಮನ ಭಕ್ತರ ಪುಣ್ಯ ದಿನವಾಗಿದೆ. ವಿಶೇಷವೆಂದರೆ ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮನ ಕಾರ್ಯಕ್ರಮಕ್ಕೂ ಬೆಳಗಾವಿಗೂ ಅವಿನಾಭಾವ ಸಂಬಂಧ ಹೊಂದಿದೆ. ರಾಮಮಂದಿರ ಹೋರಾಟದಿಂದ ಹಿಡಿದು ಶುಭಮಂಗಳ ಕಾರ್ಯ ಮೂಹೂರ್ತ ನಿಗದಿ​ ಮಾಡಿದುದ್ದಕ್ಕೂ ಬೆಳಗಾವಿಗೆ ಲಿಂಕ್​ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಶ್ರೀರಾಮನ ಕುರುಹು ಬೆಳಗಾವಿ ಜಿಲ್ಲೆಯಲ್ಲಿ ಇದೆ ಅನ್ನೊದು ಮತ್ತೊಂದು ಮಹತ್ವವಾಗಿದೆ.

ಇದನ್ನೂ ಓದಿ:ಕುಕ್ಕೆ ದೇಗುಲದ ಅರ್ಚಕರ ವೇತನ 96 ರೂ.!ದೇವಳದ ಆದಾಯ 98 ಕೋಟಿ ರೂ.; ಭಕ್ತರಿಲ್ಲದೆ ಸಂಕಷ್ಟ
ಹೌದು, ಬೆಳಗಾವಿಗೂ ಹಾಗೂ ಅಯೋಧ್ಯೆಗೂ ಅವಿನಾಭಾವ ಸಂಬಂಧ ಇದೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಹೋರಾಟಕ್ಕೆ ಬೆಳಗಾವಿಯಿಂದ 16 ಜನರು ಹೋಗಿದ್ದರು. ಬಾಬ್ರಿ ಮಸೀದಿ ಧ್ವಂಸದ ಪ್ರಕರಣದಲ್ಲಿ ಭಾಗಿಯಾಗಿದ್ದರು. ಶ್ರೀರಾಮ ಭಕ್ತರು ರಾಮಮಂದಿರ ನಿರ್ಮಾಣದ ಹೋರಾಟದಲ್ಲಿ ಭಾಗಿಯಾಗಿದ್ದರು. ಇನ್ನು ರಾಮಮಂದಿರ ನಿರ್ಮಾಣ ಶೀಲಾನ್ಯಾಸಕ್ಕೆ ಮುಹೂರ್ತ ಇಟ್ಟಿದ್ದು ಕೂಡ ಬೆಳಗಾವಿ ವಿದ್ವಾಂಸರೇ. ಬೆಳಗಾವಿಯ ವಿದ್ಯಾವಿಹಾರ ವಿದ್ಯಾಲಯ ಕುಲಪತಿ, ರಾಘವೇಂದ್ರ ಸ್ವಾಮಿ ನವ ವೃಂದಾವನದ ಮಠದ ವಿದ್ವಾಂಸ ಎನ್ ಆರ್ ವಿಜಯೇಂದ್ರ ಶರ್ಮಾ ಅವರು ಮಂದಿರ ನಿರ್ಮಾಣಕ್ಕೆ ಮುಹೂರ್ತ ಇಟ್ಟಿದ್ದು ಬೆಳಗಾವಿಗೆ ಹೆಮ್ಮೆಯ ಕಿರೀಟವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಶ್ರೀರಾಮನು ಭಕ್ತೆ ಸೇವೆ ಪಡೆದ ಇತಿಹಾಸ ಇದೆ. ಹೌದು ಬೆಳಗಾವಿಯ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಿಂದ ಮೂರು ಕಿಮೀ ದೂರದಲ್ಲಿರುವ ಶಬರಿಕೊಳ್ಳದಲ್ಲಿ ರಾಮನ ಕುರುಹು ಸಿಕ್ಕಿದೆ. ಶ್ರೀರಾಮನ ಭಕ್ತೆ ಶಬರಿ, ಶ್ರೀರಾಮನ ಬರುವಿಕೆಗಾಗಿ ಬೋರೆಹಣ್ಣಿನೊಂದಿಗೆ ಕಾದುದ್ದು ಇದೇ ಶಬರಿಕೊಳ್ಳದಲ್ಲಿ. ಶಬರಿಯ ಭಕ್ತಿಗೆ ಮೆಚ್ಚಿ ಶ್ರೀರಾಮನು ದರ್ಶನ ನೀಡಿದ್ದು ಇದೇ ಶಬರಿಕೊಳ್ಳದಲ್ಲಿ. ಇನ್ನು ರಾಮನ ಭಕ್ತೆ ಶಬರಿ ಕೂಡ ಇದೇ ಕೊಳ್ಳದಲ್ಲಿ ರಾಮನ ಸೇವೆ ಮಾಡಿದ್ದಾರೆ. ಶ್ರೀರಾಮನು ಶಬರಿಗೆ ಆಶೀರ್ವಾದ ಮಾಡಿದ್ದಾರಿಂದ ಇದನ್ನ ಶಬರಿಕೊಳ್ಳ ಎಂದೇ ಇತಿಹಾಸದ ಪುಟಗಳಲ್ಲಿ ಇದೆ.
ಇದನ್ನೂ ಓದಿ:ಗಣೇಶೋತ್ಸವಕ್ಕೂ ಕರೊನಾ ಅಡ್ಡಿ, ಮೂರ್ತಿ ತಯಾರಿಕೆಗೂ ವಿಘ್ನ
ಇಂದಿಗೂ ಶಬರಿಕೊಳ್ಳದಲ್ಲಿ ಶ್ರೀರಾಮ ಮಂದಿರ, ಶಬರಿ ದೇವಸ್ಥಾನ ಹಾಗೂ ಶಬರಿಕೊಳ್ಳ ಕಾಣಸಿಗುತ್ತದೆ. ಇನ್ನು ಶಬರಿಕೊಳ್ಳದಲ್ಲಿ ಶ್ರೀರಾಮ ಹಾಗೂ ಭಕ್ತೆ ಶಬರಿ ಪೂಜೆ ನಡೆಯುತ್ತಿದ್ದು ಪುಣ್ಯಕ್ಷೇತ್ರವಾಗಿದೆ. ಹೀಗಾಗಿ ಬೆಳಗಾಬಿ ಜಿಲ್ಲೆಗೂ ಅಯೋಧ್ಯೆ ರಾಮನ ಮಂದಿರಕ್ಕೂ ಅವಿನಾಭಾವ ಸಂಬಂಧ ಇದೆ.

ಶ್ರೀರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿತ್ತಿರುವುದು ಲಕ್ಷಾಂತರ ಹಿಂದುಗಳ ಕನಸು ನನಸಾಗಿದೆ. ಹಾಗೇ ಅಯೋಧ್ಯೆಯ ಶ್ರೀರಾಮನು ಭಕ್ತೆ ಶಬರಿಗಾಗಿ ಶಬರಿಕೊಳ್ಳಕ್ಕೆ ಬಂದು ಶಬರಿ ಸೇವೆ ಪಡೆದಿದ್ದು ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಅನ್ನೊದು ಬೆಳಗಾವಿಗರಿಗೆ ಹೆಮ್ಮೆಯ ಕಿರಿಟ ಆಗಿದೆ.(ದಿಗ್ವಿಜಯ ನ್ಯೂಸ್​)

ಕರ್ನಾಟಕದಲ್ಲೂ ಉಗ್ರಾತಂಕ, ಕಟ್ಟೆಚ್ಚರ; ರಾಮ ಮಂದಿರ ಶಿಲಾನ್ಯಾಸ ಸಂಭ್ರಮಕ್ಕೆ ಉಗ್ರರ ಕರಿನೆರಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
